ರಾಜಕೀಯದ ನೆಪದಲ್ಲಿ ಕರ್ನಾಟಕದ ಹೆಸರಿಗೆ ಕಳಂಕ ತರಬೇಡಿ; ಪೋಸ್ಟರ್ ಮೂಲಕ ಎಚ್ಚರಿಕೆ ನೀಡಿದ ಬಿಜೆಪಿ

52542
Published on

ಬೆಂಗಳೂರು: ಭಾರತ್ ಜೋಡೋ ಯಾತ್ರೆ ಕರ್ನಾಟಕ ಪ್ರವೇಶಿಸುತ್ತಿದ್ದಂತೆ, ರಾಜ್ಯ ರಾಜಕಾರಣದಲ್ಲೂ ವಾದ, ಪ್ರತಿವಾದಗಳು ಹೆಚ್ಚಾಗುತ್ತಲೇ ಇವೆ. ಬಿಜೆಪಿ, ಕಾಂಗ್ರೆಸ್ ನಾಯಕರ ನಡುವೆ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ. ಇದೀಗ ಭಾರತ್ ಜೋಡೋ ಯಾತ್ರೆಯ ವೇಳೆ ಕರ್ನಾಟಕದ ಧ್ವಜದಲ್ಲಿ ರಾಹುಲ್ ಗಾಂಧಿ ಫೋಟೋ ಬಳಸಿರುವ ವಿಚಾರವಾಗಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

ಭಾರತ್ ಜೋಡೋ ಯಾತ್ರೆ ವೇಳೆ ಕನ್ನಡದ ಬಾವುಟದಲ್ಲಿ ರಾಹುಲ್ ಗಾಂಧಿಯ ಫೋಟೋ ಅಂಟಿಸಲಾಗಿತ್ತು. ಇದಕ್ಕೆ ಸಾಮಾಜಿಕ ಜಾಲತಾಣದಲ್ಲೂ ಸಾಕಷ್ಟು ಆಕ್ರೋಶ ಕೇಳಿ ಬಂದಿತ್ತು. ಇದೀಗ ಬಿಜೆಪಿ ನಾಡ ಧ್ವಜಕ್ಕೆ ಕಾಂಗ್ರೆಸ್ ಅವಮಾನಿಸಿದೆ ಎಂದು ಆರೋಪ ಮಾಡಿದೆ. ಇದಕ್ಕಾಗಿ ಹಲವು ಬರಹಗಳುಳ್ಳ ಪೋಸ್ಟರ್​​ಗಳನ್ನು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ.

ನಿಮ್ಮ ರಾಜಕೀಯದ ಆಟಕ್ಕಾಗಿ ಕರ್ನಾಟಕದ ಹೆಸರು ಬಳಸಬೇಡಿ. ಅಧಿಕಾರಕ್ಕಾಗಿ ಕರ್ನಾಟಕವನ್ನು ಭ್ರಷ್ಟರಾಜ್ಯ ಎನ್ನುತ್ತಿದ್ದೀರಿ. ನಿಮ್ಮ ಜಾತ್ರೆಗಳ ನೆಪದಲ್ಲಿ ಕರ್ನಾಟಕದ ಹೆಸರಿಗೆ ಮಸಿ ಬಳಿಯಬೇಡಿ. ನಿಮ್ಮ ತೆವಲುಗಳಿಗೆ ರಾಜ್ಯದ ಹೆಸರು ಬಸುತ್ತಿದ್ದೀರಿ. ನಿಮ್ಮ ಅಜ್ಜಿ, ತಾಯಿಗೆ ರಾಜಕೀಯ ಮರುಹುಟ್ಟು ನೀಡಿದ್ದೇ ಕರ್ನಾಟಕ ಎಂಬುವುದು ನೆನಪಿರಲಿ. ಕರುನಾಡಿನ ಬಗ್ಗೆ ಮಾತನಾಡುವಾಗೆ ಎಚ್ಚರವಿರಲಿ ಎಂದು ಬರೆದಿರುವ ಪೋಸ್ಟರ್​ಗಳನ್ನು ಕಾಂಗ್ರೆಸ್ ವಿರುದ್ಧ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net