ಮಾಸಿಕ ಋತುಸ್ರಾವದ ಸಮಸ್ಯೆಯಿದ್ದು, ತುಂಬಾ ದಪ್ಪಗಿದ್ದೇನೆ- ಪರಿಹಾರವಿದೆಯೆ?

aptha
Published on
ನನ್ನ ವಯಸ್ಸು 21. ನನಗೆ ಸರಿಯಾಗಿ ತಿಂಗಳ ಮುಟ್ಟು ಆಗುತ್ತಿಲ್ಲ. ಔಷಧ ತೆಗೆದುಕೊಂಡರೂ ಏನೂ ಪ್ರಯೋಜನವಾಗುತ್ತಿಲ್ಲ. ನಾನು ಸ್ವಲ್ಪ ದಪ್ಪಗಿದ್ದೇನೆ. ಇದೇ ಕಾರಣಕ್ಕೆ ಅಂತ ಎಲ್ಲರೂ ಹೇಳುತ್ತಾರೆ. ದಯವಿಟ್ಟು ಯಾವರೀತಿಯ ಔಷಧ ತೆಗೆದುಕೊಳ್ಳಲಿ ತಿಳಿಸಿ...

ನೀವು ದಪ್ಪಗಿರುವುದು ಒಂದು ಕಾರಣವಾಗಿರಬಹುದು. ಅದರೊಂದಿಗೆ ಪಿಸಿಓಡಿ ಸಮಸ್ಯೆ, ಥೈರಾಯ್ಡ್ ತೊಂದರೆಯೂ ಇರಬಹುದು. ದೇಹದ ತೂಕಕ್ಕೂ ಹಾರ್ಮೋನಿನ ತೊಂದರೆಗೂ ಹತ್ತಿರದ ನಂಟು. ಆದ್ದರಿಂದ ವ್ಯಾಯಾಮ ಮತ್ತು ಆಹಾರದಲ್ಲಿ ಮಿತಿ ಹಾಕಿಕೊಂಡು ತೂಕ ತಗ್ಗಿಸಿಕೊಳ್ಳಿ.

ದಿನಕ್ಕೆ ಒಂದು ಗಂಟೆ ನೆಡಿಗೆ ಅಥವಾ ಯೋಗ ಇಲ್ಲವೇ ವ್ಯಾಯಾಮ ಕಡ್ಡಾಯವಾಗಿ ಮಾಡಿ. ಸಿಹಿತಿಂಡಿ, ಜಂಕ್‍ಫುಡ್, ಐಸ್‍ಕ್ರೀಂ, ಚಾಕೋಲೇಟ್ ತಿನ್ನಬೇಡಿ. ಹಣ್ಣು, ತರಕಾರಿ, ಮೊಳಕೆಕಾಳು ಸೇವಿಸಿ. ಕಾಫಿ, ಟೀ ಹೆಚ್ಚು ಬೇಡ. ರಾತ್ರಿಹೊತ್ತು ಬೇಗನೆ ಊಟಮಾಡಿ.

ಕಡಿಮೆ ಪ್ರಮಾಣದ ಆಹಾರವನ್ನು ಸೇವಿಸಿ. ನೀವು ಆಯುರ್ವೇದ ಆಸ್ಪತ್ರೆಗೆ ಹೋದಲ್ಲಿ ಪಂಚಕರ್ಮ ಚಿಕಿತ್ಸೆಯಲ್ಲಿ ವಿರೇಚನ ಮತ್ತು ಉದ್ವರ್ತನ ತೆಗೆದುಕೊಂಡಲ್ಲಿ ತೂಕ ಕಡಿಮೆಯಾಗುತ್ತದೆ. ರಾತ್ರಿ ಮಲಗುವ ಸಮಯದಲ್ಲಿ ಒಂದು ಲೋಟ ಬಿಸಿನೀರು ಕುಡಿಯಿರಿ. ಮಧ್ಯಾಹ್ನ ನಿದ್ರೆ ಮಾಡುವ ಅಭ್ಯಾಸವಿದ್ದಲ್ಲಿ ಬಿಟ್ಟುಬಿಡಿ.

ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net