ಬರ್ತ್​ ಡೇ ಪಾರ್ಟಿ ಬೆನ್ನಲ್ಲೇ ಸ್ನೇಹಿತರಿಬ್ಬರ ಪ್ರಾಣ ಹೊತ್ತೊಯ್ದ ಜವರಾಯ!

death
Published on

ಶಿವಮೊಗ್ಗ: ಸ್ನೇಹಿತನ ಬರ್ತ್​ಡೇ ಪಾರ್ಟಿಗೆಂದು ಬಂದ ಸ್ನೇಹಿತರ ಪೈಕಿ ಇಬ್ಬರು ಜಲಸಮಾಧಿಯಾದ ಘಟನೆ ಶುಕ್ರವಾರ ರಾತ್ರಿ ತೀರ್ಥಹಳ್ಳಿ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಹೊಸನಗರ ತಾಲೂಕು ಮಾಸ್ತಿಕಟ್ಟೆ ಪೆಟ್ರೋಲ್ ಬಂಕ್ ಹಿಂಭಾಗದ ನಿವಾಸಿ ರಾಜು ಎಂಬುವರ ಪುತ್ರ ನೀಲಕಂಠ(17), ಶೃಂಗೇರಿ ತಾಲೂಕಿನ ಕೈಮರ ಕಿರಣ್(17) ಮೃತ ದುರ್ದೈವಿಗಳು. ಇವರು ಆನಂದಗಿರಿ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಓದುತ್ತಿದ್ದ ಇವರು ಕಟ್ಟೆಹಕ್ಕಲುವಿನ ಸಂಬಂಧಿಕರ ಮನೆಯಲ್ಲಿ ವಾಸವಿದ್ದರು. ಇದನ್ನೂ ಓದಿರಿ ಹಿಂಬದಿಯಿಂದ ಬಂದವ ಪತ್ನಿ ತಲೆಗೆ ಮಚ್ಚು ಬೀಸಿ ತನ್ನ ಕುತ್ತಿಗೆಯನ್ನೂ ಸೀಳಿಕೊಂಡ! ನಡುರಸ್ತೆಯಲ್ಲೇ ದಂಪತಿ ನರಳಾಟ 

ಶಿವಮೊಗ್ಗ ಮೂಲದ ಸ್ನೇಹಿತ ಆಯೋಜಿಸಿದ್ದ ಬರ್ತ್​ ಡೇ ಪಾರ್ಟಿಗೆ ನೀಲಕಂಠ ಮತ್ತು ಕಿರಣ್​ ಸೇರಿ ನಾಲ್ವರು ಬಾಲಕರು ಪಾಲ್ಗೊಂಡಿದ್ದರು ಎನ್ನಲಾಗಿದೆ. ತೀರ್ಥಹಳ್ಳಿಯ ತುಂಗಾ ನದಿ ಸಮೀಪದ ರಾಮಮಂಟಪದ ಬಳಿ ಶುಕ್ರವಾರ ಬರ್ತ್​ಡೇ ಪಾರ್ಟಿ ಮಾಡಿ ಅಲ್ಲೇ ಮದ್ಯ ಸೇವಿ ಮೋಜು-ಮಸ್ತಿ ಮಾಡುತ್ತಾ, ಕುಡಿದ ಅಮಲಿನಲ್ಲೇ ಸ್ನಾನ ಮಾಡಲು ನೀರಿಗೆ ಇಳಿದಿದ್ದಾರೆ. ಈ ವೇಳೆ ನೀಲಕಂಠ ಮತ್ತು ಕಿರಣ್​ ದುರಂತ ಅಂತ್ಯ ಕಂಡಿದ್ದಾರೆ.

ಮಕ್ಕಳು ಮನೆಗೆ ಬಾರದ ಹಿನ್ನೆಲೆ ಸಂಜೆಯಿಂದ ಕುಟುಂಬಸ್ಥರು ಹುಡುಕಾಡಿದ್ದಾರೆ. ಆಗ ನದಿತೀರದಲ್ಲಿ ಬಾಲಕರ ಬ್ಯಾಗ್ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹ ಪತ್ತೆ ಕಾರ್ಯಾಚರಣೆ ನಡೆಸಿದ್ದು, ಶನಿವಾರ ಬೆಳಗ್ಗೆ ಇಬ್ಬರ ಶವ ಪತ್ತೆಯಾಗಿವೆ. ತೀರ್ಥಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net