ಹೈದರಾಬಾದ್: ಶ್ರೀಲೀಲಾ ಸದ್ಯ ಟಾಲಿವುಡ್ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಕೈಯಲ್ಲಿ ಹತ್ತಕ್ಕೂ ಹೆಚ್ಚು ಚಿತ್ರಗಳನ್ನಿಟ್ಟುಕೊಂಡಿರುವ ಶ್ರೀಲೀಲಾ ಸಖತ್ ಬ್ಯುಸಿಯಾಗಿದ್ದಾರೆ.
ರಾಮ್ ಪೋತಿನೇನಿ ಜತೆ ಶ್ರೀಲೀಲಾ ಸ್ಕಂದ ಸಿನಿಮಾದಲ್ಲಿ ನಟಿಸಿದ್ದಾರೆ. ಮಾಸ್ ಡೈರೆಕ್ಟರ್ ಬೋಯಪತಿ ಶ್ರೀನು ನಿರ್ದೇಶನದ ಈ ಸಿನಿಮಾದ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಬಿಡುಗಡೆಗೆ ರೆಡಿಯಾಗಿದೆ. ಸೆಪ್ಟೆಂಬರ್ 15 ರಂದು ಬಿಡುಗಡೆಯಾಗಲಿರುವ ಈ ಚಿತ್ರದ ನಿರ್ಮಾಪಕರು ಕೆಲವು ದಿನಗಳಿಂದ ಪ್ರಚಾರವನ್ನು ಮಾಡುತ್ತಿದ್ದಾರೆ.
ಶನಿವಾರ ಸ್ಕಂದ ಚಿತ್ರದ ಪ್ರೀ ರಿಲೀಸ್ ಕಾರ್ಯಕ್ರಮವನ್ನು ಚಿತ್ರತಂಡ ಆಯೋಜಿಸಿತ್ತು. ಬಾಲಕೃಷ್ಣ ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿದ್ದರು. ಈ ಕ್ರಮದಲ್ಲಿ ಪ್ರೀ ರಿಲೀಸ್ ಸಮಾರಂಭದಲ್ಲಿ ಶ್ರೀಲೀಲಾ, ಸಂಗೀತ ನಿರ್ದೇಶಕ ಥಮನ್ ಜತೆಗೆ ಸ್ಕಂದ ಸಿನಿಮಾ ತಂಡಕ್ಕೆ ಸರ್ಪ್ರೈಸ್ ನೀಡಿದ್ದಾರೆ.
ಈ ಸಮಾರಂಭದಲ್ಲಿ ಥಮನ್ ತಮ್ಮ ತಂಡದೊಂದಿಗೆ ಪ್ರದರ್ಶನ ನೀಡಿದ ಶ್ರೀಲೀಲಾ ಅವರು ಥಮನ್ ಅವರೊಂದಿಗೆ ವೇದಿಕೆಯಲ್ಲಿ ಹಾಡನ್ನು ಹಾಡಿದರು. ಸ್ಕಂದ ಚಿತ್ರದ ಹಾಡನ್ನು ತುಂಬಾ ಸುಂದರವಾಗಿ ಹಾಡುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Dance 10/10,Looks 10/10
Ease 10/10,Now singing 10/10#SreeLeela 💥💥💥
pic.twitter.com/57gRo2LBIw— BlueGrass (@Vtweetsss) August 27, 2023
ತಮ್ಮ ನೃತ್ಯ ಹಾಗೂ ನಟನೆಯಿಂದ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸಿರುವ ಶ್ರೀಲೀಲಾ ಇದೀಗ ಹಾಡೊಂದನ್ನು ಹಾಡಿ ಅಭಿಮಾನಿಗಳು ಹಾಗೂ ಪ್ರೇಕ್ಷಕರ ಮನಸೂರೆಗೊಳಿಸಿದ್ದಾರೆ. ಶ್ರೀಗಳ ಪ್ರತಿಭೆಯನ್ನು ಕಂಡು ಕೊಂಡಾಡುತ್ತಿದ್ದಾರೆ.
ಪೆಲ್ಲಿ ಸನದಿ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಚೆಲುವೆ ಧಮಾಕಾ ಚಿತ್ರದ ಮೂಲಕ ಫುಲ್ ಕ್ರೇಜ್ ಪಡೆದುಕೊಂಡರು. ಪ್ರಸ್ತುತ ಮಹೇಶ್ ಬಾಬು, ಬಾಲಕೃಷ್ಣ, ನಿತಿನ್ ಮತ್ತು ವೈಷ್ಣವ್ ತೇಜ್ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ.