

ಹಾಸನ: ಜಿಲ್ಲೆಯನ್ನೇ ಬೆಚ್ಚಿಬೀಳಿಸಿದ್ದ ಕೆಇಬಿ ನೌಕರನ ಹತ್ಯೆ ಪ್ರಕರಣವನ್ನ 48 ಗಂಟೆಯಲ್ಲಿ ಭೇದಿಸಿರುವ ಪೊಲೀಸರು, ಮೃತನ ಪತ್ನಿಯ ಸಹೋದರನನ್ನೇ ಬಂಧಿಸಿದ್ದಾರೆ.
ಕೆಇಬಿ ನೌಕರ ಸಂತೋಷ್ ಮೃತ. ಈತನನ್ನು ಹಾಸನದ ಹೂವಿನಹಳ್ಳಿ ಕಾವಲ್ ಬಳಿ ಜ.16ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಸಂತೋಷ್ಗೆ ಹೊರಗಡೆ ಶತ್ರುಗಳು ಯಾರೂ ಇರಲಿಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿತ್ತು. ಆದರೆ ಈ ಕೊಲೆ ಮಾಡಿದ್ದು ಯಾರು? ಏಕೆ? ಎಂದು ಪ್ರಕರಣ ಬೆನ್ನತ್ತಿದ್ದ ಹಾಸನ ಗ್ರಾಮಾಂತರ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದನ್ನೂ ಓದಿರಿ ಯಡಿಯೂರಪ್ಪನ ಬಂಡವಾಳ ನನ್ನ ಕೈಯಲ್ಲಿದೆ, ನನ್ನ ತಂಟೆಗೆ ಬಂದರೆ ಹುಷಾರ್! ಸಿಎಂಗೆ ಎಚ್ಡಿಕೆ ವಾರ್ನಿಂಗ್
ಆಲೂರು ತಾಲೂಕಿನ ಕೆ.ಹೋಸಕೋಟೆಯ ಸುದಿನ್ ಕುಮಾರ್ ಅಲಿಯಾಸ್ ಆದರ್ಶ ಪ್ರಮುಖ ಆರೋಪಿ. ಈತ ಸಂತೋಷ್ನ ಬಾಮೈದುನ. ಸುದಿನ್ ಜತೆಗೆ ಮಡಿಕೇರಿಯ ಅನುಕೂಲ್, ಬಿ.ಎಸ್. ಸುರೇಶ, ಎಚ್.ಬಿ. ಸತೀಶ್ ಬಂಧಿತ ಆರೋಪಿಗಳು. ಸುದಿನ್ನ ಅಕ್ಕ ಜಯಶ್ರೀಯನ್ನು 13 ವರ್ಷದ ಹಿಂದೆ ಸಂತೋಷ್ ಪ್ರೀತಿಸಿ ಮದುವೆಯಾಗಿದ್ದ. ಈ ದಂಪತಿಗೆ 2 ಮಕ್ಕಳಿವೆ. ಸಂತೋಷ್ ಪ್ರತಿದಿನ ಕುಡಿದು ಪತ್ನಿಗೆ ಕಿರುಕುಳ ನೀಡುತ್ತಿದ್ದ. ಈ ವಿಚಾರವಾಗಿ ಸಾಕಷ್ಟು ಬಾರಿ ರಾಜಿ ಸಂಧಾನ ಮಾಡಲಾಗಿತ್ತಾದರೂ ಸರಿಹೋಗಿರಲಿಲ್ಲ. ಅಲ್ಲದೆ ಆತನ ಒಂದು ವರ್ಷದಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ. ತನ್ನ ಅಕ್ಕನ ಜೀವನ ಹಾಳು ಮಾಡುತ್ತಿದ್ದಾನೆ ಭಾವ ಸಂತೋಷ್ ಮೇಲೆ ಜಯಶ್ರೀ ತಮ್ಮ ಸುದಿನ್ ಕೋಪಗೊಂಡಿದ್ದ. ಇದನ್ನೂ ಓದಿರಿ ಸೆಕ್ಸ್ಗಾಗಿ ಮಾರಾಮಾರಿ! ಮಚ್ಚುಬೀಸಿದ ಪರಸ್ತ್ರೀ, ಆತನ ಕುಟುಂಬಸ್ಥರು ಆಕೆಯ ಕಾಲನ್ನೆ ಕತ್ತರಿಸಿದರು…
ಅಕ್ಕನಿಗೆ ಹಿಂಸೆ ನೀಡುತ್ತಿದ್ದ ಭಾವನನ್ನು ಮುಗಿಸಲು ಸಂಚುರೂಪಿಸಿದ್ದ ಸುದಿನ್ ತಂಡ, ಜ.15ರಂದು ಭಾವ ಸಂತೋಷ್ನನ್ನು ಪಾರ್ಟಿ ಮಾಡೋ ನೆಪದಲ್ಲಿ ಹೂವಿನಹಳ್ಳಿ ಕಾವಲ್ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡಿತ್ತು. ಆ ವೇಳೆ ಅನುಕೂಲ್ ಪಿಸ್ತೂಲ್ನಿಂದ ಸಂತೋಷ್ನತ್ತ 8 ಸುತ್ತು ಗುಂಡು ಹಾರಿಸಿದ್ದು, ಇದರಲ್ಲಿ ಇದರಲ್ಲಿ 5 ಗುಂಡು ಸಂತೋಷ್ ದೇಹ ಹೊಕ್ಕಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ.
ಆರೋಗಳಿಂದ ಕೃತ್ಯಕ್ಕೆ ಬಳಸಿದ್ದ 1 ರಿವಾಲ್ವರ್, 29 ಸಜೀವ ಗುಂಡುಗಳು, 1 ಡಸ್ಟರ್ ಕಾರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.