ಬಿಎಂಟಿಸಿ ಬಸ್ಸಿನ ವಿಂಡೋ ಸೀಟಲ್ಲಿ ಕೂತು ಫೋನಲ್ಲಿ ಮಾತಾಡೋರೇ ಇವರ ಟಾರ್ಗೆಟ್​! 101 ಮೊಬೈಲ್​ ಕದ್ದ ಭೂಪ

bmtc
Published on

ಬೆಂಗಳೂರು: ನಗರದ ಬಿಎಂಟಿಸಿ ಬಸ್ಸುಗಳಲ್ಲಿ ಪ್ರಯಾಣಿಸುವವರ ಮೊಬೈಲ್​ಗಳನ್ನು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. ಬಸ್ಸಿನ ಕಿಟಕಿ ಬದಿ ಸೀಟಿನಲ್ಲಿ ಕುಳಿತು ಫೋನಲ್ಲಿ ಮಾತನಾಡುತ್ತಿದ್ದ ಪ್ರಯಾಣಿಕರನ್ನೇ ಈತ ಟಾರ್ಗೆಟ್​ ಮಾಡುತ್ತಿದ್ದುದ್ದಾಗಿ ತಿಳಿದುಬಂದಿದೆ.

ಅಶೋಕ್​ ನಗರ ಠಾಣೆಯ ಎಎಸ್​ಐ ದೇವರಾಜು ಗಸ್ತಿನಲ್ಲಿದ್ದ ಸಮಯದಲ್ಲಿ ಮೊಬೈಲ್​ ಕಳ್ಳ ಮುಬಾರಕ್​​ ಸಿಕ್ಕಿಬಿದ್ದಿದ್ದಾನೆ. ಆರೋಪಿಯ ಜತೆಗಿದ್ದ ಇಬ್ಬರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಆರೋಪಿಯನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಆತನ ಈವರೆಗಿನ ಕಳ್ಳತನ ವಿಚಾರ ಬಯಲಾಗಿದೆ.

ಮುಬಾರಕ್​ ಬಳಿ ಇದ್ದ 5 ಲಕ್ಷ ಮೌಲ್ಯದ 101 ಮೊಬೈಲ್​ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಇಬ್ಬರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net