‘ಹೆಡ್​ಬುಷ್’ನಾಯಕಿ ಈಗ ಪವರ್​ಫುಲ್​ ಪೊಲೀಸ್ ಆಫೀಸರ್​..! ಸದ್ದು ಮಾಡುತ್ತಿದೆ ಫಸ್ಟ್ ಲುಕ್..

payal
Published on

ಬೆಂಗಳೂರು: ‘ಹೆಡ್​ ಬುಷ್, 'ಆರ್​ಎಕ್ಸ್​ 100', 'ಮಂಗಳವರಂ' ಮತ್ತಿತರ ಸಿನಿಮಾಗಳ ಮೂಲಕ ಜನಮನ್ನಣೆ ಗಳಿಸಿದ ಹೀರೋಯಿನ್​ ಪಾಯಲ್ ರಜಪೂತ್ 'ರಕ್ಷಣಾ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರೋಷನ್, ಮಾನಸ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಕ್ರೈಮ್ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಆಗಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಪಾಯಲ್ ಪವರ್ ಫುಲ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಇಂಪ್ರೆಸ್ ಮಾಡಲಿದ್ದಾರೆ.

ಸದ್ಯ ಈ ಸಿನಿಮಾ ಶರವೇಗದಲ್ಲಿ ರೂಪುಗೊಂಡಿದೆ. ಹರಿಪ್ರಿಯಾ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಪ್ರಣದೀಪ್ ಠಾಕೂರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ.

ಈ ಫಸ್ಟ್ ಲುಕ್ ನೋಡಿದರೆ ಇದು ಪಾಯಲ್ ರಜಪೂತ್ ಅವರ ಈವರೆಗಿನ ಸಿನಿಮಾಗಳಿಗಿಂತ ಸಂಪೂರ್ಣ ಭಿನ್ನವಾದ ಸಿನಿಮಾ ಎನಿಸುತ್ತದೆ. ಈ ಚಿತ್ರವನ್ನು ಶೀಘ್ರವೇ ಪ್ರೇಕ್ಷಕರ ಮುಂದೆ ತರಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ನಿರ್ಮಾಪಕ ಪ್ರಣದೀಪ್ ಠಾಕೂರ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಅವರು ಮಾತನಾಡಿ.. 'ರಕ್ಷಣಾ' ಒಂದು ಅಪರಾಧ ಜಗತ್ತಿನ ನಿಗೂಢ ತನಿಖಾ ಸ್ಟೋರಿ. ಪಾಯಲ್ಗೆ ಇದು ಒಳ್ಳೆಯ ಇಮೇಜ್ ತಂದುಕೊಡುತ್ತದೆ. ಇದು ಪೊಲೀಸ್ ಅಧಿಕಾರಿಯ ಜೀವನದಲ್ಲಿ ನಡೆದ ನೈಜ ಘಟನೆಯಿಂದ ಪ್ರೇರಿತವಾದ ಕಥೆಯನ್ನು ಆಧರಿಸಿದೆ. ಯಾವುದೇ ಹಂತದಲ್ಲೂ ರಾಜಿ ಮಾಡಿಕೊಳ್ಳದೆ ಹೆಚ್ಚಿನ ನಿರ್ಮಾಣ ಮೌಲ್ಯದೊಂದಿಗೆ ಸಿನಿಮಾ ಮಾಡುತ್ತಿದ್ದೇವೆ. ನಿರ್ಮಾಣೋತ್ತರ ಚಟುವಟಿಕೆಗಳು ನಡೆಯುತ್ತಿವೆ. ಚಿತ್ರದ ಬಿಡುಗಡೆ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net