

ನವದೆಹಲಿ: ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಚೀನಾದ ವಿದೇಶಾಂಗ ಸಚಿವ ಕಿನ್ ಗಂಗ್ ಅವರನ್ನು ಇಂದು ಸಂಪುಟದಿಂದ ಕಿತ್ತೊಗೆಯಲಾಗಿದ್ದು, ಅವರ ಸ್ಥಾನವನ್ನು ಇನ್ನೊಬ್ಬರಿಗೆ ವಹಿಸಲಾಗಿದೆ. ಇಂದು ನಡೆದ ಅಲ್ಲಿನ ಸಂಪುಟ ಸಭೆಯಲ್ಲಿ ಈ ನಿರ್ಧಾರ ತಳೆಯಲಾಯಿತು.
ಕಿನ್ ಗಂಗ್ ನಾಪತ್ತೆಯಾಗಿದ್ದು, ಒಂದು ತಿಂಗಳಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಹೀಗಾಗಿ ಅವರನ್ನು ಮಂತ್ರಿಗಿರಿಯಿಂದ ಕಿತ್ತೊಗೆಯಲಾಗಿದ್ದು, ವಾಂಗ್ ಯಿ ಅವರನ್ನು ಹೊಸ ವಿದೇಶಾಂಗ ಸಚಿವರನ್ನಾಗಿ ಮಾಡಲಾಗಿದೆ.
ಬೀಜಿಂಗ್ನಲ್ಲಿ ರಷ್ಯಾದ ಉಪ ವಿದೇಶಾಂಗ ಸಚಿವ ಆಂಡ್ರೆ ರುಡೆಂಕೊ ಅವರನ್ನು ಕಿನ್ ಜೂನ್ 25ರಂದು ಭೇಟಿಯಾದಾಗಿನಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಕಳೆದ ಡಿಸೆಂಬರ್ನಲ್ಲಿ ಕಿನ್ ಗಂಗ್ ಅವರನ್ನು ವಿದೇಶಾಂಗ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದರು. -ಏಜೆನ್ಸೀಸ್