ಪ್ರೀತಿಸಿ ಮದ್ವೆ ಮಾಡಿಕೊಂಡಾಗ ಅಡ್ಡಿಯಾಗದ ಆ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ..? ಗಂಡನ ಮನೆ ಬಾಗಿಲಲ್ಲಿ ಕಣ್ಣೀರಿಟ್ಟ ಪತ್ನಿ

wedding protest
Published on

ಕೋಲಾರ: ನಾವಿಬ್ಬರೂ ಪ್ರೀತಿಸಿ ಮದುವೆ ಆಗಿದ್ದೇವೆ. ಒಂದು ವರ್ಷ ಸಂಸಾರ ಮಾಡಿದ ಗಂಡನೀಗ ನನ್ನನ್ನು ಬೇಡ ಎನ್ನುತ್ತಿದ್ದಾನೆ... ನನಗೆ ನನ್ನ ಗಂಡ ಬೇಕು... ಎನ್ನುತ್ತಾ ಗಂಡನ ಮನೆ ಮುಂದೆ ಕುಳಿತು ಗೃಹಿಣಿಯೊಬ್ಬರು ಕಣ್ಣೀರು ಹಾಕುತ್ತಾ ಪ್ರತಿಭಟನೆ ನಡೆಸಿದ ಘಟನೆ ಜಿಲ್ಲೆಯಲ್ಲಿ ಸಂಭವಿಸಿದೆ.

ಮಾಲೂರು ತಾಲೂಕಿನ ತಿಪ್ಪಸಂದ್ರ ಗ್ರಾಮದ ಮಂಜುನಾಥ್​ರ ಮನೆ ಮುಂದೆ ಕುಳಿತು ಅವರ ಪತ್ನಿ ವೀಣಾ ಮಂಗಳವಾರ ಧರಣಿ ನಡೆಸಿದರು. ಇದನ್ನೂ ಓದಿರಿ ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಪರಸ್ಪರ ಪ್ರೀತಿಸುತ್ತಿದ್ದ ವೀಣಾ ಮತ್ತು ಮಂಜುನಾಥ್​ ಒಂದೇ ಗ್ರಾಮದವರು. ಇವರಿಬ್ಬರೂ ಒಂದು ವರ್ಷದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅಂದಿನಿಂದ ಈ ಊರಿನಿಂದ ದೂರ ನೆಲೆಸಿದ್ದ ದಂಪತಿ ಅನ್ಯೋನ್ಯವಾಗಿ ಇತ್ತಂತೆ. ಇದೀಗ ಜಾತಿ ಅಡ್ಡಿ ಬಂದಿದೆಯಂತೆ!

ವೀಣಾ ಕೆಳಜಾತಿಯವರು ಎಂಬ ಕಾರಣಕ್ಕೆ ಮಂಜುನಾಥ್​ರ ಪಾಲಕರು ಆಕೆಯನ್ನು ಒಪ್ಪುತ್ತಿಲ್ಲವಂತೆ. ಹಾಗಾಗಿ ಮಂಜುನಾಥ್​ಗೆ ಇದೀಗ ವೀಣ ಬೇಡವಂತೆ... ಗಂಡನ ಈ ವರ್ತನೆಯಿಂದ ಕಂಗಾಲಾದ ವೀಣಾ, ಪತಿ ಮಂಜುನಾಥ್ ಮನೆ ಎದುರು ಕುಳಿತು ಪ್ರತಿಭಟನೆ ಮಾಡಿದರು. ಸದ್ಯ ಮಂಜುನಾಥ್​ ತಲೆ‌ಮರೆಸಿಕೊಂಡಿದ್ದಾನೆ.

ನನ್ನನ್ನು ಪ್ರೀತಿಸಿ ಮದುವೆ ಆಗುವಾಗ ಅಡ್ಡಿಯಾಗದ ಜಾತಿ ಸಮಸ್ಯೆ ವರ್ಷದ ಬಳಿಕ ದೊಡ್ಡದಾಯ್ತೆ? ನನಗೆ ನನ್ನ ಗಂಡ ಬೇಕೇಬೇಕು ಎಂದು ವೀಣಾ ಪಟ್ಟು ಹಿಡಿದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net