ಹೆಂಡತಿಯನ್ನು ವೈದ್ಯೆಯನ್ನಾಗಿಸಿದ ಕಾರ್ಮಿಕ ಪತಿ: ಕೊನೆಗೆ ಆತನಿಂದ ವಿಚ್ಛೇದನ ಪಡೆಯಲು ಮುಂದಾದ ಪತ್ನಿ..

doctor case banda
Published on

ಬಂದಾ: ಎಸ್‌ಡಿಎಂ ಜ್ಯೋತಿ ಮೌರ್ಯ ಪ್ರಕರಣವನ್ನೇ ಹೋಲುವ ಮತ್ತೊಂದು ಪ್ರಕರಣ ಉತ್ತರ ಪ್ರದೇಶದ ಬಂದಾ ಜಿಲ್ಲೆಯಿಂದ ಬೆಳಕಿಗೆ ಬಂದಿದ್ದು, ಇದೀಗ ವೈದ್ಯೆಯಾಗಿರುವ ತನ್ನ ಪತ್ನಿ ತನ್ನಿಂದ ವಿಚ್ಛೇದನಕ್ಕೆ ಯತ್ನಿಸುತ್ತಿರುವ ಘಟನೆ ನಡೆದಿದೆ.

ಬಿಎಎಂಎಸ್ ಪದವಿ ಓದುತ್ತಿರುವ ನೀತು ವರ್ಮಾ ಎಂಬಾಕೆಯೇ, ತನ್ನ ಪತಿ ಗೋವಿಂದ್‌ನಿಂದ ಬೇರೆಯಾಗಲು ನಿರ್ಧರಿಸಿದ್ದಾಳೆ. ಅಲ್ಲದೇ ಆತನ ವಿರುದ್ಧ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಸಹ ದಾಖಲಿಸಿದ್ದಾಳೆ.

ಘಟನೆ ಹಿನ್ನೆಲೆ:

ಗೋವಿಂದ್​ನ ಪ್ರಕಾರ 2019ರಲ್ಲಿ ತಾವಿಬ್ಬರು ವಿವಾಹವಾಗಿದ್ದು, ಮದುವೆಯ ಆರಂಭಿಕ ದಿನಗಳಲ್ಲಿ ಎಲ್ಲವೂ ಚೆನ್ನಾಗಿಯೇ ಇದ್ದು ಅಷ್ಟರಲ್ಲಿ ಹೆಂಡತಿ ತಾನು ಮುಂದೆ ಓದಬೇಕೆಂದು ಹೇಳತೊಡಗಿದ್ದಾಳೆ. ಆಕೆಗೆ ವೈದ್ಯೆ ಆಗಬೇಕೆಂಬ ಆಸೆಯಿದೆ ಎಂದು ಹೇಳಿಕೊಂಡಿದ್ದು, ಈ ವೇಳೆ ಆತ ತಾನು ಕೂಲಿ ಕೆಲಸ ಮಾಡುತ್ತಿರುವುದರಿಂದ ಕುಟುಂಬದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂದು ಹೇಳಿದ್ದಾನೆ. ಆದರೆ ಕೊನೆಗೆ ಪತ್ನಿಯ ಆಸೆಯನ್ನು ಗೌರವಿಸಿ ಆಕೆಯನ್ನು ಕೋಚಿಂಗ್ ಓದಲು ಕಳುಹಿಸಿದ್ದು, ಆ ಬಳಿಕ ಆಕೆ ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ.

ಇದನ್ನೂ ಓದಿ: ದೇವಾಲಯದ ಮೇಲಿದ್ದ ಒಂದು ಕೆಜಿ ಚಿನ್ನದ ಕಲಶ ಬೆಳಿಗ್ಗೆಯಾಗುವಷ್ಟರಲ್ಲಿ ನಾಪತ್ತೆ..!

ಮುಂದೆ ಆಕೆಗೆ ಅಟಾರ್ರಾ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ಬಿಎಎಂಎಸ್ ಸೀಟ್​ ಸಿಕ್ಕಿದ್ದು, ಆತ ತನ್ನ ಪತ್ನಿಗೆ ಹಣದ ಸಹಾಯ ಮಾಡಿದ್ದ. ಪತ್ನಿಯು ಮೆಡಿಕಲ್ ಓದುತ್ತಿದ್ದಂತೆ ಆಕೆಯ ನಡವಳಿಕೆಗ ಬದಲಾವಣೆಯಾಗಿದ್ದು, ಆಕೆ ಆತನನ್ನು ಕಡೆಗಣಿಸಲು ಆರಂಭಿಸಿದ್ದಾಳೆ. ದಿನಗಳೆದಂತೆ ಆಕೆ ಆತನ ಭೇಟಿಯಾಗುವುದನ್ನು ನಿಲ್ಲಿಸಿದ್ದು, ಮೊಬೈಲ್‌ಗೆ ಕರೆ ಮಾಡಿದಾಗಲೆಲ್ಲಾ ಅವಳು ಕರೆಯನ್ನು ಡಿಸ್ಕನೆಕ್ಟ್ ಮಾಡುತ್ತಿದ್ದಳು ಅಥವಾ ಪಿಕ್ ಮಾಡಲಿಲ್ಲ. ಅವಳು ಫೋನ್‌ನಲ್ಲಿ ಮತ್ತು ತನ್ನ ಅತ್ತೆಯನ್ನು ಭೇಟಿ ಮಾಡುವುದನ್ನು ನಿಲ್ಲಿಸಿದ್ದಾಳೆ.

ಈ ಬೆಳವಣಿಗೆಯಿಂದ ತೊಂದರೆಗೀಡಾದ ಗೋವಿಂದ್, ಆಕೆಯನ್ನು ಭೇಟಿ ಮಾಡಲು ಹಲವು ಬಾರಿ ವೈದ್ಯಕೀಯ ಕಾಲೇಜಿಗೆ ಭೇಟಿ ನೀಡಿದ್ದ. ಆದರೆ ಆಕೆ ಅವನನ್ನು ಭೇಟಿ ಮಾಡಲು ನಿರಾಕರಿಸಿ ಪೊಲೀಸ್ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಪತಿ ಮೇಲೆ ಕಿರುಕುಳದ ಆರೋಪ ಹೊರಿಸುವುದರ ಜತೆಗೆ ಕೋರ್ಟ್‌ನಿಂದ ವಿಚ್ಛೇದನ ನೋಟಿಸ್ ಕಳುಹಿಸಿದ್ದಾರೆ ಎಂದು ಗೋವಿಂದ್ ಆರೋಪಿಸಿದ್ದಾನೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net