ಎಲ್ಲೇ ಬರ ಬಂದರೂ, ಯಾವ ಕೆರೆ ಬತ್ತಿದರೂ ಗೌಡರ ಕಣ್ಣಲ್ಲಿ ಮಾತ್ರ ನೀರು ಬತ್ತಲ್ಲ...

hd devegowda
Published on

ಹಾಸನ: ರಾಜ್ಯದಲ್ಲಿ ಎಲ್ಲೇ ಬರ ಬಂದರೂ, ಯಾವ ಕೆರೆ ಬತ್ತಿದರೂ ಹಾಸನದಲ್ಲಿ ಮಾತ್ರ ಗೌಡರ ಕಣ್ಣಲ್ಲಿ ನೀರು ಬತ್ತುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಲೇವಡಿ ಮಾಡಿದರು.

ಹಾಸನದಲ್ಲಿ ಮಂಗಳವಾರ ನಡೆದ ಜನಸೇವಕ್ ಕಾರ್ಯಕ್ರಮದಲ್ಲಿ ಮಾತನಾಡಿದ ನಳೀನ್ ಕುಮಾರ್ ಕಟೀಲ್, ಕಾಲಕ್ಕೆ ತಕ್ಕಂತೆ ಕಣ್ಣೀರು ಸುರಿಯುತ್ತೆ. ಕಣ್ಣೀರಿನಿಂದ ಜನರ ಮನಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ ಜನತೆ ಸಾಬೀತು ಮಾಡಿದ್ದಾರೆ ಎನ್ನುವ ಮೂಲಕ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನ ಟೀಕಿಸಿದರು. ಇದನ್ನೂ ಓದಿರಿ ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

ಇನ್ನು ಕಾಂಗ್ರೆಸ್​ಗೆ ಮೂರು ಶಾಪ ತಟ್ಟಿದೆ. ಮೊದಲನೆಯದ್ದು ಗಾಂಧಿ, ಎರಡನೇ ಶಾಪ ಅಂಬೇಡ್ಕರ್, ಮೂರನೇದು ಗೋ ಶಾಪ. ಆದ್ದರಿಂದ ಆರು ದಶಕಗಳ ಕಾಲ ದೇಶವನ್ನಾಳಿದ್ದ ಕಾಂಗ್ರೆಸ್ ಇಂದು ಅವನತ್ತಿಯತ್ತ ಸಾಗಿದೆ ಎಂದು ನಳೀನ್ ಕುಮಾರ್ ಕಟೀಲ್ ಹೇಳಿದರು.

ಸ್ವತಂತ್ರ ಬಂದ ನಂತರ ಗಾಂಧಿ ಚಿಂತನೆಯನ್ನ ಕಾಂಗ್ರೆಸ್​ ಉಳಿಸಲಿಲ್ಲ. ಗಾಂಧಿ ವಿಚಾರವನ್ನು ಕೈ ಬಿಟ್ಟಿದೆ. ಇನ್ನು ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿದ್ದು ಇದೇ ಕಾಂಗ್ರೆಸ್. ಅಂಬೇಡ್ಕರ್​ರ ಶವ ಸಂಸ್ಕಾರಕ್ಕೂ ಕಾಂಗ್ರೆಸ್ ದೆಹಲಿಯಲ್ಲಿ ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಪ್ರಥಮ ಚಿಹ್ನೆ ಆಕಳು ಮತ್ತು ಗೋವು. ಆದ್ರೆ ನಂತರದ ದಿನದಲ್ಲಿ ಕಾಂಗ್ರೆಸ್ ಗೋಹತ್ಯೆಗೆ ಪ್ರೋತ್ಸಾಹ ನೀಡಿತು. ಈ ಮೂರೂ ಶಾಪಗಳು ಇದೀಗ ಕಾಂಗ್ರೆಸ್​ಗೆ ತಟ್ಟಿದೆ ಎಂದರು. ಇದನ್ನೂ ಓದಿರಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಎಫ್​ಐಆರ್​ ದಾಖಲು

ಗಾಂಧೀಜಿ ಚಿಂತನೆಯ ಗ್ರಾಮ ಸ್ವಾರಾಜ್ ಕನಸನ್ನು ಜಾರಿಗೆ ತಂದವರು‌ ನರೇಂದ್ರ ಮೋದಿ. ಆದ್ದರಿಂದ ಗಾಂಧಿ ಶಾಪ ಕಾಂಗ್ರೆಸ್​ಗೆ ತಟ್ಟಿದೆ. ಕಾಂಗ್ರೆಸ್ ಅಧಿಕಾರದ ದರ್ಪ ಅಹಂಕಾರದಿಂದ ಇಂದು ಸೋತಿದೆ. ಅದ್ದರಿಂದ ನಾವುಗಳು ಅಧಿಕಾರಿದ ದರ್ಪ- ಅಹಂನ್ನು ದೂರ ಇಟ್ಟು ಜನ ಸೇವಕರಾಗಿ‌ ಕೆಲಸ ಮಾಡಿದರೆ ಮಾತ್ರ ಜನಮಾನಸದಲ್ಲಿ‌ ಉಳಿಯಲು ಸಾಧ್ಯ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net