ಸೊಸೆಯ ಮಾನ ಉಳಿಸುವ ಸಲುವಾಗಿ ಗಂಡನ ಪ್ರಾಣ ತೆಗೆದ ಅತ್ತೆ..

police 01
ಸಾಂದರ್ಭಿಕ ಚಿತ್ರ
Published on

ಬದೌನ್: 19 ವರ್ಷದ ಸೊಸೆಯನ್ನು ಲೈಂಗಿಕ ಕಿರುಕುಳದಿಂದ ರಕ್ಷಿಸಲು 40 ವರ್ಷದ ಮಹಿಳೆಯೊಬ್ಬರು ಪತಿಯ ಕತ್ತು ಸೀಳಿದ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ.

ಇದನ್ನೂ ಓದಿ: ಕಲ್ಯಾಣ ರಥ ಐಷಾರಾಮಿ ಸ್ಲೀಪರ್ ಬಸ್ ಸೇವೆ: ಕೆಕೆಆರ್ ಟಿಸಿಗೆ ಪ್ರಥಮ ಬಾರಿಗೆ ವೋಲ್ವೋ ಸೇರ್ಪಡೆ

ಆಟಿಕೆ ಮಾರಾಟಗಾರ ತೇಜೇಂದ್ರ ಸಿಂಗ್ (43) ಮೃತ ವ್ಯಕ್ತಿಯಾಗಿದ್ದು, ಆತನ ಹೆಂಡತಿ ಮಿಥಿಲೇಶ್​ ದೇವಿಯೇ ಹತ್ಯೆಗೈದ ಆರೋಪಿಯಾಗಿದ್ದಾಳೆ. ಮನೆ ಹೊರಗೆ ಮಲಗಿದ್ದ ವೇಳೆ ಈ ಘಟನೆ ನಡೆದಿದ್ದು, ಯಾರೋ ಅಪರಿಚಿತರು ಈ ಕೊಲೆ ಮಾಡಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ನಂತರ ವಿಷಯ ಬೆಳಕಿಗೆ ಬಂದಾಗ ಎಲ್ಲರೂ ದಿಗ್ಭ್ರಮೆಗೊಂಡಿದ್ದಾರೆ.

ತನಿಖೆ ವೇಳೆ ಸತ್ಯ ಬಯಲು:

ಆಗಸ್ಟ್​ 14ರ ರಾತ್ರಿ ಈ ಘಟನೆ ನಡೆದಿದ್ದು, ತನಿಖೆಯ ಸಂದರ್ಭದಲ್ಲಿ, ತೇಜೇಂದ್ರನ ಪತ್ನಿ ಮಿಥಿಲೇಶ್ ದೇವಿ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿದ್ದಳು. ಈ ವೇಳೆ ಅನುಮಾನಗೊಂಡು ಪೊಲೀಸರು, ಆಕೆಯನ್ನು ತೀವ್ರ ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಾಗ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ನಾಲ್ಕು ಮಕ್ಕಳ ತಾಯಿಯಾಗಿರುವ ಮಿಥಿಲೇಶ್, ಪತಿ ಆಗಾಗ ತನಗೆ ಥಳಿಸುತ್ತಿದ್ದು, ಸೊಸೆಯೊಂದಿಗೆ ಅಕ್ರಮ ಸಂಬಂಧ ಹೊಂದುವಂತೆ ಮನವೊಲಿಸಲು ಒತ್ತಡ ಹೇರುತ್ತಿದ್ದ’ ಎಂದು ಪೊಲೀಸರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ: ಡಾಲಿ ತಾರಾ ಹುಟ್ಟುಹಬ್ಬ ; ಯಶ್​, ನಿಖಿಲ್​, ರಕ್ಷಿತ್​, ವಿಜಿ, ಯೋಗಿ ಸೇರಿ ಹಲವು ಸೆಲೆಬ್ರಿಟಿಗಳು ಭಾಗಿ

ಇದರಿಂದ ಬೇಸತ್ತಿದ್ದ ಆಕೆ ತನ್ನ ಗಂಡನನ್ನು ತೊಡೆದುಹಾಕಲು ಅವಕಾಶವನ್ನು ಹುಡುಕುತ್ತಿದ್ದು, ಆ ದಿನ ರಾತ್ರಿ ಆತ ಕುಡಿದ ಅಮಲಿನಲ್ಲಿ ಮನೆಯ ಹೊರಗೆ ಮಲಗಿದ್ದನು. ಆದರೆ ಕೆಲ ಹೊತ್ತಿನ ಬಳಿಕ ಇದ್ದಕ್ಕಿದ್ದಂತೆ ಸೊಸೆ ಕೂಗಾಟ ಕೇಳಲಾರಂಭಿಸಿದೆ. ಈ ವೇಳೆ ಆರೋಪಿಯು ಕೋಣೆಗೆ ಹೋಗಿ ನೋಡಿದಾಗ ಆತ ಆಕೆಯ ಮೇಲೆ ಕೃತ್ಯಕ್ಕೆ ಪ್ರಯತ್ನಿಸುತ್ತಿದ್ದ. ಈ ವೇಳೆ ಆರೋಪಿಯು ಕೂಡಲೇ ಸೊಸೆ ಮಾನ ಮತ್ತು ಪ್ರಾಣವನ್ನು ಉಳಿಸುವ ಸಲುವಾಗಿ ಆತನನ್ನು ಹೊರಗೆ ನೂಕಿದ್ದು, ಆ ಬಳಿಕ ಗಂಡನ ಕತ್ತು ಸೀಳಲು ಕುಡುಗೋಲು ಬಳಸಿದ್ದಾಗಿ ಒಪ್ಪಿಕೊಂಡಿದ್ದಾಳೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net