ಗಾಂಧಿ ಜಯಂತಿ ಹಿನ್ನೆಲೆ; ಖಾದಿ ಬಟ್ಟೆ ಶಾಪಿಂಗ್ ಮಾಡಿದ ಸಿಎಂ ಬೊಮ್ಮಾಯಿ

CM Bommai 546
Published on

ಬೆಂಗಳೂರು: ಗಾಂಧಿ ಜಯಂತಿ ಹಿನ್ನೆಲೆ, ಖಾದಿ ಎಂಪೋರಿಯಂಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದ್ದಾರೆ. ಸಿಎಂ ಬೊಮ್ಮಾಯಿ ಮಹಾತ್ಮ ಗಾಂಧೀಜಿ ಫೋಟೋಗೆ ಕೈಮುಗಿದು ನಮಸ್ಕರಿಸಿದ್ದಾರೆ. ಈ ವೇಳೆ ಅಲ್ಲಿನ ಸಿಬ್ಬಂದಿ ಶಾಲು ಹೊದೆಸಿ ಸನ್ಮಾನ ಮಾಡಿದ್ದಾರೆ.

ಖಾದಿ ಎಂಪೋರಿಯಂಗೆ ಭೇಟಿ ನೀಡಿದ ಸಿಎಂ, ಶಾಪಿಂಗ್ ಮಾಡಿದ್ದಾರೆ. ಬಟ್ಟೆ ಖರೀದಿಸುವ ಮೂಲಕ, ಖಾದಿ ಬಟ್ಟೆಗೆ ಪ್ರೋತ್ಸಾಹ ನೀಡಬೇಕೆಂಬ ಸಂಕೇತ ನೀಡಿದ್ದಾರೆ. ಈ ವೇಳೆ ಗ್ರಾಹಕರ ಕೋರಿಕೆಯ ಮೇರೆಗೆ, ಸೆಲ್ಫಿಗೂ ಫೋಸ್ ಕೊಟ್ಟಿದ್ದಾರೆ.

ಸಿಎಂ ಬಸವರಾಜ ಬೊಮ್ಮಾಯಿ ಖಾದಿ ಎಂಪೋರಿಯಂನಿಂದ, ಒಂದು ಲೇಡಿಸ್ ಟಾಪ್ ಡ್ರೆಸ್, ಒಂದು ಫುಲ್​ ಶರ್ಟ್​, ಒಂದು ಟೀ ಶರ್ಟ್​, ಮೂರು ಜುಬ್ಬಾ ಖರೀದಿಸಿದ್ದಾರೆ. ಖಾದಿ ಎಂಪೋರಿಯಂನಲ್ಲಿ 3329 ರೂ. ಬೆಲೆಯ ವಿವಿಧ ಮಾದರಿಯ 8 ಬಟ್ಟೆಗಳನ್ನು ಖರೀದಿ ಮಾಡಿದ್ದಾರೆ.

ಈ ವೇಳೆ ಹುಬ್ಬಳ್ಳಿಯ ಖಾದಿ ಎಂಪೋರಿಯಂಗೆ ಭೇಟಿ ನೀಡಬೇಕೆಂದು ಅಲ್ಲಿನ ಸಿಬ್ಬಂದಿ ಸಿಎಂಗೆ ಮನವಿ ಮಾಡಿದ್ದಾರೆ. ಕಳೆದ ಬಾರಿ ಆಶ್ವಾಸನೆ ನೀಡಿದರೂ ಬಂದಿಲ್ಲ. ಈ ಬಾರಿ ಬಂದು ಹಲವು ಕಾರ್ಯಕ್ರಮಗಳನ್ನು ನಡೆಸಿಕೊಡಬೇಕು ಎಂದು ಮನವಿ ಸಲ್ಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net