ವಿಜ್ಞಾನ ಮೇಳದಲ್ಲಿ ಕುಸಿದ ಪೆಂಡಾಲ್; ಭಾರೀ ಅನಾಹುತದಿಂದ ವಿದ್ಯಾರ್ಥಿಗಳು ಪಾರು!

Pendal
Published on

ಕಾಸರಗೋಡು: ಶಾಲಾ ಆವರಣದಲ್ಲಿ ನಡೆಯುತ್ತಿದ್ದ, ವಿಜ್ಞಾನ ಮೇಳಕ್ಕೆಂದು ಹಾಕಿದ್ದ ಪೆಂಡಾಲ್ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಪರಿಣಾಮ 20ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಗಾಯವಾಗಿದ್ದು, ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ಜಿಲ್ಲೆಯ ಮಂಜೇಶ್ವರ ತಾಲ್ಲೂಕಿನ ಬೇಕೂರಿನಲ್ಲಿರುವ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಸರ್ಕಾರಿ ಶಾಲೆಯ ಆವರಣದಲ್ಲಿ ವಿಜ್ಞಾನ ಮೇಳಕ್ಕೆಂದು ತಗಡಿನ ಶೀಟ್ ಬಳಸಿ, ಪೆಂಡಾಲ್ ಹಾಕಲಾಗಿತ್ತು. ಇದೀಗ ಈ ಪೆಂಡಾಲ್​ ಕುಸಿದು ಬಿದ್ದಿದೆ. ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಹಾಗೂ ಕೆಲವು ಶಿಕ್ಷಕರಿಗೆ ಗಾಯಗಳಾಗಿವೆ.

ವಿಜ್ಞಾನ ಮೇಳಕ್ಕೆ ವಿವಿಧ ಶಾಲೆಗಳಿಂದ ಹಲವು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸಿದ್ದರು. ಅನಾಹುತ ಸಂಭವಿಸುವಾಗ ನೆರೆದಿದ್ದ ಎಲ್ಲರೂ ಭಯಭೀತರಾಗಿದ್ದರು. ಈ ವೇಳೆ ಸ್ಥಳೀಯರ ಸಹಕಾರದಿಂದ ಶೀಟ್​ಗಳನ್ನು ಸರಿಸಿ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಲಾಗಿದೆ. ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net