More

    ಶ್ರೀಮಂತರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದ ಮುಕೇಶ್​ ಅಂಬಾನಿ ಈಗ ಟಾಪ್​ 10ನಿಂದಲೇ ನಾಪತ್ತೆ!

    ನವದೆಹಲಿ: ಮುಕೇಶ್​ ಅಂಬಾನಿಯವರ ಬಗ್ಗೆ ಕೇಳದವರೇ ಇಲ್ಲ. ದೇಶದ ಶ್ರೀಮಂತರ ಪಟ್ಟಿಯಲ್ಲಿ ಅಗ್ರ ಸ್ಥಾನ ತಮ್ಮದಾಗಿಸಿಕೊಂಡಿರುವ ಮುಕೇಶ್​ ಅವರು, ಜಾಗತಿಕ ಮಟ್ಟದ ಶ್ರೀಮಂತರ ಪಟ್ಟಿಯಲ್ಲೂ ನಾಲ್ಕನೇ ಸ್ಥಾನದಲ್ಲಿದ್ದವರು. ವರ್ಷಾರಂಭದಲ್ಲಿ ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದ ಅಂಬಾನಿ ಇದೀಗ ಟಾಪ್​ 10 ಸ್ಥಾನಗಳಿಂದಲೇ ನಾಪತ್ತೆಯಾಗಿದ್ದಾರೆ.

    ಇದನ್ನೂ ಓದಿ: ರೇಪ್​ ಮಾಡಿ, ಚಲಿಸುವ ರೈಲಿನಿಂದ ಹೊರಗೆ ಎಸೆದ ಪಾಪಿಗಳು; ಸಾವು ಬದುಕಿನ ನಡುವೆ ಯುವತಿಯ ಹೋರಾಟ

    ಬ್ಲೂಮ್​ಬರ್ಗ್​ ಸಂಸ್ಥೆ ಜನವರಿ ತಿಂಗಳಲ್ಲಿ ಬಿಡುಗಡೆ ಮಾಡಿದ್ದ ಶ್ರೀಮಂತರ ಪಟ್ಟಿಯಲ್ಲಿ ಮುಕೇಶ್​ ಅಂಬಾನಿಯವರು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದರು. ಗೂಗಲ್​, ಫೇಸ್​ಬುಕ್​ನಂತಹ ಪ್ರಸಿದ್ಧ ಸಂಸ್ಥೆಯ ಹೂಡಿಕೆಯಿಂದಾಗಿ ರಿಲಯನ್ಸ್​ ಸಂಸ್ಥೆಯ ಮೌಲ್ಯ ಸಾಕಷ್ಟು ಏರಿಕೆ ಕಂಡಿತ್ತು. ಆದರೆ ಇದೀಗ ಮುಕೇಶ್​ ಅವರು ಒಂದೇ ಬಾರಿಗೆ ಆರು ಸ್ಥಾನ ಇಳಿದಿದ್ದು, 11ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಅಂಬಾನಿಯವರ ಮೌಲ್ಯ 6.62 ಲಕ್ಷ ಕೋಟಿ ರೂಪಾಯಿಯಿಂದ 5.63 ಲಕ್ಷ ಕೋಟಿ ರೂಪಾಯಿಗೆ ಇಳಿದಿದೆ. ಒರಾಕಲ್ ಕಾರ್ಪೊರೇಶನ್‌ನ ಲ್ಯಾರಿ ಎಲಿಸನ್ ಮತ್ತು ಗೂಗಲ್‌ನ ಸಹ-ಸಂಸ್ಥಾಪಕ ಸೆರ್ಗೆ ಬ್ರಿನ್ ಅವರ ನಂತರದ ಸ್ಥಾನಕ್ಕೆ ಅಂಬಾನಿ ಕುಸಿದಿದ್ದಾರೆ.

    ಇದನ್ನೂ ಓದಿ: ಮಗನನ್ನು ನೋಡಿಕೊಳ್ಳುವುದು ತುಂಬಾ ಕಷ್ಟವಾಗುತ್ತಿತ್ತು, ಅದಕ್ಕೇ ಕೊಂದು ಬಿಟ್ಟೆ! ತಪ್ಪೊಪ್ಪಿಕೊಂಡ ತಾಯಿ

    ಅಂಬಾನಿಯವರ ರಿಲಯನ್ಸ್​ ಷೇರುಗಳ ತಿದ್ದುಪಡಿಯಿಂದಾಗಿ ಈ ಕುಸಿತ ಕಂಡುಬಂದಿದೆ. ಷೇರುಗಳ ಮೌಲ್ಯದ ಸಾರ್ವಕಾಲಿಕ ಗರಿಷ್ಠ ಮಟ್ಟ (2,369.35ರೂ.)ದಿಂದ ಶೇ. 16 ಇಳಿಕೆ ಉಂಟಾಗಿದೆ. ಇದೀಗ ಷೇರುಗಳ ಮೌಲ್ಯ 1,994.15 ರೂ. ನಷ್ಟಿದೆ ಎನ್ನಲಾಗಿದೆ.

    ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!

    ಪರಿಚಯಸ್ಥ ಯುವಕನ ಮಾತು ನಂಬಿ ಕೆಲಸಕ್ಕಾಗಿ ರೆಸ್ಯೂಮ್ ಹಿಡಿದುಕೊಂಡು ಹೋದ ಯುವತಿಗೆ ಕಾದಿತ್ತು​ ಶಾಕ್​!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts