ಕರ್ತವ್ಯನಿರತ ಬಸ್​ ಚಾಲಕ ಹೃದಯಾಘಾತಕ್ಕೆ ಬಲಿ

death
Published on

ವಿಜಯನಗರ: ಕರ್ತವ್ಯನಿರತ ಖಾಸಗಿ ಬಸ್​ ಚಾಲಕನಿಗೆ ಹೃದಯಾಘಾತವಾಗಿ ಮೃತಪಟ್ಟ ಘಟನೆ ಸಂಡೂರು ತಾಲೂಕಿನಲ್ಲಿ ಸಂಭವಿಸಿದೆ.

ಕೂಡ್ಲಿಗಿ ತಾಲೂಕಿನ ಕಾನಾಹೊಸಳ್ಳಿ ಸಮೀಪದ ಶಾಂತನಾಹಳ್ಳಿ ಗ್ರಾಮದ ಎಸ್.ಬಿ. ಪತ್ರೇಗೌಡ(31) ಮೃತರು. ಎದೆ ನೋವು ಕಾಣಿಸಿಕೊಂಡಿದ್ದರಿಂದ ಎಚ್ಚೆತ್ತ ಚಾಲಕ ಬಸ್ ನಿಲ್ಲಿಸಿ ಜನರ ಪ್ರಾಣ ಉಳಿಸಿ ತನ್ನ ಪ್ರಾಣ ಬಿಟ್ಟಿದ್ದಾರೆ. ಇದನ್ನೂ ಓದಿರಿ ಬೆಂಗಳೂರಲ್ಲಿ ಮಧ್ಯರಾತ್ರಿ ತಾಯಿ-ಮಗನ ಬರ್ಬರ ಹತ್ಯೆ, ಬೆಚ್ಚಿಬಿದ್ದ ಸ್ಥಳೀಯರು

ಪತ್ರೇಗೌಡ ಖಾಸಗಿ ಬಸ್​ ಚಾಲಕರಾಗಿದ್ದ ಪತ್ರೇಗೌಡ, ಬುಧವಾರ ಬೆಳಗ್ಗೆ ಸಂಡೂರು ತಾಲೂಕಿನ ರಾಜಪುರದಿಂದ ಮೊಳಕಾಲ್ಮೂರಿನತ್ತ ಬಸ್​ ಚಲಾಯಿಸಿಕೊಂಡು ಹೋಗುತ್ತಿದ್ದರು. ಮಾರ್ಗಮಧ್ಯೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚತ್ತೆ ಚಾಲಕ ಬಸ್​ ಅನ್ನು ನಿಲ್ಲಿಸುವ ಮಲಕ ಪ್ರಯಾಣಿಕರ ಪ್ರಾಣ ಉಳಿಸಿದ್ದಾರೆ.

ಕೂಡಲೇ ನಿರ್ವಾಹಕರು ಚಾಲಕನನ್ನು ಸಮೀಪದ ಮೆಟ್ರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಪತ್ರೇಗೌಡ ಮೃತಪಟ್ಟಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net