More

  ‘ಅವನು ಹೇಗಾದರೂ ಸಾಯಲೇಬೇಕಿತ್ತು’: ಸಿಎಂ ಯೋಗಿ ಆದಿತ್ಯನಾಥ್ ಹೀಗೆಂದಿದ್ದೇಕೆ? ವಿಡಿಯೋ ವೈರಲ್..

  ಲಖನೌ: ಉತ್ತರ ಪ್ರದೇಶದ ಜೈಲ್​ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಮಾಫಿಯಾ ಡಾನ್ ಮುಕ್ತಾರ್ ಅನ್ಸಾರಿ ಹೃದಯಾಘಾತದಿಂದ ಮೃತಪಟ್ಟಿದ್ದರೂ, ವಿರೋಧ ಪಕ್ಷಗಳು ಸರ್ಕಾರವೇ ಉದ್ದೇಶಪೂರ್ವಕವಾಗಿ ಮುಗಿಸಿದೆ ಎಂದು ಆರೋಪಿಸುತ್ತಿರುವುದಕ್ಕೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿರುಗೇಟು ನೀಡಿದ್ದಾರೆ. ಅವರು ಟಿವಿ ಕಾರ್ಯಕ್ರಮದಲ್ಲಿ ಹೇಳಿರುವ ‘ಅವನು ಹೇಗಾದರೂ ಸಾಯಲೇಬೇಕಿತ್ತು’ ವೀಡಿಯೋ ವೈರಲ್​ ಆಗುತ್ತಿದೆ.

  ಇದನ್ನೂ ಓದಿ: ‘ಹತ್ತು ವರ್ಷದಲ್ಲಿ 25 ಕೋಟಿ ಜನ ಬಡತನದಿಂದ ಹೊರಬಂದಿದ್ದಾರೆ’: ಪ್ರಧಾನಿ ಮೋದಿ

  ದರೋಡೆಕೋರನ ಸಾವಿಗೆ ಹೃದಯಾಘಾತ ಕಾರಣವೆಂದು ವೈದ್ಯಕೀಯ ವರದಿಗಳು ಹೇಳಿವೆ. ಆದರೆ ವಿರೋಧ ಪಕ್ಷಗಳು ಅವನ ಸಾವಿನಲ್ಲೂ ರಾಜಕೀಯ ಮಾಡಲು ಹೊರಟಿವೆ ಎಂದರು.

  ಪ್ರತಿಪಕ್ಷಗಳ ಆರೋಪಗಳ ಕುರಿತ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಉತ್ತರ ಪ್ರದೇಶ ಮುಖ್ಯಮಂತ್ರಿ, “ಮರ್ನಾ ತೋ ಥಾ ಹೈ (ಅವನು ಹೇಗಾದರೂ ಸಾಯಲೇಬೇಕು) … ನೀವು ಹೇಳಿ, ನೂರಾರು ಜನರನ್ನು ಕೊಂದ ವ್ಯಕ್ತಿ ಎಷ್ಟು ದಿನ ತಪ್ಪಿಸಿಕೊಳ್ಳುತ್ತಾನೆ?” ಎಂದು ಪ್ರಶ್ನಿಸಿದ್ದಾರೆ.

  “ಕಾಂಗ್ರೆಸ್ ನವರು ಅನ್ಸಾರಿಯನ್ನು ಉಳಿಸಲು ಕೈಲಾದಷ್ಟೂ ಯತ್ನಿಸಿದ್ದರು. ಇನ್ನು ಸಮಾಜವಾದಿ ಪಕ್ಷದ ಜನರೇ ಅವನ ರಕ್ಷಕರು. ನೀವು ಅವರಿಂದ (ಪ್ರತಿಪಕ್ಷಗಳಿಂದ) ಏನನ್ನು ನಿರೀಕ್ಷಿಸುತ್ತೀರಿ?” ಎಂದು ಯೋಗಿ ಪ್ರಶ್ನಿಸಿದರು.

  ಶ್ರೀರಾಮ ಭಕ್ತ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ನಿಧನರಾದಾಗ ಸಮಾಜವಾದಿ ಪಕ್ಷವಾಗಲೀ ಅಥವಾ ಕಾಂಗ್ರೆಸ್ ನಾಯಕರಾಗಲೀ ಸಂತಾಪ ಸೂಚಿಸಲಿಲ್ಲ. ಆದರೆ, ಮಾಫಿಯಾಗಳ ವಿರುದ್ಧ ಮೊಸಳೆ ಕಣ್ಣೀರು ಸುರಿಸಿದರು. ಇದೇ ಪ್ರತಿಪಕ್ಷಗಳು ಮತ್ತು ಬಿಜೆಪಿ ನಡುವೆ ಇರುವ ವ್ಯತ್ಯಾಸವಾಗಿದೆ ಎಂದು ಆದಿತ್ಯನಾಥ್ ಹೇಳಿದರು.

  ಅನ್ಸಾರಿ ಸಾವು: ಉತ್ತರ ಪ್ರದೇಶದಲ್ಲಿ ಐದು ಬಾರಿ ಶಾಸಕನಾಗಿದ್ದ ಅನ್ಸಾರಿ ಮಾಫಿಯಾ ಡಾನ್​ ಆಗಿದ್ದ. ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೆ ಗುರಿಯಾಗಿ ಬಂದಾ ಜೈಲಿನಲ್ಲಿದ್ದಾಗ ಮಾರ್ಚ್ 28 ರಂದು ಹೃದಯಾಘಾತದಿಂದ ಮೃತಪಟ್ಟಿದ್ದ. ಈತನ ಮರಣದ ನಂತರ, ಸಮಾಜವಾದಿ ಪಕ್ಷ ಮತ್ತು ಅಸಾದುದ್ದೀನ್ ಓವೈಸಿ ನೇತೃತ್ವದ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದ್-ಉಲ್-ಮುಸ್ಲಿಮೀನ್ (ಎಐಎಂಐಎಂ) ನಾಯಕರು ಸೇರಿದಂತೆ ಅನೇಕ ಜನರು ಯೂಸುಫ್‌ಪುರಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಆತನ ಸಾವು ಮತ್ತು ನಂತರದ ಬೆಳವಣಿಗೆಗಳು ರಾಜಕೀಯ ಚರ್ಚೆ ಹುಟ್ಟುಹಾಕಿತ್ತು.

  ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆ ಪೂರ್ಣ ಪ್ರಮಾಣದ ಸದಸ್ಯತ್ವ: ನಿರ್ಣಯದ ಪ್ರತಿ ಹರಿದು ಹಾಕಿದ ಇಸ್ರೇಲ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts