ಮಗಳ ಮದುವೆಗೆ ಬಂದವರಿಗೆ ಕೃಷಿ ಕಾಯ್ದೆಯ ಬಗ್ಗೆ ಮಾಹಿತಿ ಹಂಚಿದ ಉದ್ಯಮಿ!

farmer
Published on

ಪಣಜಿ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ಬಗ್ಗೆ ಪರ ವಿರೋಧಗಳು ಹೆಚ್ಚಿರುವ ಈ ಸಮಯದಲ್ಲಿ ಮಕ್ಕಳ ಮದುವೆ ಮಾಡಲೊರಟ ಉದ್ಯಮಿಯೊಬ್ಬ ವಿಶೇಷ ರೀತಿಯಲ್ಲಿ ಕೃಷಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದಾನೆ. ಮದುವೆಯಲ್ಲಿ ವಿಶೇಷ ಅಧಿವೇಶನವನ್ನು ನಡೆಸಿ, ಕಾಯ್ದೆಯ ಬಗ್ಗೆ ಮಾಹಿತಿ ಹಂಚಲಾಗಿದೆ.

ಕೊಲ್ಹಾಪುರ ಮೂಲದ ಉದ್ಯಮಿ ಡಿಸೆಂಬರ್​ 24ರಂದು ಗೋವಾದ ಪಂಚ ತಾರಾ ರೆಸಾರ್ಟ್​ ಒಂದರಲ್ಲಿ ಮಕ್ಕಳ ಮದುವೆ ಇಟ್ಟುಕೊಂಡಿದ್ದ. ಡಿಸೆಂಬರ್​ 23ರಂದು ಆತ ಮದುವೆಗೆ ಬಂದಿದ್ದ ಎಲ್ಲ ಅತಿಥಿಗಳಿಗಾಗಿ ಒಂದು ವಿಶೇಷ ಅಧಿವೇಶನ ನಡೆಸಿದ್ದಾನೆ. ಅದರಲ್ಲಿ ಕೃಷಿ ಕಾಯ್ದೆ ಎಂದರೇನು, ಅದು ಹೇಗಿರಲಿದೆ? ರೈತರಿಗೆ ಯಾವ ರೀತಿ ಸಹಾಯವಾಗಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಹಂಚಿಕೊಳ್ಳಲಾಗಿದೆ.

ಡಿಸೆಂಬರ್​ 23ರಂದು ರೈತರ ದಿನವೂ ಆಗಿತ್ತು. ಹಾಗೆಯೇ ದೇಶಾದ್ಯಂತ ಕೃಷಿ ಕಾಯ್ದೆ ಬಗ್ಗೆ ತಪ್ಪು ಕಲ್ಪನೆ ಇರುವುದನ್ನೂ ನಾನು ಗಮನಿಸಿದ್ದೆ. ಅದೇ ಕಾರಣಕ್ಕೆ ಮದುವೆಯಲ್ಲಿ ಕಾಯ್ದೆಯ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಮಾಡಿದೆ ಎಂದು ಉದ್ಯಮಿ ಸಂತೋಷದಿಂದ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net