More

    ಮಗಳ ಪಾಲಿಗೆ ತಂದೆಯೇ ವಿಲನ್: ಡೈರಿಯಲ್ಲಿ ಅಪ್ಪನ ಪೈಶಾಚಿಕ ಕೃತ್ಯದ ಇಂಚಿಂಚೂ ಮಾಹಿತಿ ಬರೆದಿಟ್ಟ ಪುತ್ರಿ!

    ಬೆಂಗಳೂರು: ಸ್ವಂತ ಮಗಳಿಗೆ ತಂದೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸೆ ನೀಡಿರುವ ಘಟನೆ ನಗರದಲ್ಲಿ ಬೆಳಕಿಗೆ ಬಂದಿದ್ದು, ತಂದೆಯ ಕಿರುಕುಳದ ಇಂಚಿಂಚು ಮಾಹಿತಿಯನ್ನು ಸಂತ್ರಸ್ತ ಮಗಳು ತನ್ನ ಡೈರಿಯಲ್ಲಿ ಬರೆದಿಟ್ಟಿದ್ದಾಳೆ.

    ಆರೋಪಿ ತಂದೆ ರಾಹುಲ್​ ತನ್ನ 10 ವರ್ಷದ ಮಗಳ ಮೇಲೆಯೇ ಪೈಶಾಚಿಕ ಕೃತ್ಯ ಎಸಗಿರುವ ಆರೋಪ ಕೇಳಿಬಂದಿದೆ. ರಾಹುಲ್​ ತನ್ನ ಪತ್ನಿ ಅಂಜಲಿ ಜತೆ ಮೂರು ವರ್ಷಗಳ ಹಿಂದೆಯೇ ವಿಚ್ಛೇಧನ ಪಡೆದುಕೊಂಡಿದ್ದಾನೆ.

    ಇದನ್ನೂ ಓದಿ: ಮಗಳು ಸ್ನಾನ ಮಾಡುವುದನ್ನು 3 ವರ್ಷದಿಂದ ಕದ್ದು ವಿಡಿಯೋ ಮಾಡ್ತಿದ್ದ ತಂದೆ! ಮಗಳ ಕೈಗೆ ಸಿಕ್ಕಿಬಿದ್ದಿದ್ಹೇಗೆ?

    ಕೋರ್ಟ್​ನ ಆದೇಶದಂತೆ ಮಕ್ಕಳನ್ನು ಇಬ್ಬರು ಪಾಲನೆ ಪೋಷಣೆ ಮಾಡಬಹುದೆಂದು ಕೌಟಂಬಿಕ ನ್ಯಾಯಾಲಯ ಸೂಚನೆ ನೀಡಿದೆ. ಆದ್ರೆ ಡಿವೋರ್ಸ್ ಆದಾಗಿನಿಂದಲೂ ರಾಹುಲ್ ಮಗಳನ್ನು ನೋಡಿಕೊಳ್ಳುತ್ತಿದ್ದ. ಮೂರು ವರ್ಷಗಳಿಂದ ವಿಚ್ಛೇಧಿತ ಪತ್ನಿಗೆ ಮಗಳನ್ನು ನೋಡಲು ಅವಕಾಶ ನಿರಾಕರಿಸಿದ್ದ.

    ಇನ್ನು ಮಗಳು ಸ್ನಾನ ಮಾಡುವಾಗ ಬಾಗಿಲು ಹಾಕಿ ಕೊಳ್ಳದಂತೆ ಹಿಂಸೆ ನೀಡುತ್ತಿದ್ದನಂತೆ. ಅಲ್ಲದೆ, ನೀನು ದಪ್ಪಾ ಆಗಿದೀಯ ಎಂದು ವಾರದಲ್ಲಿ ಎರಡು ದಿನ ಊಟವನ್ನೇ ನೀಡುತ್ತಿರಲಿಲ್ಲವಂತೆ. ತಾಯಿ ಅಂಜಲಿ ಅದೆಷ್ಟೇ ಬಾರಿ ಮಗಳನ್ನು ಸಂಪರ್ಕಿಸಲು ಪ್ರಯತ್ನಿಸಿದ್ರು ಸಾಧ್ಯವಾಗಲಿಲ್ಲ.

    ಇತ್ತ ತಂದೆಯ ಕಾಟ ತಾಳಲಾರದೆ ತಾಯಿಗೆ ಕರೆ ಮಾಡಿ ಮಗಳು ಮಾಹಿತಿ ನೀಡಿದ್ದಾಳೆ. ಬಳಿಕ ಎಚ್ಚತ್ತ ಅಂಜಲಿ ಮಗಳು ಕೊಟ್ಟ ಮಾಹಿತಿ ಮೇರೆಗೆ ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ತಂದೆಯ ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: ಲವ್ವರ್​ ವಿರುದ್ಧ ದೂರು ಕೊಡಲು ಪೀಡಿಸಿದ ತಂದೆ: ಠಾಣೆಯ ಬಾತ್​ರೂಮ್​ಗೆ ಹೋದ ಹುಡುಗಿಯಿಂದ ಬಿಗ್​ ಶಾಕ್​!

    ಪರಿಚಯಸ್ಥ ಯುವಕನ ಮಾತು ನಂಬಿ ಕೆಲಸಕ್ಕಾಗಿ ರೆಸ್ಯೂಮ್ ಹಿಡಿದುಕೊಂಡು ಹೋದ ಯುವತಿಗೆ ಕಾದಿತ್ತು​ ಶಾಕ್​!​

    ಸೆಕ್ಸ್​ ಡಾಲ್​ ಮದ್ವೆಯಾಗಿ ಇದೀಗ ಕಣ್ಣೀರಿಡುತ್ತಿರುವ ಬಾಡಿಬಿಲ್ಡರ್: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ..!

    ತಿಮ್ಮಪ್ಪನ ಸನ್ನಿಧಿಗೆ ಹಿಂದೂ ಮಹಿಳೆಯನ್ನು ಬೆನ್ನ ಮೇಲೆ ಹೊತ್ತೊಯ್ದ ಮುಸ್ಲಿಂ ಯೋಧ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts