ನಿಮ್ಮ ಹೆಂಡತಿ… ವಿರಾಟ್​ ಕೊಹ್ಲಿ ಹೇಳಿದ ಈ ಮಾತು ಕೇಳಿ ದಿನೇಶ್​ ಕಾರ್ತಿಕ್​ ಶಾಕ್​!

Virat Kohli
Published on

ನವದೆಹಲಿ: ಆರ್​ಸಿಬಿ ಸ್ಫೋಟಕ ಆಟಗಾರ ಮತ್ತು ಗ್ರೇಟ್​ ಫಿನಿಶರ್​ ಎಂದೇ ಖ್ಯಾತಿ ಗಳಿಸಿರುವ ದಿನೇಶ್​ ಕಾರ್ತಿಕ್​ ಕೇಳಿದ ಪ್ರಶ್ನೆಯೊಂದಕ್ಕೆ ಆರ್​ಸಿಬಿ ಆರಂಭಿಕ ಆಟಗಾರ ಹಾಗೂ ದಾಖಲೆಗಳ ಸರದಾರ ವಿರಾಟ್​ ಕೊಹ್ಲಿ ನೀಡಿದ ಉತ್ತರ ಇದೀಗ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಪ್ರಸಕ್ತ ಐಪಿಎಲ್​ ಟೂರ್ನಿಯ ಆರಂಭದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ತಂಡ ಅತ್ಯಂತ ಕಳಪೆ ಪ್ರದರ್ಶನದೊಂದಿಗೆ ಎಲ್ಲರಿಂದಲೂ ಟೀಕೆಗೆ ಒಳಗಾಯಿತು. ವಿರಾಟ್ ಕೊಹ್ಲಿ ಮತ್ತು ದಿನೇಶ್ ಕಾರ್ತಿಕ್ ಹೊರತುಪಡಿಸಿ, ಪ್ರಾರಂಭದಲ್ಲಿ ಯಾರೂ ಉತ್ತಮ ಫಾರ್ಮ್‌ನಲ್ಲಿ ಇರಲಿಲ್ಲ. ಇವರಿಬ್ಬರು ಎಷ್ಟೇ ಪ್ರದರ್ಶನ ನೀಡಿದರೂ ಆರ್‌ಸಿಬಿ ಗೆಲುವು ಮಾತ್ರ ಸಾಧ್ಯವಾಗುತ್ತಿರಲಿಲ್ಲ. ಏಕೆಂದರೆ, ಉಳಿದ ಆಟಗಾರರ ವೈಫಲ್ಯವೇ ಇದಕ್ಕೆ ಕಾರಣವಾಗಿತ್ತು. ಆರ್​ಸಿಬಿ ಪ್ಲೇಆಫ್​ ಹಾದಿ ಕನಸಾಗಿ ಉಳಿಯಲಿದೆ ಅಂದುಕೊಳ್ಳುವಷ್ಟರಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಅಮೋಘ ಗೆಲುವು ಸಾಧಿಸುವ ಮೂಲಕ ಆ ಆಸೆಯನ್ನು ಜೀವಂತವಾಗಿ ಇರಿಸಿದೆ. ಇದುವರೆಗೆ 11 ಪಂದ್ಯಗಳನ್ನು ಆಡಿರುವ ಆರ್​ಸಿಬಿ 4 ಗೆಲುವು ಮತ್ತು 7 ಸೋಲಿನೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಸದ್ಯ ಆರ್‌ಸಿಬಿ ಇದೀಗ ಅಸಾಮಾನ್ಯ ಪ್ರದರ್ಶನ ನೀಡುತ್ತಿದೆ.

ಇದೇ ಸಂದರ್ಭದಲ್ಲಿ ಆರ್​ಸಿಬಿಗೆ ಸಂಬಂಧಿಸಿದ ವಿವಿಧ ವಿಡಿಯೋಗಳು ಹರಿದಾಡುತ್ತಿವೆ. ಅವುಗಳಲ್ಲಿ ವಿರಾಟ್​ ಕೊಹ್ಲಿ ಮತ್ತು ದಿನೇಶ್​ ಕಾರ್ತಿಕ್​ ನಡುವೆ ನಡೆದಿರುವ ಸಂಭಾಷಣೆ ಕ್ರೀಡಾಭಿಮಾನಿಗಳ ಗಮನ ಸೆಳೆದಿದೆ. ದಿನೇಶ್​ ಕಾರ್ತಿಕ್ ಕೇಳಿದ​ ಪ್ರಶ್ನೆಗೆ ಕೊಹ್ಲಿ ಕೊಟ್ಟ ಉತ್ತರ ಕೇಳಿ ಒಂದು ಕ್ಷಣ ಡಿಕೆ ದಂಗಾಗಿದ್ದಾರೆ. ಅಷ್ಟಕ್ಕೂ ಡಿಕೆ ಕೇಳಿದ್ದಾದ್ದರೂ ಏನು? ಮತ್ತು ವಿರಾಟ್​ ಕೊಟ್ಟ ಉತ್ತರವೇನು? ಎಂಬುದನ್ನು ನಾವೀಗ ತಿಳಿಯೋಣ.

ಕ್ರಿಕೆಟ್ ಬಿಟ್ಟರೆ ನಿಮ್ಮ ನೆಚ್ಚಿನ ಕ್ರೀಡಾಪಟು ಯಾರು? ಎಂದು ದಿನೇಶ್​ ಕಾರ್ತಿಕ್​ ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರ ನೀಡಿದ ಕೊಹ್ಲಿ, ನಿಮ್ಮ ಹೆಂಡತಿ ಎಂದು ಉತ್ತರಿಸಿದರು. ಇದನ್ನು ಕೇಳಿ ದಿನೇಶ್​ ಕಾರ್ತಿಕ್​ ಒಂದು ಕ್ಷಣ ಶಾಕ್​ ಆದರು. ಅಲ್ಲದೆ, ಕೊಹ್ಲಿ ಮಾತಿಗೆ ಏನು ಹೇಳಬೇಕೆಂದು ತೋಚದೆ ಡಿಕೆ ದಿಗ್ಭ್ರಮೆಗೊಂಡರು. ಆದರೆ, ವಿರಾಟ್ ಕೊಹ್ಲಿ ಉತ್ತರ ಅಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿಸಿತು.

ಅಂದಹಾಗೆ ದಿನೇಶ್ ಕಾರ್ತಿಕ್ ಅವರ ಪತ್ನಿ ದೀಪಿಕಾ ಪಳ್ಳಿಕಲ್ ಅವರು ಸ್ಕ್ವಾಷ್ ಆಟಗಾರ್ತಿಯಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net