ಪ್ರಶ್ನೆಪತ್ರಿಕೆ ಡೀಲ್ ಕಿಂಗ್‌ಪಿನ್ ಕರೊನಾಗೆ ಬಲಿ!

kingpin
Published on

ತುಮಕೂರು: ಕರೊನಾ ಸೋಂಕು ಪ್ರತಿನಿತ್ಯ ತೀವ್ರವಾಗಿ ಹಬ್ಬುತ್ತಿದೆ. ಪ್ರತಿನಿತ್ಯ ನೂರಾರು ಜನರು ಸೋಂಕಿಗೆ ಬಲಿಯಾಗುತ್ತಿದ್ದು, ಕರ್ನಾಟಕದ ಪ್ರಶ್ನೆಪತ್ರಿಕೆ ಡೀಲ್ ಕಿಂಗ್‌ಪಿನ್ ಎನಿಸಿಕೊಂಡಿದ್ದ ಆರೋಪಿಯೂ ಸೋಂಕಿನಿಂದಾಗಿ ಕೊನೆಯುಸಿರೆಳೆದಿದ್ದಾನೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಬಿದರೆಕಾಗ್ಗೆರೆ ಮೂಲದ ಶಿವಕುಮಾರ್(65) ಸಾವನ್ನಪ್ಪಿದ ಕಿಂಗ್‌ಪಿನ್. ಆತ ಎಸ್.ಎಸ್.ಎಲ್.ಸಿ, ಪಿಯುಸಿ, ಪೊಲೀಸ್ ಎಕ್ಸಾಂಗಳ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುತ್ತಿದ್ದ ಎನ್ನುವ ಆರೋಪವಿದೆ. ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ ಆತ ವಿಚಾರಣೆ ಎದುರಿಸುತ್ತಿದ್ದ.

ಶಿವಕುಮಾರ್​ಗೆ ಕೆಲ ದಿನಗಳ ಹಿಂದೆ ಕರೊನಾ ದೃಢವಾಗಿತ್ತು. ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ತೀವ್ರ ಉಸಿರಾಟದ ಸಮಸ್ಯೆಯಿಂದ ಆತ ಸಾವನ್ನಪ್ಪಿರುವುದಾಗಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net