

ಬೆಳಗಾವಿ: ಪಾರ್ಟಿಗೆ ಹೋಗ್ಬೇಕು ಚಪಾತಿ ಮಾಡಮ್ಮ, ತಿಂದು ಹೋಗುವೆ ಎನ್ನುತ್ತ ಮನೆಯಿಂದ ಹೊರ ಹೋದ ಮಗನಿಗಾಗಿ ರಾತ್ರಿಯೆಲ್ಲ ಕಾದುಕುಳಿತ ತಂದೆ-ತಾಯಿಗೆ ಮಗ ಸಿಕ್ಕಿದ್ದು ಹೆಣವಾಗಿ!
ಇಂತಹ ಹೃದಯವಿದ್ರಾವಕ ಘಟನೆ ಮೂಡಲಗಿ ತಾಲೂಕಿನ ಕಲ್ಲೋಳಿ ಗ್ರಾಮದಲ್ಲಿ ಸಂಭವಿಸಿದೆ. ಮಹೇಶ ಹುಕ್ಕೇರಿ(25) ಮೃತ ದುರ್ದೈವಿ. ಇದನ್ನೂ ಓದಿರಿ ಪರ್ಮನೆಂಟ್ ಜಾಬ್ ಬೇಕಂದ್ರೆ ಬೆತ್ತಲೆ ವಿಡಿಯೋ ಕಳಿಸ್ಬೇಕು! ಓಕೆ ಅಂತ ವಿಡಿಯೋ ಕಳಿಸಿದ ಬೆನ್ನಲ್ಲೇ ಕಾದಿತ್ತು ಶಾಕ್
ಯಾವುದೋ ಪಾರ್ಟಿ ಇದೆ. ಅಲ್ಲಿಗೆ ಹೋಗಬೇಕಿದೆ. ಹಸಿವಾಗ್ತಿದೆ ಅಮ್ಮ ಚಪಾತಿ ಮಾಡಿಕೊಂಡು ಎನ್ನುತ್ತಾ ಅಲ್ಲೇ ಕುಳಿತ ಮಹೇಶ, ಯಾರದ್ದೋ ಕರೆ ಬಂತೆಂದ್ದು ಮೊಬೈಲ್ ಹಿಡಿದು ಮನೆಯಿಂದ ಹೊರ ಹೋಗಿದ್ದ. ಇನ್ನೇನು ಮಗ ಬರ್ತಾನೆ ಎಂದು ಅಮ್ಮ ಚಪಾತಿ ಮಾಡಿ ಕಾಯುತ್ತಲೇ ಇದ್ದರು ಆತ ಮಾತ್ರ ಬರಲೇ ಇಲ್ಲ.
ಸೋಮವಾರ ರಾತ್ರಿ ಇಡೀ ಮಹೇಶನಿಗಾಗಿ ತಂದೆ-ತಾಯಿ ಕಾಯುತ್ತಲೇ ಅರೆಬರೆ ನಿದ್ರೆ ಮಾಡಿದ್ದರು. ಮಂಗಳವಾರ ಬೆಳಗ್ಗೆ ಏಳುತ್ತಲೇ ಹೆತ್ತವರಿಗೆ ಆಘಾತ ಕಾದಿತ್ತು. ರಸ್ತೆ ಪಕ್ಕದಲ್ಲಿ ಅನಾಥ ಶವ ಬಿದ್ದಿದೆ ಎಂದು ಗ್ರಾಮಸ್ಥರು ಕೂಗಾಡುತ್ತಿದ್ದರು. ಏನೆಂದು ಹೊರ ಬಂದ ತಂದೆ-ತಾಯಿಗೆ ಕಂಡನ್ನು ಮಹೇಶನ ಶವ.
ಯಾರೋ ಕೊಲೆ ಮಾಡಿ ಬಿಸಾಡಿದ್ದಾರೆ ಎನ್ನಲಾಗಿದ್ದು, ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಯ್ಯೋ, ಮಗನೇ ಹಸಿವಾಗ್ತಿದೆ ಚಪಾತಿ ಮಾಡಮ್ಮ ಅಂದು ಈಗ ಬಾರದ ಲೋಕಕ್ಕೆ ಹೋಗಿಬಿಟ್ಯಾ...ಎಂದು ಹೆತ್ತಮ್ಮ ಅಳುತ್ತಿದ್ದ ದೃಶ್ಯ ಮನಕಲಕುವಂತಿತ್ತು.