ಸುಖ ನಿದ್ರೆಗಾಗಿ ಈಕೆ ಮಾಡಿದ್ದನ್ನು ಕಂಡು ದಂಗಾದ ಪ್ರಯಾಣಿಕರು! ಹಿಂದೆಂದೂ ಇಂತಹ ಘಟನೆ ಕೇಳಿರಲು ಸಾಧ್ಯವಿಲ್ಲ

WhatsApp Image 2024-05-10 at 2.09.52 PM
Published on

ಜಗತ್ತಿನಲ್ಲಿ ಜನರು ಕಷ್ಟಪಟ್ಟು ಕೆಲಸ ಮಾಡುವುದು ಒಂದು ಒಪ್ಪತ್ತಿನ ಊಟಕ್ಕಾದರೆ, ಮತ್ತೊಂದು ಬಟ್ಟೆಗಾಗಿ. ಇದು ಅನೇಕರಿಗೆ ತಿಳಿದೇ ಇರುವ ಸಂಗತಿ. ಇದನ್ನೂ ಮೀರಿ ಕೆಲವರು ಅಪಾರ ಆಸ್ತಿ ಸಂಪಾದನೆ ಮಾಡಲು ಹಲವಾರು ಮಾರ್ಗಗಳನ್ನು ಕಂಡುಹಿಡಿದು, ಅಂದುಕೊಂಡಂತೆ ಹಣ ಗಳಿಸಿ, ನಂತರ ಅದನ್ನು ಆನಂದಿಸಲು ಈ ಲೋಕದಲ್ಲಿ ಅವರೇ ಇಲ್ಲದ ಪರಿಸ್ಥಿತಿ ತಲುಪಿರುತ್ತಾರೆ. ಇದನ್ನು ಕೇಳಿದಾಗ ಪಾಪ ಅನಿಸೋದು ನಿಜವೇ ಸರಿ. ಆದರೆ, ಇದೆಲ್ಲದಕ್ಕಿಂತ ಹೆಚ್ಚಾಗಿ ನಿದ್ರೆಗಾಗಿ ಜನರು ಪಡುವ ಕಷ್ಟ ಅಷ್ಟಿಷ್ಟಲ್ಲ ಬಿಡಿ.

ನಿದ್ರೆಗಿಂತ ಸುಖ ನಿದ್ರೆಗಾಗಿ ಜನರು ತಲೆಕೆಳಗಾಗಿ, ಹಲವು ಕಸರತ್ತು ಮಾಡುತ್ತಾರೆ. ಕಷ್ಟಪಟ್ಟು ಕೆಲಸ ಮಾಡಿ, ಶ್ರಮಿಸಿದರು ಸಹ ನಿದ್ದೆ ಬರುತ್ತಿಲ್ಲ ಎಂದು ಕಣ್ಣೀರಿಡುವ ಅದೆಷ್ಟೋ ಸಂಖ್ಯೆಯ ಜನರು, ಆರಾಮದಾಯಕ ನಿದ್ದೆ ಮಾಡಲು ಹಲವು ಉಪಾಯಗಳನ್ನು ಹುಡುಕುತ್ತಾರೆ. ಸದ್ಯ ಇಲ್ಲೊಬ್ಬಳು ಮಹಿಳೆ ಸಹ ಅದೇ ರೀತಿ ಮಾಡಲು ಹೋಗಿ ದೊಡ್ಡ ಎಡವಟ್ಟು ಮಾಡಿಕೊಂಡಿದ್ದು, ಪ್ರಯಾಣದಲ್ಲಿ ತೊಡಗಿದ್ದ ಫ್ಲೈಟ್​ನಲ್ಲಿ ಯಾರು ಈ ರೀತಿ ಮಾಡಿರಲಿಲ್ಲ, ಈಕೆಗೇನು ಬಂದಿತ್ತು ಎಂಬ ಟೀಕೆಗಳಿಗೆ ಗುರಿಯಾಗಿದ್ದಾರೆ.

ಮೂಲತಃ ಅಮೆರಿಕಾದವರು ಎನ್ನಲಾದ ಈ ಮಹಿಳೆ, ವಿಮಾನದಲ್ಲಿ ಪ್ರಯಾಣಿಕರಿಗೆ ಮೀಸಲಿಟ್ಟ ಆಸನಗಳ ಮೇಲ್ಭಾಗದಲ್ಲಿ ಇರುವ ಕ್ಯಾಬಿನ್​ ಅನ್ನು ಪ್ರಯಾಣದಲ್ಲಿ ತೊಡಗಿರುವವರ ಲಗೇಜ್ ಇಡಲು ಮಾಡಿರಲಾಗುತ್ತದೆ. ಆದರೆ, ಇದರೊಳಗೆ ಲಗೇಜ್ ಇಡುವ​ ಬದಲಿಗೆ ಯಾರಾದರೂ ನಿದ್ರಿಸಲು ಬಳಸುತ್ತಾರೆ ಎಂದರೆ ನಂಬ್ತೀರಾ? ಅಸಲಿಗೆ ನಂಬಲೇಬೇಕು. ಯಾಕಂದ್ರೆ, ಅಂತಹ ಶಾಕಿಂಗ್ ಘಟನೆ ನಿಜಕ್ಕೂ ನಡೆದಿದೆ.

ಸುಖ ನಿದ್ರೆಗಾಗಿ ಕ್ಯಾಬಿನ್​ ಏರಿದ ಮಹಿಳೆ, ಅದರೊಳಗೆ ಹೋಗಿ ಕಾಲು ಚಾಚಿ, ಆರಾಮದಾಯಕವಾಗಿ ಕೆಲವು ಗಂಟೆಗಳ ಕಾಲ ಮಲಗಿಕೊಂಡಿದ್ದಾಳೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ನೆಟ್ಟಿಗರು ದಂಗಾಗಿ ಹೋಗಿದ್ದಾರೆ. ಕೇವಲ ನಿದ್ರೆಗಾಗಿ ಜನರು ಹೀಗೂ ಮಾಡ್ತಾರಾ? ಇಂತಹ ಪ್ರಯತ್ನಕ್ಕೂ ಮುಂದಾಗ್ತಾರಾ? ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಸಲಿಗೆ ಮಹಿಳೆ ವಿಮಾನದ ಸಿಬ್ಬಂದಿಯೋ ಅಥವಾ ಪ್ರಯಾಣಿಕರೋ ಎಂಬುದು ಮಾತ್ರ ಸ್ಪಷ್ಟವಾಗಿಲ್ಲ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net