ಡಾಲಿ ತಾರಾ ಹುಟ್ಟುಹಬ್ಬ ; ಯಶ್​, ನಿಖಿಲ್​, ರಕ್ಷಿತ್​, ವಿಜಿ, ಯೋಗಿ ಸೇರಿ ಹಲವು ಸೆಲೆಬ್ರಿಟಿಗಳು ಭಾಗಿ

Dhananjaya Bday (1)
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ನಟ ಡಾಲಿ ಧನಂಜಯ ಕಳೆದ ಬುಧವಾರ (ಆ. 23) 38ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಕರೊನಾ ಲಾಕ್​ಡೌನ್​ನಿಂದಾಗಿ ಧನಂಜಯ ಕಳೆದ ಮೂರು ವರ್ಷಗಳಿಂದ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಹೀಗಾಗಿ ಈ ಬಾರಿ ನಂದಿ ಲಿಂಕ್ಸ್​ ಮೈದಾನದಲ್ಲಿ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಬಳಿಕ ಅಂದು ರಾತ್ರಿ ಸ್ಯಾಂಡಲ್​ವುಡ್​ ತಾರೆಯರ ಜತೆ ಕೇಕ್​ ಕತ್ತರಿಸಿ, ರ್ಬತ್​ಡೇ ಆಚರಿಸಿಕೊಂಡಿದ್ದಾರೆ.

ಯಶ್​, ರತ್​ ಶೆಟ್ಟಿ, ನಿಖಿಲ್​ ಕುಮಾರಸ್ವಾಮಿ, ದುನಿಯಾ ವಿಜಯ್​, ರಮೇಶ್​ ಅರವಿಂದ್​, ಸತೀಶ್​ ನೀನಾಸಂ, ನಾಗಭೂಷಣ, ಲೂಸ್​ ಮಾದ ಯೋಗಿ, ಪ್ರಮೋದ್​ ಶೆಟ್ಟಿ, ಡಾರ್ಲಿಂಗ್​ ಕೃಷ್ಣ, ಪ್ರಜ್ವಲ್​ ದೇವರಾಜ್​, ಪ್ರಣಾಮ್​ ದೇವರಾಜ್​, ಪ್ರೇಮ್​, ಮಿಲನಾ ನಾಗರಾಜ್​, ಅಮೃತಾ ಐಯಂಗಾರ್​, ರೋಷನಿ ಪ್ರಕಾಶ್​, ಸಂಜನಾ ಆನಂದ್​, ಅಮೃತಾ ಪ್ರೇಮ್​, ನಿರ್ಮಾಪಕರಾದ ಕಾರ್ತಿಕ್​ ಗೌಡ, ಯೋಗಿ ಜಿ. ರಾಜ್​, ಲಹರಿ ವೇಲು ಸೇರಿ ಹಲವಾರು ಮಂದಿ ಡಾಲಿ ಧನಂಜಯ ಹುಟ್ಟುಹಬ್ಬ ಆಚರಣೆಯಲ್ಲಿ ಭಾಗಿಯಾಗಿ ನಟನಿಗೆ ಶುಭಹಾರೈಸಿದ್ದಾರೆ.

ಸದ್ಯ ಧನಂಜಯ "ಉತ್ತರಕಾಂಡ' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಿದ್ದು, "ಜೀಬ್ರಾ' ಎಂಬ ತೆಲುಗು ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net