More

    ಕಲ್ಕಿ, ಪುಷ್ಪ- 2ಗೆ ಕರ್ನಾಟಕದಲ್ಲಿ ಭಾರಿ ಡಿಮ್ಯಾಂಡ್! ಯಾರ ಪಾಲಾಯ್ತು ವಿತರಣೆ ಹಕ್ಕು?

    ಬೆಂಗಳೂರು: ಪ್ರಭಾಸ್ ಅಭಿನಯದ ಕಲ್ಕಿ ಎಡಿ 2898 ಮತ್ತು ಅಲ್ಲು ಅರ್ಜುನ್ ಅಭಿನಯದ ಪುಷ್ಪ 2 ಗೆ ವಿಶ್ವದ ನಾನಾ ಕಡೆ ಬೇಡಿಕೆ ಬಂದಿರುವ ಬೆನ್ನಲ್ಲೇ ಕರ್ನಾಟಕವೂ ಇದಕ್ಕೆ ಹೊರತಾಗಿಲ್ಲ. ಹಾಗಾದರೆ ಈ ಚಿತ್ರಗಳ ವಿತರಣೆ ಹಕ್ಕು ಯಾರಪಾಲಾಯ್ತು ಎಂಬುದರ ವಿವರ ನೋಡೋಣ.

    ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಭಾರಿ ಮಳೆ.. 300 ಕ್ಕೂ ಹೆಚ್ಚು ಮೃತ್ಯು

    ಈ ಹಿಂದೆ ರಾಜಮೌಳಿ ನಿರ್ದೇಶನದ ಆರ್.ಆರ್.ಆರ್ ಚಿತ್ರದ ವಿತರಣೆ ಹಕ್ಕನ್ನು 50 ಕೋಟಿ ರೂ.ನೀಡಿ ತನ್ನದಾಗಿಸಿಕೊಂಡಿದ್ದ ಕೆ.ವಿ.ಎನ್ ಸಂಸ್ಥೆ ಕಲ್ಕಿ ಎಡಿ 2898 ಚಿತ್ರದ ಹಕ್ಕುಗಳನ್ನ ಸಹ ಪಡೆದಿದೆ.

    ಹೀಗಾಗಿಯೇ ಕಲ್ಕಿ ಎಡಿ 2898 ಕರ್ನಾಟಕದಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಲಿರುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಚಿಕ್ಕ ಬಳ್ಳಾಪುರದಲ್ಲಿ 100 ಎಕರೆ ಜಾಗದಲ್ಲಿ ನಡೆದಿದ್ದ ಆರ್.ಆರ್.ಆರ್ ಜಾತ್ರೆಗೆ ಕೆವಿಎನ್ ಸಂಸ್ಥೆ ನೀಡಿದ್ದ ಸಹಕಾರ ಮತ್ತು ಸಹಯೋಗ ಕೂಡ ದೊಡ್ಡದು. ಹೀಗಾಗಿ ಕಲ್ಕಿ ಎಡಿ 2898 ಚಿತ್ರದ ಬಿಡುಗಡೆಗೆ ಮುನ್ನ ಕರ್ನಾಟಕದಲ್ಲಿ ಅದ್ಧೂರಿ ಮತ್ತು ವೈಭವೋಪೇತ ಸಮಾರಂಭವನ್ನ ಕೆವಿಎನ್ ಸಂಸ್ಥೆಯಿಂದ ನಿರೀಕ್ಷೆ ಮಾಡಬಹುದು.

    ಕಲ್ಕಿ ಎಡಿ 2898 ಚಿತ್ರದ ಬಿಡುಗಡೆಯ ನಂತರ ಕರ್ನಾಟಕದಲ್ಲಿ ಪುಷ್ಪ ಅಬ್ಬರ ಆರಂಭವಾಗಲಿದೆ. ಆಗಸ್ಟ್ 15ಕ್ಕೆ ಮುಹೂರ್ತ ನಿಗಧಿಯಾಗಿದೆ. ಹೀಗಾಗಿಯೇ ಪುಷ್ಪರಾಜ್ ನ ಮೇಲೆ ಕೂಡ ಹಣದ ಮಳೆ ಸುರಿಸಿರುವ ಎನ್ ಸಿನಿಮಾಸ್ ಕರ್ನಾಟಕದಲ್ಲಿ ಪುಷ್ಪ 2 ಚಿತ್ರದ ವಿತರಣೆ ಹಕ್ಕನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಆದರೆ ಎಷ್ಟು ಮೊತ್ತಕ್ಕೆ ವಿತರಣೆ ಹಕ್ಕು ಪಡೆಯಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ.

    ಒಟ್ಟಾರೆ ಹೇಳುವುದಾದರೆ ಪುಷ್ಪ 2 ಮತ್ತು ಕಲ್ಕಿ ಎಡಿ 2898 ಚಿತ್ರಗಳ ವಿತರಣೆ ಹಕ್ಕು ಕರ್ನಾಟಕದಲ್ಲಿ ಬಿಕರಿಯಾಗಿವೆ. ಎರಡೂ ಸಿನಿಮಾಗಳು ಕರ್ನಾಟಕದಲ್ಲಿ ಕಡಿಮೆ ಎಂದರೂ ಐವತ್ತು ಕೋಟಿ ಪ್ಲಸ್ ಹಣ ಗಳಿಸಿಯೇ ಗಳಿಸಲಿವೆ ಎನ್ನುವ ನಂಬಿಕೆ ಅನೇಕರಲ್ಲಿದೆ. ನಿಜಕ್ಕೂ ಕರುನಾಡಲ್ಲಿ ಈ ಎರಡು ಚಿತ್ರಗಳು ಎಷ್ಟು ಕೋಟಿ ಲೂಟಿ ಹೊಡೆಯಲಿವೆ ಎಂಬ ಪ್ರಶ್ನೆಗೆ ಉತ್ತರ ಸದ್ಯದಲ್ಲಿಯೇ ಸಿಗಲಿದೆ.

    ಮನೆ ಮೇಲೆ ವಿಮಾನ ಹಾರಿಹೋದ್ರೆ ಹುಷಾರ್​..ಜೀವ ಹೋಗಲೂಬಹುದು! ಇದಕ್ಕೆ ಇಲ್ಲಿದೆ ಉದಾಹರಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts