ನವ ದೆಹಲಿ: 90ರ ದಶಕದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯನ್ನು ಜನ ಇಂದಿಗೂ ನೆನೆಪಿಸಿಕೊಳ್ಳುತ್ತಾರೆ. ರಾಮಾನಂದ್ ಸಾಗರ್ ಅವರ ನಿರ್ದೇಶನದಲ್ಲಿ 1990ರಲ್ಲಿ ಮೂಡಿಬಂದ ಈ ಧಾರಾವಾಹಿ ಜನಮಾನಸದಲ್ಲಿ ಇಂದಿಗೂ ಸ್ಥಾನ ಪಡೆದುಕೊಂಡಿದೆ. ಧಾರಾವಾಹಿ ಬಂದು 30 ವರ್ಷಗಳು ಕಳೆದರೂ ಪಾತ್ರಧಾರಿಗಳನ್ನು ಜನರು ನೆನೆಪಿಸಿಕೊಳ್ಳುತ್ತಲೇ ಇದ್ದಾರೆ.
ರಾಮಾಯಣ ಧಾರಾವಾಹಿಯಲ್ಲಿ ಪಾತ್ರ ಮಾಡಿದ ಕಲಾವಿದರಿಗೆ ಜನರು ದೇವರ ಸ್ಥಾನ ನೀಡಿದ್ದರು. ಕಲಾವಿದರು ಎದುರು ಸಿಕ್ಕರೆ ಕಾಲಿಗೆ ಎರಗಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. ಇದೀಗ ಇಂತಹದ್ದೇ ಒಂದು ಪ್ರಸಂಗ ವಿಮಾನ ನಿಲ್ದಾಣದಲ್ಲಿ ನಡೆದಿದೆ. ರಾಮಾಯಣ ಧಾರಾವಾಹಿಯಲ್ಲಿ ರಾಮನ ಪಾತ್ರ ಮಾಡಿದ್ದ ಅರುಣ್ ಗೋಯಲ್ ಅವರನ್ನು ಕಂಡ ತಕ್ಷಣ, ಮಹಿಳೆಯೊಬ್ಬರು ಕಾಲಿಗೆ ಎರಗಿ ಆಶೀರ್ವಾದ ಪಡೆದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಜನರು ರಾಮನನ್ನೇ ನೋಡಿದಂತಾಯ್ತು ಎಂದು ಕಮೆಂಟ್ ಮಾಡುತ್ತಿದ್ದಾರೆ.
ದೂರದರ್ಶನದಲ್ಲಿ ಪ್ರಸಾರವಾಗುತ್ತಿದ್ದ ರಾಮಾಯಣ ಧಾರಾವಾಹಿಯನ್ನು ಅಪಾರ ಸಂಖ್ಯೆಯಲ್ಲಿ ಜನರು ಮೆಚ್ಚಿಕೊಂಡಿದ್ದರು. ರಾಮನ ಪಾತ್ರದ ಮೂಲಕ ಅರುಣ್ ಗೋಯಲ್ ಅವರನ್ನು ದೇವತಾಪುರುಷ ರಾಮನಂತೆ ಜನರು ನೋಡುತ್ತಿದ್ದರು. ಧಾರಾವಾಹಿ ಪ್ರಸಾರಕಂಡು 30 ವರ್ಷಗಳೇ ಕಳೆದಿವೆ. ಇಂದಿಗೂ ಜನ ಅರುಣ್ ಗೋಯಲ್ ಅವರ ಪಾತ್ರವನ್ನು ನೆನಪಿಟ್ಟುಕೊಂಡಿದ್ದಾರೆ. ಇದಕ್ಕೆ ಸಾಕ್ಷಿಯೆಂಬಂತಿದೆ ಈ ವಿಡಿಯೋ.
ಅರುಣ್ ಗೋಯಲ್ ಅವರನ್ನು ವಿಮಾನ ನಿಲ್ದಾಣದಲ್ಲಿ ಕಾಣುತ್ತಿದ್ದಂತೆ ಮಹಿಳೆ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಇದನ್ನು ನೋಡಿದ ಅರುಣ್ ಗೋಯಲ್ ಆಶ್ಚರ್ಯ ಪಟ್ಟಿದ್ದಾರೆ. ನಂತರ ಮಹಿಳೆಗೆ ಶಾಲು ಹೊದೆಸಿ ಬೀಳ್ಕೊಟ್ಟಿದ್ದಾರೆ.
ಕೊರೊನಾ ಲಾಕ್ಡೌನ್ ಅವಧಿಯಲ್ಲಿ ರಾಮಾಯಣ ಧಾರಾವಾಹಿ ಮರುಪ್ರಸಾರ ಕಂಡಿತ್ತು. 30 ವರ್ಷಗಳ ನಂತರ ಮರುಪ್ರಸಾರ ಕಂಡಾಗ ಪ್ರತಿನಿತ್ಯ ಈ ಧಾರಾವಾಹಿಯನ್ನು 7.7 ಕೋಟಿ ಜನ ವೀಕ್ಷಿಸುವ ಮೂಲಕ ದಾಖಲೆ ಬರೆದಿತ್ತು.
https://twitter.com/MrSinha_/status/1575860579150880768?ref_src=twsrc%5Etfw%7Ctwcamp%5Etweetembed%7Ctwterm%5E1575860579150880768%7Ctwgr%5E724f84ce1d0baa896e9306e1708c6ef5db35b9d8%7Ctwcon%5Es1_&ref_url=https%3A%2F%2Fwww.ndtv.com%2Findia-news%2Fviral-video-woman-touches-feet-of-reel-life-ram-arun-govil-3394578
ನಮೀಬಿಯಾದಿಂದ ಭಾರತಕ್ಕೆ ಬಂದ ‘ಆಶಾ’ ಈಗ ಗರ್ಭಿಣಿ..?