5ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟ 23 ವರ್ಷದ ಗಾಯಕ! ಮದುವೆಯಾಗಿ ಹದಿನೈದೇ ದಿನಕ್ಕೆ ಸಾಯುವಂತದ್ದೇನಾಗಿತ್ತು?

singer
Published on

ಬ್ರೆಸಿಲಿಯಾ: ವಿನೂತನ ರೀತಿಯಲ್ಲಿ ಸಂಗೀತ ಸಂಯೋಜನೆ ಮಾಡಿಕೊಂಡು, ಹಾಡು ಹೇಳಿಕೊಂಡು ಸಂಗೀತ ಕ್ಷೇತ್ರದಲ್ಲಿ ದೊಡ್ಡ ಕನಸನ್ನೇ ಹೊತ್ತಿದ್ದ ಗಾಯಕನೊಬ್ಬ ತನ್ನ 23ನೇ ವರ್ಷಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬ್ರೆಜಿಲ್​ನಲ್ಲಿ ನಡೆದಿದೆ. ಗಾಯಕ ಆತ್ಮಹತ್ಯೆ ಮಾಡುವಾಗ ಆತನಿಗೆ ಮದುವೆಯಾಗಿ ಕೇವಲ 15 ದಿನಗಳಾಗಿತ್ತು ಎನ್ನಲಾಗಿದೆ.

ಬ್ರೆಜಿಲ್​ನ ಹಾಡುಗಾರ ಎಂಸಿ ಕೆವಿನ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಈತ ತನನ ಗರ್ಲ್​ಫ್ರೆಂಡ್ ಡಯಲೀನ್ ಬೆಜೆರಾ ಜತೆ 15 ದಿನಗಳ ಹಿಂದೆಯಷ್ಟೇ ಮದುವೆಯಾಗಿದ್ದ. ಹೆಂಡತಿ ಜತೆ ಹೋಟೆಲ್​ ಒಂದರಲ್ಲಿ 11ನೇ ಮಹಡಿಯಲ್ಲಿ ವಾಸವಾಗಿದ್ದ. ಅದೇ ಹೋಟೆಲ್​ನ ಐದನೇ ಮಹಡಿಯಲ್ಲಿ ಆತನ ಸ್ನೇಹಿತ ವಾಸವಿದ್ದು, ಆತನ ರೂಮಿಗೆ ತೆರಳಿದ ಗಾಯಕ ಅಲ್ಲಿಂದ ಕೆಳಗೆ ಹಾರಿದ್ದಾನೆ.

ತಕ್ಷಂ ಕೆವಿನ್​ ಅನ್ನು ಆಸ್ಪತ್ರೆಗೆ ದಾಖಲಿಸಲಾಗಿದೆಯಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಪ್ರಾಣ ಬಿಟ್ಟಿದ್ದಾನೆ. ಗಂಡನ ಸಾವಿನಿಂದಾಗಿ ಬೇಸರಗೊಂಡಿರುವ ಡಯಲೀನ್ ಬೆಜೆರಾ ತನ್ನ ಸಾಮಾಜಿಕ ಜಾಲತಾಣಗಳ ಖಾತೆಗಳ ಫೋಟೋಗಳನ್ನು ಕಪ್ಪು ಚಿತ್ರಕ್ಕೆ ಬದಲಾಯಿಸಿದ್ದಾಳೆ. ಅಂದ ಹಾಗೆ ಕೆವಿನ್​ ಸಾವಿಗೆ ಕಾರಣವೇನು ಎನ್ನುವುದರ ಬಗ್ಗೆ ಪೊಲೀಸರ ತನಿಖೆಯಿಂದ ತಿಳಿದುಬರಬೇಕಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net