More

  ವಾಡಿಕೆಗಿಂತ ಮುನ್ನ ರಾಜ್ಯಕ್ಕೆ ಮುಂಗಾರು? ಮೇ 19ಕ್ಕೆ ಅಂಡಮಾನ್​- ನಿಕೋಬಾರ್​ ದ್ವೀಪದಿಂದ ಆರಂಭ

  ಬೆಂಗಳೂರು: ಈ ಬಾರಿ ನೈಋತ್ಯ ಮಾನ್ಸೂನ್​( ಮುಂಗಾರು ಮಳೆ) ವಾಡಿಕೆಯಂತೆ ಕರ್ನಾಟಕಕ್ಕೆ ಆಗಮಿಸುವ ಸಾಧ್ಯತೆ ಇದೆ. ಮೇ 19ರಂದು ಬಂಗಾಳಕೊಲ್ಲಿಯ ಆಗ್ನೇಯ ಭಾಗಕ್ಕೆ ಹಾಗೂ ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಕ್ಕೆ ಮಾರುತಗಳು ಆರಂಭವಾಗಲಿವೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮೂನ್ಸೂಚನೆ ಕೊಟ್ಟಿದೆ.

  ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪಕ್ಕೆ ಬರುವ ಮಾರುತಗಳು ಏಳೆಂಟು ದಿನಗಳ ಬಳಿಕ ವಾಡಿಕೆಗಿಂತ ಮುನ್ನವೇ ಕೇರಳಕ್ಕೆ ಪ್ರವೇಶಿಸಲಿವೆ. ನಂತರ, ಕೇರಳಕ್ಕೆ ಆಗಮಿಸಿರುವ ಮಾರುತಗಳು ಪ್ರಬಲವಾಗೊಂಡರೆ ಅದೇ ದಿನ ಕರ್ನಾಟಕದ ಕರಾವಳಿ ಭಾಗಗಕ್ಕೆ ಕಾಲಿಟ್ಟಲಿವೆ. ಈ ಸಂದರ್ಭದಲ್ಲಿ ಏನಾದರೂ ಚಂಡಮಾರುತ ಉಂಟಾದರೆ ಮಾರುತಗಳ ಮೇಲೆ ಪರಿಣಾಮ ಬೀರಿ ವಿಳಂಬವಾಗುತ್ತದೆ. ಮಾರುತಗಳು ಪ್ರಬಲಗೊಂಡರೆ ವಾಡಿಕೆಗಿಂತ ಮುನ್ನ ಅಥವಾ ವಾಡಿಕೆಯಂತೆ ರಾಜ್ಯಕ್ಕೆ ಮಾರುತಗಳು ಆಗಮಿಸಲಿವೆ. ಕಳೆದ ವರ್ಷ ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ “ಬಿಪಜೋರ್ಯ್​’ ಚಂಡಮಾರುತದಿಂದ ಒಂದು ವಾರ ತಡವಾಗಿ ಮಾರುತಗಳು ರಾಜ್ಯಕ್ಕೆ ಆಗಮಿಸಿತ್ತು. ಇದರಿಂದಾಗಿ ಮುಂಗಾರಿನ ಮೇಲೆ ಪರಿಣಾಮ ಬೀರಿತ್ತು.

  4 ದಿನ ಮಳೆ ಮುಂದುವರಿಕೆ
  ರಾಜ್ಯದ ಹಲವೆಡೆ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಮುಂದುವರಿಯಲಿದೆ. ಬೆಂ. ಗ್ರಾಮಾಂತರ ಹೆಸರುಟ್ಟ, ಬೆಂಗಳೂರು ನಗರದ ಎಲೆಕ್ಟ್ರಾನಿಕ್​ ಸಿಟಿ, ಮಾಧವಾರ, ಚಾಮರಾಜನಗರದ ಹರದನಹಳ್ಳಿ, ಚಿಕ್ಕಬಳ್ಳಾಪುರ ಸಿಟಿ, ಚಿಕ್ಕಮಗಳೂರಿನ ಮೂಡಗೆರೆ, ಚಿತ್ರದುರ್ಗದ ಹಿರಿಯೂರು, ದಕ್ಷಿಣ ಕನ್ನಡದ ಮಂಗಳೂರು, ದಾವಣಗೆರೆ ಸಿಟಿ, ಕೋಲಾರದ ಟಮಕಾ, ಕೊಪ್ಪಳದ ಗಂಗಾವತಿ, ಮಂಡ್ಯ, ರಾಮನಗರ, ಶಿವಮೊಗದ ಆಗುಂಬೆ, ತುಮಕೂರಿನ ಚಿಕ್ಕನಾಯಕಹಳ್ಳಿ ಹಾಗೂ ಯಾದಗಿರಿ ಸೇರಿ ಕೆಲವೆಡೆ ಸೋಮವಾರ ಮಳೆ ಬಿದ್ದಿದೆ. ಉಡುಪಿ, ದಕ್ಷಿಣ ಕನ್ನಡ,ಕೊಡಗು, ಚಿಕ್ಕಮಗಳೂರಿನಲ್ಲಿ ಮೇ 14ರಿಂದ ಮೇ 17ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್​​​ ಕೊಟ್ಟಿದೆ. ಬಾಗಲಕೋಟೆ, ಕಲಬುರಗಿ, ಯಾದಗಿರಿ, ಹಾಸನ, ಮಂಡ್ಯ, ಮೈಸೂರಿನಲ್ಲಿ ಮೇ 14ರಂದು ಯೆಲ್ಲೋ ಅಲರ್ಟ್​​​ ಇರಲಿದೆ. ಉಳಿದೆಡೆ ಮುಂದಿನ ಐದು ದಿನ ಸಾಧಾರಣ ಪ್ರಮಾಣದಲ್ಲಿ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.

  ರೇಷನ್​ ಅರ್ಜಿ ವಿಲೇಗೆ ಸದ್ಯದಲ್ಲೇ ಅನುಮತಿ

  ಮಾನ್ಸೂನ್​ ಆಗಮನ ವಿವರ
  ವರ್ಷ ದಿನಾಂಕ
  2018 ಮೇ 29
  2019 ಜೂ 8
  2020 ಜೂ 1
  2021 ಜೂ 3
  2022 ಮೇ 29
  2023 ಜೂ 8

  ಕೋಟ್​:
  ವಾಡಿಕೆಯಂತೆ ಮೇ 19ಕ್ಕೆ ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪದಿಂದ ಮುಂಗಾರು ಮಾರುತ ಆರಂಭವಾಗುವ ಸಾಧ್ಯತೆ ಇದೆ. ಈ ವೇಳೆ ಮಾರುತಗಳು ಪ್ರಬಲವಾದರೆ ತಿಂಗಳಾಂತ್ಯಕ್ಕೆ ಕೇರಳಕ್ಕೆ ಪ್ರವೇಶಿಸಲಿವೆ. ನಂತರ, ಕೇರಳಕ್ಕೆ ಬಂದಿರುವ ಮಾರುತಗಳು ಪ್ರಬಲವಾದರೆ ಅದೇ ದಿನ ಕರ್ನಾಟಕಕ್ಕೆ ಆಗಮಿಸಲಿದೆ. ಇಲ್ಲವಾದರೆ ಒಂದೆರೆಡು ದಿನ ವಿಳಂಬವಾಗಬಹುದು.
  ಡಾ.ಶ್ರೀನಿವಾಸರೆಡ್ಡಿ, ಹವಾಮಾನ ತಜ್ಞ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts