More

    ಛತ್ರ ಗ್ರಾಮವಾದ ಸುಂಡಹಳ್ಳಿ

    • ಮೈಸೂರು ಸಂಸ್ಥಾನ ರಾಜರ ಬಿಡಾರವಾಗಿದ್ದ ಹಳ್ಳಿ ವ್ಯವಹಾರ ಮಾರ್ಗದ ತಂಗುದಾಣ

     

    ಚೇತನ್ ಚಕ್ಕೆರೆ ಬಿಡದಿ

    ಒಂದು ಗ್ರಾಮದ ಹೆಸರಿನ ಉಗಮಕ್ಕೆ ತನ್ನದೇ ಆದ ಇತಿಹಾಸ ಇರುತ್ತದೆ. ಆ ಗ್ರಾಮದ ಹೆಸರು ಕೇಳುತ್ತಲೇ ಅದರ ಹಿನ್ನೆಲೆ ಕಣ್ಣೆದುರು ಬರುತ್ತದೆ. ಅದೇ ರೀತಿಯಾಗಿ ಈ ಗ್ರಾಮದ ನಾಮಕರಣದ ಹಿನ್ನೆಲೆಯಲ್ಲೇ ಒಂದು ವಿಶೇಷ ಅಡಗಿದೆ. ಹಾಗಾದರೆ ಆ ಹಳ್ಳಿ ಯಾವುದು ಅಂತೀರಾ? ಅದುವೇ ರಾಮನಗರ ಜಿಲ್ಲೆಯ ಛತ್ರಗ್ರಾಮ.

    ಹೌದು.. ಬಿಡದಿ ಪಟ್ಟಣದಿಂದ ಕೂಗಳತೆ ದೂರದಲ್ಲಿರುವ ಛತ್ರಗ್ರಾಮ ನೂರಾರು ವರ್ಷಗಳ ಇತಿಹಾಸ ಹೊಂದಿದೆ. ಗ್ರಾಮಕ್ಕೆ ರಾಜರ ನಂಟು ಇದ್ದು, ಇದೇ ಕಾರಣಕ್ಕೆ ಈ ಮೊದಲು ಇದ್ದ ಹೆಸರನ್ನು ಬದಲಿಸಿ ಛತ್ರ ಎಂದು ನಾಮಕರಣ ಮಾಡಲಾಗಿದೆ. ಗ್ರಾಮಕ್ಕೆ ಹೊಂದಿಕೊಂಡಂತೆ ಮತ್ತೊಂದು ಸಣ್ಣ ದೊಡ್ಡಿ ಎಂಬ ಗ್ರಾಮವಿದ್ದು, ಇದಕ್ಕೆ ಬಾರೆದೊಡ್ಡಿ ಎಂದು ನಾಮಕರಣ ಮಾಡಲಾಗಿದೆ. ಈ ದೊಡ್ಡಿ ಎತ್ತರದ ಪ್ರದೇಶದಲ್ಲಿ ಇದ್ದ ಕಾರಣ ಇದನ್ನು ಬಾರೆದೊಡ್ಡಿ ಎಂದು ಕರೆಯುತ್ತಾರೆ. ಈ ಎರಡು ಗ್ರಾಮಗಳು ಬಿಡದಿಯ ಕಂದಾಯ ಗ್ರಾಮಗಳಾಗಿವೆ.

    ಸುಂಡಹಳ್ಳಿ ಛತ್ರವಾದ ಹಿನ್ನೆಲೆ

    ಮೈಸೂರು ಸಂಸ್ಥಾನ ಆಳುತ್ತಿದ್ದ ಅಂದಿನ ರಾಜ ಮಹಾರಾಜರು ಕುದುರೆ ಮೂಲಕ ಬೆಂಗಳೂರಿಗೆ ಬಂದು ವ್ಯವಹಾರ ಮುಗಿಸಿ ಮೈಸೂರಿಗೆ ವಾಪಾಸ್ ಆಗುತ್ತಿದ್ದರು.

    ಹೀಗೆ ಕುದುರೆಗಳ ಮೂಲಕ ರಾಜರ ಜತೆಗೆ ಸೇನಾಪಡೆ ಬರುತಿತ್ತು. ಮೈಸೂರಿನಿಂದ ಬೆಂಗಳೂರಿಗೆ ಬರುವ ಮಾರ್ಗ ಮಧ್ಯೆ ಅಂದಿನ ಬಿಡಾರ ಎಂದು ಕರೆಯಿಸಿಕೊಳ್ಳುತ್ತಿದ್ದ ಇಂದಿನ ಬಿಡದಿ ವಿಶ್ರಾಂತಿ ಸ್ಥಳವಾಗಿತ್ತು. ಇದೇ ಬಿಡದಿಯ ಕೂಗಳತೆ ದೂರದಲ್ಲಿದ್ದ ಸುಂಡಹಳ್ಳಿಯಲ್ಲಿ ರಾಜರು ಸೇರಿ ಅವರ ಸೈನಿಕರು ಊಟ ಮಾಡಿ ವಿಶ್ರಾಂತಿ ಮಾಡಲು ಒಂದು ದೊಡ್ಡ ಛತ್ರ ನಿರ್ಮಿಸಿದ್ದರು. ಈ ಹಿನ್ನೆಲೆಯಲ್ಲಿ ರಾಜರು ಹೋಗಿ ಬಂದು ವಿಶ್ರಾಂತಿ ಪಡೆಯುತ್ತಿದ್ದ ಜಾಗವೇ ಸುಂಡಹಳ್ಳಿ. ಈ ಹೆಸರು ಹೋಗಿ ಛತ್ರ ಎಂದೇ ಮತ್ತೊಮ್ಮೆ ಮರುನಾಮಕರಣವಾಯಿತು.

    ಬಹಳ ವರ್ಷಗಳ ಹಿಂದೆ ರಾಜರು ಕಟ್ಟಿಸಿದ್ದ ಛತ್ರ ಕಾಲಕ್ರಮೇಣ ಕುಸಿತ ಕಂಡಿತು. ಈ ಛತ್ರದಲ್ಲಿ ಊಟದ ಮನೆ, ಕುದುರೆ ಲಾಯ, ರಾಜರು ಹಾಗೂ ಸೈನಿಕರ ವಿಶ್ರಾಂತಿ ಕೊಠಡಿಗಳು ಇದ್ದವು. ಛತ್ರದಲ್ಲಿ ಈ ಎ್ಲ ಸೇವೆಗಳನ್ನು ಮಾಡಲು ಸ್ಥಳೀಯರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗಿತ್ತು.

    ಗ್ರಾಮದಲ್ಲಿವೆ ಹಲವು ದೇವಾಲಯಗಳು

    ಛತ್ರ ಗ್ರಾಮವಾದ ಸುಂಡಹಳ್ಳಿ

    ಈ ಗ್ರಾಮದಲ್ಲಿ ರಾಜ ಮಹಾರಾಜರ ಛತ್ರ ಇದ್ದ ಕಾರಣಕ್ಕೆ ಈ ಗ್ರಾಮ ಅಂದು ಹೆಸರು ಮಾಡಿತ್ತು. ಇಂದು ಹಲವು ದೇವಾಲಯಗಳು ಛತ್ರಗ್ರಾಮದಲ್ಲಿವೆ. ಮಾರಮ್ಮ ದೇವಿ, ರೇಣುಕ ಯಲ್ಲಮ್ಮ ದೇವಿ, ಬಾಲ ಆಂಜನೇಯ ಸ್ವಾಮಿ ದೇವಾಲಯಗಳು ಪ್ರಮುಖ. ಇದರಲ್ಲಿ ಬಾಲ ಆಂಜನೇಯ ಸ್ವಾಮಿ ದೇವಾಲಯ ಸಾಕಷ್ಟು ಇತಿಹಾಸ ಹೊಂದಿದೆ. ಹನುಮ ಜಯಂತಿ, ರಾಮನವಮಿ ದಿನದಂದು ಸಹಸ್ರಾರು ಭಕ್ತರು ಬಂದು ದೇವರ ದರ್ಶನ ಪಡೆಯುವುದು ವಿಶೇಷವಾಗಿದೆ.


    ಛತ್ರ ಗ್ರಾಮ ಸಾಕಷ್ಟು ವಿಶೇಷತೆ ಹೊಂದಿದೆ. ಗ್ರಾಮದಲ್ಲಿ ಮೈಸೂರಿನ ಮಹಾರಾಜರು ವಿಶ್ರಾಂತಿ ಮಾಡಲು ದೊಡ್ಡ ಕುಟೀರ ನಿರ್ಮಾಣ ಮಾಡಿದ್ದರಂತೆ. ಹಾಗಾಗಿ ನಮ್ಮ ಗ್ರಾಮಕ್ಕೆ ಈ ಹಿಂದೆ ಇದ್ದ ಸುಂಡಹಳ್ಳಿ ಎಂಬ ಹೆಸರನ್ನು ತೆಗೆದು ಛತ್ರ ಎಂದು ನಾಮಕರಣ ಮಾಡಿದ್ದರು. ನಮ್ಮ ಗ್ರಾಮ ಬಿಡದಿ ಪುರಸಭೆಗೆ ಸೇರಿಕೊಂಡಿದೆ. ಅಲ್ಲದೇ ನಡೆದುಕೊಂಡು ಬಿಡದಿಗೆ ಹೋಗಿ ಬರುವಷ್ಟು ಅಂತರ ಇದೆ.
    ರೇಣುಕಾ, ಗ್ರಾಮಸ್ಥ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts