ಯುವಕರಿಗೆ ಥಳಿಸಿ, ವಿವಸ್ತ್ರಗೊಳಿಸಿ ಮರಕ್ಕೆ ತಲೆಕೆಳಗಾಗಿ ಹಾಕಿದ ದುರುಳರು..

tree
ಸಾಂದರ್ಭಿಕ ಚಿತ್ರ
Published on

ಅಹಮದ್‌ನಗರ: ಮೇಕೆ , ಪಾರಿವಾಳ ಕಳ್ಳತನ ಮಾಡುತ್ತಿದ್ದ ಆರೋಪದ ಮೇಲೆ ಮೂವರು ದಲಿತ ಯುವಕರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿದ ಆಕ್ರೋಶಭರಿತ ಘಟನೆ ಮಹಾರಾಷ್ಟ್ರದ ಅಹಮದ್​ನಗರದ ಹರೇಗಾಂವ್‌ನಲ್ಲಿ ನಡೆದಿದೆ.

ಹರೇಗಾಂವ್‌ನಲ್ಲಿ ಕೂಲಿ ಮಾಡುತ್ತಿದ್ದ ಮೂವರು ದಲಿತ ಯುವಕರು ಉಂಡಿರ್‌ಗಾಂವ್‌ನ ಗಲಾಂಡೆ ಬಡಾವಣೆಯಿಂದ ಯುವಕರು ಮೇಕೆ ಮತ್ತು ನಾಲ್ಕು ಪಾರಿವಾಳಗಳನ್ನು ಕದ್ದಿದ್ದಾರೆ ಎಂದು ಶಂಕಿಸಲಾಗಿದೆ. ಆ ಬಳಿಕ ಶುಭಂ ವಾಘಡೆ, ಕುನಾಲ್ ಮಗರ್, ಓಂ ಗಾಯಕವಾಡ ಎಂಬುವರನ್ನು ಥಳಿಸಲಾಗಿದ್ದು, ವಿವಸ್ತ್ರಗೊಳಿಸಿ ಮರಕ್ಕೆ ತಲೆಕೆಳಗಾಗಿ ನೇತು ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಸೊಸೆಯ ಮಾನ ಉಳಿಸುವ ಸಲುವಾಗಿ ಗಂಡನ ಪ್ರಾಣ ತೆಗೆದ ಅತ್ತೆ..

ಘಟನೆಯಲ್ಲಿ ಗಾಯಗೊಂಡಿರುವ ಮೂವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಉಪ ಪೊಲೀಸ್ ವರಿಷ್ಠಾಧಿಕಾರಿ ಆಸ್ಪತ್ರೆಗೆ ಆಗಮಿಸಿ ಸಂತ್ರಸ್ತ ಯುವಕರ ವಿಚಾರಣೆ ನಡೆಸಿದ್ದು, ಅವರ ಹಾಗೂ ಸಂಬಂಧಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾಗರಿಕರು ತಾಳ್ಮೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net