More

    ‘ಮನೆಯಲ್ಲೇ ಇರು ಅಂತ ಹೇಳು, ಚಳಿಗಾಲ ಅಲ್ವಾ?’: ಸಿಎಂ ಹೀಗಂದಿದ್ದು ಯಾಕೆ-ಯಾರಿಗೆ?

    ಹಾವೇರಿ: ‘ಮನೆಯಲ್ಲೇ ಇರು ಅಂತ ಹೇಳು, ಚಳಿಗಾಲ ಅಲ್ವಾ?’
    – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಸಭೆಯೊಂದರಲ್ಲಿ ಹೀಗೆ ಹೇಳಿದ್ದು ಗಮನ ಸೆಳೆದಿದೆ. ಮಾತ್ರವಲ್ಲ, ಹೀಗೊಂದು ತಮಾಷೆಯ ಮೂಲಕವೇ ಅವರು ತಮ್ಮ ತೀವ್ರ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ.

    ಹಾವೇರಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ಅವರು ಮೂವರು ಅಧಿಕಾರಿಗಳನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾರೆ. ನಾನು ಮುಖ್ಯಮಂತ್ರಿಯಾದ ಮೇಲೆ ಮೊದಲ ಸಲ ಜಿಲ್ಲೆಗೆ ಬರುತ್ತಿದ್ದೇನೆ, ಬದಲಾವಣೆ ಬಯಸಿ ಕಾಂಗ್ರೆಸ್ ಪಕ್ಷಕ್ಕೆ ಈ ಸಲ ಜನರು ಆಶೀರ್ವಾದ ಮಾಡಿದ್ದಾರೆ ಎಂದು ಸಿಎಂ ಹೇಳಿದರು.

    ಜನರು ಬದಲಾವಣೆಗಾಗಿ ಬದಲಾವಣೆ ಮಾಡಿದ್ದಲ್ಲ. ಅನೇಕ‌ ಆಶೋತ್ತರ-ನಂಬಿಕೆ ವಿಶ್ವಾಸ ಇಟ್ಟು ಬದಲಾವಣೆ ಮಾಡಿದ್ದಾರೆ. ಜನರ ನಿರೀಕ್ಷೆ ಆಶೋತ್ತರಗಳಿಗೆ ಸ್ಪಂದಿಸುವುದು ನಮ್ಮೆಲ್ಲರ ಕರ್ತವ್ಯ ಹಾಗೂ ಜವಾಬ್ದಾರಿ ಎಂದು ಸಿಎಂ ಹೇಳಿದರು.

    ಇದನ್ನೂ ಓದಿ: ಎಕ್ಸಾಂ ದಿನವೇ ವಿದ್ಯಾರ್ಥಿ ಸಾವು ಪ್ರಕರಣದ ಇನ್ನೊಂದು ಮುಖ: ಏಕೈಕ ಪುತ್ರನನ್ನು ಕಳೆದುಕೊಂಡ ತಾಯಿಯ ಪ್ರಶ್ನೆಗಳಿವು..

    ಐದು ಗ್ಯಾರಂಟಿ ಹಾಗೂ ಪ್ರಣಾಳಿಕೆಯಲ್ಲಿನ 76 ಕಾರ್ಯಕ್ರಮಗಳನ್ನು ಕಾರ್ಯಗತ ಮಾಡಲು ಬಜೆಟ್ ಮೂಲಕ ಜನರ ಮುಂದೆ ಇಟ್ಟಿದ್ದೇವೆ. ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವುದು ನಿಮ್ಮೆಲ್ಲರ ಜವಾಬ್ದಾರಿ. ಸರ್ಕಾರ ನೀತಿ ರೂಪಿಸುತ್ತದೆ, ಬೇಕಾದ ಅನುದಾನ ಕೊಡುತ್ತದೆ, ಅಧಿಕಾರಿಗಳು ಜಾರಿ ಮಾಡಬೇಕು. ಅಧಿಕಾರಿಗಳು ಪ್ರಾಮಾಣಿಕವಾಗಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿದರೆ ಒಳ್ಳೆಯ ಹೆಸರು ಬರುತ್ತದೆ. ಅಧಿಕಾರಿಗಳು ನಿರ್ಲಕ್ಷ್ಯ ಮಾಡಿ, ಜವಾಬ್ದಾರಿ ಮರೆತು ಫಲಾನುಭವಿಗಳಿಗೆ ತಲುಪಿಸದಿದ್ದರೆ ಕೆಟ್ಟ ಹೆಸರು ಬರುತ್ತದೆ. ಅಧಿಕಾರಿಗಳು ಬೇಜವಾಬ್ದಾರಿತನದಿಂದ ಕಾರ್ಯಕ್ರಮ ತಲುಪಿಸಲು ವಿಫಲವಾದರೆ ಸರ್ಕಾರ ಸಹಿಸುವುದಿಲ್ಲ ಎಂದು ಸಿಎಂ ಅಧಿಕಾರಿಗಳಿಗೆ ಸೂಚಿಸಿದರು.

    ಇದನ್ನೂ ಓದಿ: ಒಬ್ಬರು ಅಥವಾ ಇಬ್ಬರು ಮಕ್ಕಳಿರುವ ದಂಪತಿಗೆ ಭರ್ಜರಿ ಆಫರ್​: ಮೂರನೇ ಮಗುವಿಗೆ ಜನ್ಮನೀಡಿದರೆ 50 ಸಾವಿರ ರೂಪಾಯಿ!

    ನಿರ್ಲಕ್ಷ್ಯ ಮಾಡುವವರು ಉತ್ತಮ ಅಧಿಕಾರಿಗಳು ಆಗಲು ಸಾಧ್ಯವಿಲ್ಲ ಎಂದ ಸಿಎಂ, ಸಭೆಗೆ ಆಗಮಿಸದ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಸಿಸಿ ಬ್ಯಾಂಕ್ ಎಂಡಿ, ಸಹಕಾರ ಇಲಾಖೆಯ ಡೆಪ್ಯುಟಿ ರಿಜಿಸ್ಟ್ರಾರ್​, ಜಾಯಿಂಟ್​ ರಿಜಿಸ್ಟ್ರಾರ್​ ಅವರು ಸಭೆಗೆ ಬರದ್ದರಿಂದ ಅವರಿಗೆ ನೋಟಿಸ್​ ನೀಡಲು ಸಿಎಂ ಹೇಳಿದರು. ಮೂರು ದಿನಗಳಲ್ಲಿ ಉತ್ತರ ಕೊಡಬೇಕು ಎಂದು ಸಿಎಂ ಹೇಳಿದ್ದಕ್ಕೆ, ಅವರು ಬೆಳಗಾವಿಯಲ್ಲಿ ಇರುತ್ತಾರೆ ಎಂದು ಅಲ್ಲಿದ್ದ ಅಧಿಕಾರಿಗಳು ಪ್ರತಿಕ್ರಿಯಿಸಿದರು. ಆಗ ‘ಮನೆಯಲ್ಲೇ ಇರು ಅಂತ ಹೇಳು, ಚಳಿಗಾಲ ಅಲ್ವಾ?’ ಎಂದು ಸಿಎಂ ಹೇಳಿದರು.

    ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!

    ಮಕ್ಕಳನ್ನು ಡೌನ್​ಲೋಡ್ ಮಾಡಿಕೊಳ್ಳುವ ಕಾಲ ಬರಬಹುದಾ?; ಇದೇನಿದು ಅಪ್ಪ-ಅಮ್ಮ ಇಲ್ಲದೆ ಮಗು ಹುಟ್ಟಿಸೋ ಪ್ರಯತ್ನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts