ತೊಗರಿ ಒಕ್ಕಣೆ ಮಾಡುತ್ತಿದ್ದ ಮಹಿಳೆ ಮಷಿನ್​ಗೆ ಸಿಲುಕಿ ಸಾವು!

vijyapura woman death machine
Published on

ವಿಜಯಪುರ: ಕೃಷಿ ಕಾರ್ಯಕ್ಕೆ ಕಾರ್ಮಿಕರ ಸಮಸ್ಯೆ ಬೆಂಬಿಡದೆ ಕಾಡುತ್ತಿದೆ. ಪರಿಣಾಮ ಒಕ್ಕಣೆ ಕಣದ ಕೆಲಸಕ್ಕೂ ಯಂತ್ರಗಳಿಗೆ ಭಾರಿ ಡಿಮಾಂಡ್​! ಆದರೆ ಸ್ವಲ್ಪ ಯಾಮಾರಿದ್ರೆ ಮನುಷ್ಯರೇ ಬಲಿಯಾಗ್ತಾರೆ.

ಒಕ್ಕಣೆ ಕಣದಲ್ಲಿನ ಕೆಲಸ ಮಾಡುವ ಅದೆಷ್ಟೋ ಕಾರ್ಮಿಕರು ನಿಯಂತ್ರಣ ತಪ್ಪಿ ಮಷಿನ್​ಗೆ ಸಿಲುಕಿ ಪ್ರಾಣಬಿಟ್ಟ ಒಂದಿಲ್ಲೊಂದು ಘಟನೆಗಳು ಪ್ರತಿ ಭಾರಿ ರಾಜ್ಯದಲ್ಲಿ ಸಂಭವಿಸುತ್ತಲೇ ಇದೆ. ಇಂತಹದ್ದೇ ಘಟನೆ ಇಂಡಿ ತಾಲೂಕಿನ ಚಿಕ್ಕಬೇವನೂರ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಇದನ್ನೂ ಓದಿರಿ ಜೆಡಿಎಸ್​ ತೊರೆಯಲು ಸಾಕಷ್ಟು ಆಫರ್​ ಬಂದಿತ್ತು… ಎನ್ನುತ್ತಲೇ ದೇವೇಗೌಡರಿಗೆ ಮಾಜಿ ಶಾಸಕ ಕೊಟ್ಟ ಎಚ್ಚರಿಕೆ ಏನು?

ಚಿಕ್ಕಬೇವನೂರ ಗ್ರಾಮದಲ್ಲಿ ಒಣಗಿದ ತೊಗರಿ ಕಾಯನ್ನು ಸಿಪ್ಪೆ ಸಮೇತ ಹಾಕಿ ಮಷಿನ್​ ಮೂಲಕ ಕಾಳು ಮಾಡಲಾಗುತ್ತಿತ್ತು. ತೊಗರಿ ರಾಶಿ ಮಾಡುವ ವೇಳೆ ಆಯತಪ್ಪಿ ಬಿದ್ದ ಸುಜಾತಾ ಅಮಸಿದ್ಧ ಬಗಲಿ ಎಂಬಾಕೆ, ಮಷಿನ್​ಗೆ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತ ಮಹಿಳೆಯು ಚಿಕ್ಕಬೇವನೂರ ಗ್ರಾಮದ ನಿವಾಸಿ. ಸುಜಾತಾ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net