ಸೆಕ್ಸ್​ ಡಾಲ್​ ಮದ್ವೆಯಾಗಿ ಇದೀಗ ಕಣ್ಣೀರಿಡುತ್ತಿರುವ ಬಾಡಿಬಿಲ್ಡರ್: ಕಾರಣ ಕೇಳಿದ್ರೆ ಹುಬ್ಬೇರಿಸ್ತೀರಾ..!

Doll Wife
Published on

ನೂರ್​ ಸುಲ್ತಾನ್​: ಜಗತ್ತಿನಲ್ಲಿ ಎಂಥೆಂತಾ ವಿಚಿತ್ರ ಹವ್ಯಾಸವುಳ್ಳ ವ್ಯಕ್ತಿಗಳು ಇರುತ್ತಾರೆ ಎಂಬುದಕ್ಕೆ ಈ ವರದಿಯಲ್ಲಿ ಪರಿಚಯವಾಗಿರುವ ವ್ಯಕ್ತಿಯು ಸಹ ಒಂದು ಉದಾಹರಣೆ. ಸೆಕ್ಸ್​ ಡಾಲ್​ (ಲೈಂಗಿಕ ಬೊಂಬೆ) ಅನ್ನೇ ಮದುವೆಯಾಗಿರುವ ಬಾಡಿಬಿಲ್ಡರ್​ ಓರ್ವ ಮೊದಲ ಬಾರಿಗೆ ಅದರೊಟ್ಟಿಗೆ ಕ್ರಿಸ್​ಮಸ್​ ಆಚರಿಸುವ ಖುಷಿಯಲ್ಲಿರುವಾಗಲೇ ಸೆಕ್ಸ್​ ಡಾಲ್​ ಮುರಿದುಹೋಗಿರುವುದು ಹೃದಯವೇ ಬಿರುಕು ಬಿಟ್ಟಂತಾಗಿದೆಯಂತೆ.

ದಂಪತಿಗಳಾಗಿ ಮೊದಲನೇ ಕ್ರಿಸ್​ಮಸ್​ ಆಚರಿಸುವ ನಮ್ಮ ಯೋಜನೆಯೇ ಹಾಳಾಗಿ ಹೋಯಿತೆಂದು ಕಝಾಕಿಸ್ತಾನ್​ ಮೂಲದ ಬಾಡಿಬಿಲ್ಡರ್ ಯುರಿ ತೊಲೊಚ್ಕೋ​ ತನ್ನ ಬಾಧೆಯನ್ನು ತೋಡಿಕೊಂಡಿದ್ದಾರೆ. ಕ್ರಿಸ್​ಮಸ್​ಗೂ ಮೊದಲೇ ಸೆಕ್ಸ್​ ಡಾಲ್​ ತುಂಡು ತುಂಡಾಗಿ ಮುರಿದುಬಿದ್ದಿದ್ದು, ಮತ್ತೆ ಎಂದಿನಂತೆ ಕಾರ್ಯನಿರ್ವಹಿಸುವ ಹಾಗೂ ಸರಿಯಾದ ರೀತಿಯಲ್ಲಿ ಜೋಡಿಸಲು ಸಾಧ್ಯವಾ ಎಂಬ ಚಿಂತೆಯಲ್ಲಿ ಮುಳುಗಿದ್ದಾರಂತೆ. ಒಂದು ವೇಳೆ ಮತ್ತೆ ಎಂದಿನಂತಾದರೆ ಇಬ್ಬರಿಗೂ ದೊರೆಯುವ ಬಹುದೊಡ್ಡ ಉಡುಗೊರೆ ಎಂದಿದ್ದಾರೆ.

ಅಂದಹಾಗೆ ಮಾರ್ಗೋ ಹೆಸರಿನ ಸೆಕ್ಸ್​ ಡಾಲ್​ ಅನ್ನು ಯುರಿ ಕಳೆದ ನವೆಂಬರ್​ನಲ್ಲಿ ಕೆಲವೇ ಮಂದಿಯ ಅತಿಥಿಗಳ ನಡುವೆ ವರಿಸಿದ್ದಾರೆ. ಮಾರ್ಗೋಳನ್ನು ಮೊದಲ ಬಾರಿಗೆ ನೈಟ್​ ಕ್ಲಬ್​ ಒಂದರಲ್ಲಿ ಯುರಿ ಭೇಟಿಯಾದರಂತೆ. ಮಾರ್ಚ್​ನಲ್ಲೇ ಸರಳವಾಗಿ ಮದುವೆಯು ಆಗಿದ್ದರಂತೆ. ಅದಾದ ಬೆನ್ನಲ್ಲೇ ಕರೊನಾ ವೈರಸ್​ ವಕ್ಕರಿಸಿದ್ದರಿಂದ ನವೆಂಬರ್​ನಲ್ಲಿ ಕೆಲವೇ ಅತಿಥಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ವರಿಸಿದ್ದು, ವೈವಾಹಿಕ ಜೀವನ ನಡೆಸುತ್ತಿದ್ದಾರೆ.

ತಮ್ಮ ಸಂಬಂಧದ ಬಗ್ಗೆ ವಿವರಣೆ ನೀಡಿರುವ ಯುರಿ, ಸಾಮಾನ್ಯವಾಗಿ, ನಾನು ಮಾರ್ಗೊ ಬಗ್ಗೆ ಅಸೂಯೆ ಪಟ್ಟಿದ್ದೇನೆ. ಮದುವೆಯ ಬಳಿಕ ಆಕೆಯನ್ನು ಹೆಚ್ಚು ಮಂದಿಗೆ ತೋರಿಸುತ್ತಿಲ್ಲ. ಅವಳನ್ನು ಇನ್​ಸ್ಟಾಗ್ರಾಂನಿಂದಲೂ ನಿಷೇಧಿಸಿದ್ದೇನೆ. ಬಹುಶಃ ನಾನು ತುಂಬಾ ಸ್ವಾರ್ಥಿಯಾಗಿದ್ದೇನೆ. ಏಕೆಂದರೆ ಮಾರ್ಗೋ ಮೇಲೆ ನನಗೆ ತುಂಬಾ ಪ್ರೀತಿ ಇದೆ ಎಂದು ಹೇಳಿಕೊಂಡಿದ್ದಾರೆ.

ಕಝಾಕಿಸ್ತಾನದಲ್ಲಿ ಜನವರಿ 7ರಂದು ಕ್ರಿಸ್​ಮಸ್​ ದಿನವನ್ನಾಗಿ ಆಚರಿಸಲಾಗುತ್ತದೆ. ಸದ್ಯ ಮುರಿದು ಹೋಗಿರುವ ಮಾರ್ಗೋಳ ದುರಸ್ಥಿಗಾಗಿ ಯುರಿ ಎದುರು ನೋಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಯುರಿ ಅವಳು ಮುರಿದುಹೋಗಿದ್ದಾಳೆ. ಈಗ ಅವಳನ್ನು ರಿಪೇರಿ ಮಾಡಲಾಗುತ್ತಿದೆ. ಹೀಗಾಗಿ ಅವಳು ಬೇರೆ ನಗರದಲ್ಲಿದ್ದಾಳೆ. ಯಾವಾಗ ಸರಿಯಾಗುತ್ತಾಳೋ ಅದು ನಮ್ಮಿಬ್ಬರಿಗೂ ದೊರೆಯುವ ಉಡುಗೊರೆ ಎಂದು ಖುಷಿ ವ್ಯಕ್ತಪಡಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net