

ನನ್ನವರು ಲೈಂಗಿಕ ಕ್ರಿಯೆಗೆ ಬಂದಾಗ ಸಮಸ್ಯೆಯಾಗುತ್ತಿದೆ. ಆಗ ತುಂಬ ನೋವಾಗುತ್ತದೆ. ಈ ಕ್ರಿಯೆಯಿಂದ ಅವರಿಗೆ ಬೇಸರವಾಗಿ ಎಷ್ಟೋ ಸಲ ನಮ್ಮಿಬ್ಬರಲ್ಲಿ ಮನಸ್ತಾಪವಾಗಿದೆ. ಅದೂ ಅಲ್ಲದೆ, ಅವರಿಗೆ ಮೊದಲಿನಂತೆ ಉದ್ರೇಕವಾಗುತ್ತಿಲ್ಲ ಹಾಗೂ ಚಿಕ್ಕದಾಗಿ ಕಾಣಿಸುತ್ತಿದೆ. ತುಂಬ ಹೊತ್ತು ಉದ್ರೇಕಗೊಳ್ಳದೆ ಬೇಗನೆ ಇಳಿದುಬಿಡುತ್ತದೆ. ಅದಕ್ಕೆ ಅವರು ನಿನ್ನದೇ ಸಮಸ್ಯೆಯೆಂದು ದೂರುತ್ತಾರೆ. ನಮಗೆ ಒಂದು ಒಂದು ಗಂಡು, ಒಂದು ಹೆಣ್ಣು ಮಗಳಿದ್ದಾರೆ.
ಅವರಿಬ್ಬರಿಗೆ ಮದುವೆ ವಯಸ್ಸು ಬಂದಿದೆ. ಈಗ ನಿಮಗೇನು ಬಯಕೆ ಎಂದು ನನ್ನಲ್ಲೇ ನಾನು ಅಂದುಕೊಂಡಿದ್ದನ್ನು ಅವರು ಕೇಳಿಸಿಕೊಂಡು ಮುನಿಸಿಕೊಂಡಿದ್ದರು. ಮಕ್ಕಳಿಬ್ಬರೂ ಬೇರೆ ಊರಿನಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರಕ್ಕೆರಡು ದಿನ ಇಲ್ಲಿಗೆ ಬರುತ್ತಾರೆ. ಅವರು ಇಲ್ಲದಿದ್ದಾಗ ನಾವಿಬ್ಬರೂ ಸುಖಪಡೋಣವೆಂದು ನನ್ನ ಯಜಮಾನರ ಬಯಕೆ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ. ನನ್ನ ಪತಿಗೆ ಉದ್ರೇಕದಲ್ಲಿ ತೊಂದರೆ ಇರುವುದರಿಂದ ಯಾವುದಾದರೂ ಗುಳಿಗೆ ತೆಗೆದುಕೊಳ್ಳಬಹುದೆ ಅಥವಾ ಬೇರೆ ಯಾವುದಾದರೂ ದಾರಿ ಇದೆಯೇ ತಿಳಿಸಿ.
ನನಗೂ ಯಾವುದಾದರೂ ವ್ಯಾಯಾಮ ಔಷಧಗಳನ್ನು ತಿಳಿಸಿ. ನಮ್ಮ ಯಜಮಾನರಿಗೆ ಈ ಇಳಿವಯಸ್ಸಿನಲ್ಲಿ ಸುಖ ಕೊಡಲು ನಾನು ಏನು ಮಾಡಲೂ ಸಿದ್ಧ. ನಿಮ್ಮ ಉತ್ತರಕ್ಕೆ ಕಾಯುತ್ತಿರುವೆ.
ಉತ್ತರ: ಸಾಮಾನ್ಯವಾಗಿ ಮೆನೋಪಾಸ್ ಅಂದರೆ ಋತುಬಂಧದ ನಂತರ ಜನನಾಂಗದಲ್ಲಿ ಆದ್ರತೆ ಕಡಿಮೆಯಾಗುತ್ತದೆ. ಹಾರ್ಮೋನಿನ ಸ್ರವಿಸುವಿಕೆ ಇಲ್ಲವಾಗುವುದರಿಂದ ಒಣಗಿದಂತಾಗುವುದರಿಂದ ಚಿಕ್ಕದಾದಂತೆ ಭಾಸವಾಗುತ್ತದೆ.
ಅದಕ್ಕೆ ತುಂಬ ಸುಲಭವಾದ ಚಿಕಿತ್ಸೆ ಇದೆ. ಸಮ್ಮಿಲನದ ಸಮಯದಲ್ಲಿ ಕೆ.ವೈ.ಜೆಲ್ ಲೇಪಿಸಿಕೊಳ್ಳಬೇಕು. ಜೆಲ್ ಇಲ್ಲದಿದ್ದಲ್ಲಿ ತುಪ್ಪ ಇಲ್ಲವೇ ಕೊಬ್ಬರಿ ಎಣ್ಣೆಯನ್ನೂ ಲೇಪಿಸಿಕೊಳ್ಳಬಹುದು. ಆಗ ಸರಾಗವಾಗಿ ಲೈಂಗಿಕ ಕ್ರಿಯೆ ಸಾಧ್ಯವಾಗುತ್ತದೆ.
ನಿಮ್ಮ ಪತಿಗೆ ಆಹಾರದಲ್ಲಿ ಬಾದಾಮಿ, ಅಂಜೂರವನ್ನು ತಿನ್ನಲು ಕೊಡಿ. ನಡಿಗೆ, ಯೋಗಾಸನ ಮಾಡಲಿ. ಅಶ್ವಗಂಧಾರಿಷ್ಟವನ್ನು ದಿನಕ್ಕೆ ಮೂರು ಬಾರಿ ಮೂರು ಚಮಚೆಯಷ್ಟನ್ನು ನೀರಿನೊಂದಿಗೆ ಬೆರೆಸಿ ಊಟದ ನಂತರ ಕುಡಿಯಲು ತಿಳಿಸಿ. ಲೈಂಗಿಕ ಕ್ರಿಯೆಗೆ ಮುನ್ನ ಫೋರ್ಪ್ಲೇಯಲ್ಲಿ ಹೆಚ್ಚು ತೊಡಗಿಕೊಳ್ಳಿ. ಶ್ರೀಗೋಪಾಲ ತೈಲವನ್ನು ಲೇಪಿಸಿಕೊಳ್ಳಲು ನಿಮ್ಮ ಪತಿಗೆ ಕೊಡಿ.
ಆಯುರ್ವೇದಕ್ಕೆ ಸಂಬಂಧಿಸಿದಂತೆ ಡಾ.ವಸುಂಧರಾ ಭೂಪತಿ ಅವರು ಬರೆದಿರುವ ವಿವಿಧ ರೀತಿಯ ಪರಿಹಾರಕ್ಕಾಗಿ https://www.vijayavani.net/ ಕ್ಲಿಕ್ಕಿಸಿ ಆರೋಗ್ಯ ವಿಭಾಗ ನೋಡಿ…