ಗುಜರಾತ್: ಎಲ್ಲೆಡೆಯೂ ನವರಾತ್ರಿ ಹಬ್ಬದ ಸಂಭ್ರಮ. ಜನರು ಭಕ್ತಿಯಿಂದ ನವರಾತ್ರಿ ಹಬ್ಬ ಆಚರಣೆ ಮಾಡಿ ಸಂಭ್ರಮಿಸುತ್ತಿದ್ದಾರೆ. ದೇಶದ ವಿವಿಧ ಭಾಗಗಳಲ್ಲಿ ಸ್ಥಳೀಯ ಸಂಪ್ರದಾಯಗಳಿಗೆ ಅನುಗುಣವಾಗಿ ನವರಾತ್ರಿ ಹಬ್ಬ ಆಚರಣೆ ಮಾಡುತ್ತಾರೆ. ಉತ್ತರ ಭಾರತದ ಕಡೆ ನವರಾತ್ರಿ ಆಚರಣೆಯಲ್ಲಿ ಸಂಗೀತ ಮತ್ತು ನೃತ್ಯಕ್ಕೆ ಹೆಚ್ಚು ಮಹತ್ವ. ನವರಾತ್ರಿ ತಿಂಗಳಲ್ಲಿ ಜನರು ಗರ್ಬಾ, ದಾಂಡಿಯ ನೃತ್ಯ ಮಾಡುತ್ತಾ ಹಬ್ಬ ಆಚರಿಸುತ್ತಾರೆ.
ನವರಾತ್ರಿ ಹಬ್ಬದ ಸಂಭ್ರಮದಲ್ಲಿ, ಒಂದು ಲಕ್ಷಕ್ಕಿಂತಲೂ ಅಧಿಕ ಜನರು ವಡೋದರಾದಲ್ಲಿ ಸಮೂಹವಾಗಿ ಸೇರಿಕೊಂಡು ದಾಂಡಿಯ ನೃತ್ಯ ಮಾಡಿದ್ದಾರೆ. ದೀಪದ ಬೆಳಕಿನಲ್ಲಿ ಶಿಸ್ತುಬದ್ಧವಾಗಿ ಮಾಡಿರುವ ದಾಂಡಿಯ ನೃತ್ಯದ ಡ್ರೋನ್ ವಿಡಿಯೋ ಇದೀಗ ವೈರಲ್ ಆಗುತ್ತಿದೆ. ಈ ದೃಶ್ಯವನ್ನು ನೋಡಿದ ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.
ಈ ವಿಡಿಯೋ ಟ್ವಿಟರ್ನಲ್ಲಿ ವೈರಲ್ ಆಗುತ್ತಿದ್ದಂತೆ 1.17 ಲಕ್ಷ ಜನರು ವೀಕ್ಷಿಸಿದ್ದಾರೆ. ವಿಡಿಯೋ ನೋಡಿದ ಅನೇಕರು ನಾವು ಕೂಡ ದಾಂಡಿಯ ನೃತ್ಯದ ತಂಡದಲ್ಲಿ ಸೇರಿಕೊಳ್ಳುತ್ತೇವೆ ಎಂದು ಕಮೆಂಟ್ ಮಾಡಿದ್ದಾರೆ.
ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷದಿಂದ ಹಬ್ಬದ ಸಂರ್ಭಮ ಕಡಿಮೆಯಾಗಿತ್ತು. ಆದರೆ ಈ ಬಾರಿ ದೇಶದ ಎಲ್ಲೆಡೆಯೂ ಸಂಭ್ರಮದಿಂದಲೇ ನವರಾತ್ರಿ ಹಬ್ಬ ಆಚರಿಸುತ್ತಿದ್ದಾರೆ.
#WATCH | Gujarat: Devotees in large numbers play Garba in Vadodara Navratri festival VNF on the fifth day of Navratri in Vadodara (30.09)
— ANI (@ANI) October 1, 2022
(Video Source: VNF) pic.twitter.com/OJtwbNY5bd