ದಂಪತಿ ನಡುವೆ ಆಗಾಗ್ಗೆ ಜಗಳ; ಚಾರ್ಜಿಂಗ್ ವೈರ್​​ನಿಂದ ಪತ್ನಿಯನ್ನು ಕೊಂದ ಪತಿ

crime
Published on

ಆಂಧ್ರಪ್ರದೇಶ: ಪತಿ ತನ್ನ ಹೆಂಡತಿಯನ್ನು ಚಾರ್ಜಿಂಗ್ ವೈರ್​​ನಿಂದ ಬರ್ಬರವಾಗಿ ಕೊಂದಿದ್ದಾನೆ. ಈ ಘಟನೆ ಕೃಷ್ಣಾ ಜಿಲ್ಲೆಯಲ್ಲಿ ನಡೆದಿದೆ.

ರಮ್ಯತೇಜ ಮೃತ ಮಹಿಳೆ. ವೀರ್ಲ ರಾಮಕೃಷ್ಣ ಕೊಲೆ ಮಾಡಿದ ಆರೋಪಿ. ಈತ ಪ್ರೀತಿಸಿ ಮದುವೆಯಾದ ಹೆಂಡತಿಯನ್ನು ಕೊಲೆ ಮಾಡಿ ಇಬ್ಬರು ಮಕ್ಕಳನ್ನು ಸಹ ಅನಾಥರನ್ನಾಗಿ ಮಾಡಿದ್ದಾನೆ.

ಕೃಷ್ಣಾ ಜಿಲ್ಲೆ ತೋಟವಳ್ಳೂರು ಮಂಡಲದ ಕುಮ್ಮಮೂರು ಗ್ರಾಮದ ವೀರ್ಲ ರಾಮಕೃಷ್ಣ ಅದೇ ಗ್ರಾಮದ ರಮ್ಯತೇಜ ಎಂಬಾಕೆಯನ್ನು ಪ್ರೀತಿಸುತ್ತಿದ್ದ. ನಂತರ ಹಿರಿಯರನ್ನು ಒಪ್ಪಿಸಿ ಮದುವೆಯಾದರು. ರಾಮಕೃಷ್ಣ ಮತ್ತು ರಮ್ಯತೇಜ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ರಾಮಕೃಷ್ಣ ಕೆಟ್ಟ ಚಟಗಳಿಗೆ ಅಂಟಿಕೊಂಡಿದ್ದರಿಂದ ಇಬ್ಬರ ನಡುವೆ ಜಗಳ ಶುರುವಾಯಿತು. ಪತ್ನಿಯ ಮೇಲೆ ಅನುಮಾನ ವ್ಯಕ್ತಪಡಿಸುತ್ತಿದ್ದನು.

ಪತಿ-ಪತ್ನಿಯ ನಡುವೆ ಆಗಾಗ್ಗೆ ಜಗಳ ನಡೆಯುತ್ತಿದ್ದ ಕಾರಣ ರಮ್ಯ ತೇಜಾ ಪೋಷಕರು ಅಳಿಯ ರಾಮಕೃಷ್ಣ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದರು. ಆದರೂ ತನ್ನ ವರ್ತನೆ ಬದಲಿಸಿಕೊಳ್ಳದೆ ತನ್ನ ಹಳೆ ಚಾಳಿ ಮುಂದುವರೆಸಿದ್ದನು.

ರಾಮಕೃಷ್ಣ ಶನಿವಾರ ಮತ್ತೊಮ್ಮೆ ಪತ್ನಿ ರಮ್ಯಾ ತೇಜಾ ಜತೆ ಜಗಳವಾಡಿದ್ದಾನೆ. ಆ ಕೋಪದಲ್ಲಿ ಆಕೆಯ ಕುತ್ತಿಗೆಗೆ ಚಾರ್ಜಿಂಗ್ ತಂತಿಯಿಂದ ನೇಣು ಬಿಗಿದು ಕೊಲೆ ಮಾಡಿದ್ದಾನೆ. ಪತ್ನಿ ರಮ್ಯತೇಜಳನ್ನು ಕೊಂದ ಬಳಿಕ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net