More

    ಈ ಒಂದು ನಿರ್ಧಾರವೇ ದುರಂತ ಸಾವಿಗೆ ಕಾರಣವಾಯ್ತಾ? ಮೃತರ ಸಂಬಂಧಿ ಗೋಳಾಟ

    ದಾವಣಗೆರೆ: ಧಾರವಾಡ ಹೊರವಲಯದ ಇಟ್ಟಿಗಟ್ಟಿ ಬಳಿ ಶುಕ್ರವಾರ ಬೆಳ್ಳಂಬೆಳಗ್ಗೆ ಟೆಂಪೋ ಟ್ರಾವೆಲರ್​ ಮತ್ತು ಟಿಪ್ಪರ್​ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 11ಕ್ಕೇರಿದ್ದು, ಮೃತಪಟ್ಟವರು ಮಹಿಳಾ ವೈದ್ಯರು ಹಾಗೂ ವೈದ್ಯರ ಪತ್ನಿಯರ ಸ್ನೇಹ ಬಳಗ!

    ಈ ದುರ್ಘಟನೆಯಲ್ಲಿ ಮಾಜಿ ಶಾಸಕರೂ ಆದ ಬಿಜೆಪಿ ಮುಖಂಡ ಗುರುಸಿದ್ದನಗೌಡರ ಪುತ್ರ ಡಾ. ರವಿಕುಮಾರ್​ ಅವರ ಪತ್ನಿ ಪ್ರೀತಿ ಮತ್ತು ಡಾ. ಪ್ರಕಾಶ್​ ಮತ್ತಿಹಳ್ಳಿ ಅವರ ಪತ್ನಿ ಡಾ. ವೀಣಾ ಪ್ರಕಾಶ್​ ಸೇರಿದಂತೆ 11 ಮಂದಿ ಮೃತಪಟ್ಟಿದ್ದಾರೆ. ಇದನ್ನೂ ಓದಿರಿ ತಾನೇ ಸಾಕಿದ್ದ ಹಸುಗೆ ಬಲಿಯಾದ ಬಾಲಕ! ಮುಗಿಲುಮುಟ್ಟಿದೆ ಕುಟುಂಬಸ್ಥರ ಆಕ್ರಂದನ

    ಮಹಿಳಾ ವೈದ್ಯರು ಹಾಗೂ ವೈದ್ಯರ ಪತ್ನಿಯರ ಸ್ನೇಹ ಬಳಗ ಆಗಾಗ ಪ್ರವಾಸ ಹೋಗುತ್ತಿತ್ತು. ಆಗಾಗ ಒಂದು-ಎರಡು ದಿನದ ಮಟ್ಟಿಗೆ ಪ್ರವಾಸಕ್ಕೆ ಹೋಗಿ ಬಂದಿದ್ದರು. ಇದೇ ಮೊದಲ ಬಾರಿಗೆ ತಡರಾತ್ರಿ ಪ್ರವಾಸಕ್ಕೆ ಹೊರಟಿದ್ದರು. ಇದೀಗ ಬಾರದ ಲೋಕಕ್ಕೆ ಹೋಗಿದ್ದಾರೆ ಎನ್ನುತ್ತಾ ಮೃತ ಡಾ. ಪ್ರೀತಿ ಅವರ ಮೈದುನ ಅರವಿಂದ ಕಣ್ಣೀರು ಹಾಕಿದರು.

    ಮೃತರೆಲ್ಲರೂ ದಾವಣಗೆರೆ ಮೂಲದವರು. ಇವರಲ್ಲಿ ಬಹುತೇಕರು ದಾವಣಗೆರೆಯ ಸೇಂಟ್‌ ಪೌಲ್ಸ್ ಕಾನ್ವಂಟ್‌ ಶಾಲೆಯ ಹಳೇ ವಿದ್ಯಾರ್ಥಿಗಳು ಎನ್ನಲಾಗಿದೆ. ಇತ್ತೀಚಿಗೆ ನಡೆದ ಶಾಲೆಯ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದ ಅವರು ಗೋವಾಕ್ಕೆ ಪ್ರವಾಸ ಹೋಗಲು ಪ್ಲಾನ್​ ಮಾಡಿದ್ದರು. ಅದರಂತೆ ಒಟ್ಟು 16 ಮಂದಿ ಟೆಂಪೋ ಟ್ರಾವೆಲರ್‌ನಲ್ಲಿ ಶುಕ್ರವಾರ ಮುಂಜಾನೆ 3 ಗಂಟೆಗೆ ದಾವಣಗೆರೆ ಬಿಟ್ಟಿದ್ದರು. ಅದರಲ್ಲಿ ಒಂದು ಮಗು ಕೂಡ ಇತ್ತು. ಇದನ್ನೂ ಓದಿರಿ ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

    ಧಾರವಾಡದ ಇಟ್ಟಿಗಟ್ಟಿ ಬೈಪಾಸ್‌ ಸಮೀಪ ಬೆಳಗ್ಗೆ 7.30ರ ವೇಳೆಗೆ ಮರಳು ಸಾಗಣೆ ಟಿಪ್ಪರ್‌ ಲಾರಿಯು ಟೆಂಪೋ ಟ್ರಾವೆಲ್ಲರ್​ಗೆ ಡಿಕ್ಕಿ ಹೊಡೆದ ರಭಸಕ್ಕೆ ಟೆಂಪೋ ಟ್ರಾವೆಲರ್‌ನಲ್ಲಿದ್ದ 16 ಮಹಿಳೆಯರ ಪೈಕಿ 10 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇವವ ಜತೆಗೆ ಟಿಟಿ ಚಾಲಕ, ಹಾವೇರಿ ಜಿಲ್ಲೆಯ ರಾಣೇಬೆನ್ನೂರ ನಿವಾಸಿ ಮಲ್ಲಿಕಾರ್ಜುನ(26) ಕೂಡ ಮೃತಪಟ್ಟಿದ್ದಾನೆ. ಉಳಿದವರ ಸ್ಥಿತಿ ಗಂಭಿರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    ವರ್ಷಗಳ ನಂತರ ಒಟ್ಟಿಗೆ ಗೋವಾಕ್ಕೆ ಹೊರಟಿದ್ದ ಶಾಲಾ ಗೆಳತಿಯರ ದುರಂತ ಅಂತ್ಯ! ಮನಕಲಕುತ್ತೆ ಕೊನೇ ವಾಟ್ಸ್​ಆ್ಯಪ್​ ಸ್ಟೇಟಸ್

    ಧಾರವಾಡದಲ್ಲಿ ಭೀಕರ ಅಪಘಾತ! 13ಕ್ಕೇರಿದ ಸಾವಿನ ಸಂಖ್ಯೆ, ಮಾಜಿ ಶಾಸಕರ ಸೊಸೆಯೂ ದುರ್ಮರಣ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts