More

    ಜೇನು ದಾಳಿಯಲ್ಲಿ ವಿದ್ಯಾರ್ಥಿ ಸಾವು, ಕ್ರಿಕೆಟ್ ನೋಡಲು ಹೋಗಿದ್ದಾಗ ದಾಳಿ

    ವಿಜಯಪುರ: ಹೆಜ್ಜೇನು ದಾಳಿಯಿಂದ ಗಾಯಗೊಂಡಿದ್ದ ಶ್ರೀರಾಮ ಮಂದಿರ ಬೀದಿಯ ಭರತ್ (14) ಸೋಮವಾರ ಮೃತಪಟ್ಟಿದ್ದಾನೆ. ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಪಕ್ಕದಲ್ಲೇ ಇರುವ ಮೈದಾನದಲ್ಲಿ ಭಾನುವಾರ ಕ್ರಿಕೆಟ್ ನೋಡಲು ಹೋಗಿದ್ದಾಗ ಹೆಜ್ಜೇನುಗಳು ದಾಳಿ ಮಾಡಿದ್ದವು.

    ಅಸ್ವಸ್ಥಗೊಂಡಿದ್ದವರನ್ನು ಸರ್ಕಾರಿ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಹುಳುಗಳ ಕಡಿತಕ್ಕೆ ಒಳಗಾಗಿದ್ದ ಭರತ್ ಮೃತಪಟ್ಟಿದ್ದಾನೆ.

    ವರ್ಷದ ಹಿಂದೆ ಕೂಡ ಇಲ್ಲಿಯೇ ಜೇನುನೊಣಗಳು ದಾಳಿಗೆ 14 ವರ್ಷದ ವಿದ್ಯಾರ್ಥಿ ಮೃತಪಟ್ಟಿದ್ದ. ದಿನವೂ ಈ ಮಾರ್ಗವಾಗಿ ನೂರಾರು ವಾಹನಗಳು ದೇವನಹಳ್ಳಿ ಮತ್ತು ಬೆಂಗಳೂರಿಗೆ ಹೋಗುತ್ತವೆ. ಈ ರಸ್ತೆಯಲ್ಲಿ ಜನಸಂಚಾರವೂ ಹೆಚ್ಚಾಗಿರುತ್ತದೆ. ಆದ್ದರಿಂದ, ಸಂಬಂಧಪಟ್ಟವರು ಜೇನು ಹುಟ್ಟುಗಳನ್ನು ತೆಗೆಸಲು ಕ್ರಮ ಕೈಗೊಳ್ಳಬೇಕು ಎಂದು ಹೆಜ್ಜೇನು ದಾಳಿಯಿಂದ ಗಾಯಗೊಂಡಿರುವ ಕೊಕೊಕೋಲಾ ಮಂಜುನಾಥ್ ಮನವಿ ಮಾಡಿದ್ದಾರೆ.

    ಎಣ್ಣೆ ಮತ್ತಿತರ ದಿನಸಿ ಸಾಮಾನು ತೆಗೆದುಕೊಂಡು ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದೆ. ಹಠಾತ್ತನೆ ಹುಳುಗಳು ಎರಗಿದವು. ವಾಹನ ಬಿಟ್ಟು ಓಡಿದೆ. ಆದರೂ ಮುಖ ಮತ್ತು ಎದೆ ಭಾಗಕ್ಕೆ ಕಡಿದಿವೆ.
    ಮದ್ದೂರಪ್ಪ, ಗಾಯಾಳು, ಕೋರಮಂಗಲ

    ಹೆಜ್ಜೇನು ದಾಳಿಗೆ ಸಂಬಂಧಿಸಿದಂತೆ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ಪರಿಶೀಲಿಸಲಾಗುವುದು. ಹಾಗೆಯೇ
    ಹೆಜ್ಜೇನು ತೆರವಿಗೂ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
    ಎ.ಬಿ. ಪ್ರದೀಪ್ ಕುಮಾರ್, ಪುರಸಭೆ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts