ಸೆಕ್ಸ್​ಗಾಗಿ ಮಾರಾಮಾರಿ! ಮಚ್ಚುಬೀಸಿದ ಪರಸ್ತ್ರೀ, ಆತನ ಕುಟುಂಬಸ್ಥರು ಆಕೆಯ ಕಾಲನ್ನೆ ಕತ್ತರಿಸಿದರು...

crime
Published on

ನೆಲಮಂಗಲ: ಬಲವಂತವಾಗಿ ಪರಸ್ತ್ರೀ ಜತೆಗೆ ಲೈಂಗಿಕ ಕ್ರಿಯೆ ನಡೆಸಲು ಯ್ನತಿಸಿದವನ ಮೇಲೆ ಮಚ್ಚಿನೇಟು ಬಿದ್ದಿದೆ. ಗಾಯಗೊಂಡವನ ಕುಟುಂಬಸ್ಥರು ಆ ಮಹಿಳೆಯ ಕಾಲುಗಳನ್ನು ಕತ್ತರಿಸಿದ್ದಾರೆ!

ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ಶಾಂತಿನಗರದಲ್ಲಿ ಭಾನುವಾರ ತಡರಾತ್ರಿ ಈ ಘಟನೆ ಸಂಭವಿಸಿದೆ. 27 ವರ್ಷದ ಮಹಿಳೆ ಎಂಬಾಕೆಯಿಂದ ಅಂಜನಾಮೂರ್ತಿ(35) ಮೇಲೆ ಮಾರಣಾಂತಿಕ ಹಲ್ಲೆ ಆಗಿದೆ. ಇದಕ್ಕೆ ಕುಪಿತಗೊಂಡ ಅಂಜನಾಮೂರ್ತಿ ಕುಟುಂಬಸ್ಥರು ಮಹಿಳೆಯ ಕಾಲಿಗೂ ಮಚ್ಚುಬೀಸಿದ್ದಾರೆ. ಇದನ್ನೂ ಓದಿರಿ ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

ತೀವ್ರ ರಕ್ತಸ್ರಾವದಿಂದ ನರಳಾಡುತ್ತಿದ್ದ ಮಹಿಳೆಗೆ ನೆಲಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.

ಲೈಂಗಿಕ ಸಂಪರ್ಕ ಹೊಂದುವಂತೆ ಬಲವಂತ ಮಾಡುತ್ತಿದ್ದ ಅಂಜನಾಮೂರ್ತಿಗೆ ಮಚ್ಚುಬೀಸಿದೆ. ಇದೇ ಕಾರಣಕ್ಕೆ ಆತನ ಮನೆಯವರು ನನ್ನ ಕಾಲುಗಳನ್ನ ಕತ್ತರಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾಳೆ. ಹೆಚ್ಚಿನ ತನಿಖೆ ಬಳಿಕ ಅಲ್ಲಿ ನಡೆದದ್ದಾದರೂ ಏನು ಎಂಬ ಸತ್ಯಾಸತ್ಯತೆ ಹೊರಬರಲಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net