BBKS10: ಆಚೆ ಇರೋ ಜನಕ್ಕೆ ಒರಿಜಿನಲ್ ರಕ್ಷಕ್ ಕಾಣಲಿಲ್ವೇನೋ

Untitled design (10)
Published on

ಬೆಂಗಳೂರು: ಕನ್ನಡದ ಬಿಗ್ ಬಾಸ್​ ಸೀಸನ್​ 10ರ ಸ್ಪರ್ಧಿಯಾಗಿದ್ದ ರಕ್ಷಕ್ ಇದೀಗ​ ಮನೆಯಿಂದ ಎಲಿಮಿನೇಟ್​ ಆಗಿದ್ದು, ಹೊರಬಂದ ಕೂಡಲೇ ಸಂದರ್ಶನದಲ್ಲಿ ಭಾಗಿಯಾಗಿ, 'ಬಿಗ್'​ ಮನೆಯೊಳಗಿನ ಅನುಭವ, ಸ್ಪರ್ಧಿಗಳ ಕುರಿತಾದ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.

"ಈ ಜರ್ನಿಯನ್ನು ಇನ್ನೂ ಮುಂದುವರಿಸಬೇಕಿತ್ತು. ನನಗೆ ನಾನು ಯಾವತ್ತೂ ಮೋಸ ಮಾಡಿಕೊಂಡಿಲ್ಲ. ನಾಮಿನೇಷನ್‌ ಆಗಿರೋರ ಪಟ್ಟಿಯಲ್ಲಿ ನಾನು ಇರ್ತೀನಿ ಅಂತ್ಲೇ ಅಂದುಕೊಂಡಿರಲಿಲ್ಲ. ಸೆಕೆಂಡೋ ಥರ್ಡೋ ಸೇಫ್ ಆಗಿಬಿಡ್ತೀನಿ ಅಂದ್ಕೊಂಡಿದ್ದೆ. ರಕ್ಷಕ್ ಜಾಸ್ತಿ ಮಾತಾಡ್ತಾನೆ. ಕೋಪ ಬರುತ್ತೆ ಅಂತೆಲ್ಲ ಇತ್ತು. ಅದೆಲ್ಲ ಯಾವುದೂ ಇಲ್ಲ. ಆಚೆ ಇರೋ ಜನಕ್ಕೆ ಒರಿಜಿನಲ್ ರಕ್ಷಕ್ ಕಾಣಿಸ್ಲಿಲ್ವೇನೋ. ನಾನು ಇರೋದೇ ಹಾಗೆ. ಮನೆಲೂ ಹಾಗೇ ಇರ್ತೀನಿ. ಇರುವಷ್ಟು ದಿನ ಚೆನ್ನಾಗಿದ್ದೇನೆ" ಎಂದರು.

"ಈ ವರ್ಷದ ಬಿಗ್‌ಬಾಸ್ ತುಂಬ ಕನ್‌ಫ್ಯೂಷನ್ನು, ತುಂಬ ವಿಭಿನ್ನವಾಗಿತ್ತು. ಹೆಚ್ಚು ವಿಶಿಷ್ಟವಾಗಿದೆ. ಯಾರಿಗೂ ಊಹೆ ಮಾಡಲು ಆಗೋದಿಲ್ಲ. ಸ್ಟೇಜ್‌ ಹತ್ತಾವಾಗಲೇ ಒಂದು ಖುಷಿಯಿತ್ತು. ಸ್ಟೇಜ್ ಹತ್ತಿದ ಬಳಿಕ ಒಂದು ಟಾಸ್ಕ್ ಕೊಟ್ಟರು. ಪೊಲಿಂಗ್ ಇತ್ತು. ನಾವು ಅಸಮರ್ಥರಾಗಿ ಒಳಗಡೆ ಹೋದ್ವಿ. ಎಲ್ಲರೂ ಕಷ್ಟಪಟ್ಟು, ಗುರುತಿಸಿಕೊಂಡು ಅಸಮರ್ಥರಿಂದ ಸಮರ್ಥನಾದೆ. ಕ್ಯಾಪ್ಟನ್ ಆದೆ. ಉತ್ತಮ ಕೂಡ ಪಡೆದುಕೊಂಡೆ" ಎಂದರು.

"ಟಾಸ್ಕ್​ಗಳ ಪೈಕಿ ಹಗ್ಗ ಎಳೆದು ಹಿಡಿದುಕೊಳ್ಳುವ ಟಾಸ್ಕ್‌ ನನಗೆ ಹೆಚ್ಚು ನೆನಪಿರುವಂಥದ್ದು. ನನ್ನ ತುಂಬ ಟ್ರಿಗರ್ ಮಾಡಿದ್ರು. ತುಕಾಲಿ ಸಂತೋಷ್ ಸೇವ್ ಮಾಡಬೇಕಿತ್ತು. ಆಗಲ್ವೇನೋ ಅನಿಸಿತ್ತು. ಆದ್ರೆ ಪೋಲ್ ಹಿಡಿದಿದ್ದೆ. ನೀರು ಎರಚಿದರು. ಆಗ ಇನ್ನೂ ಕಂಫರ್ಟಬಲ್ ಆಗಿತ್ತು. ನಾನೊಬ್ಬ ಕಾಂಪಿಟೇಟರ್ ಅಂತ ತೋರಿಸ್ಬೇಕು ಅನಿಸಿತ್ತು. ಆಡಿದೆ" ಎಂದು ಹೇಳಿದರು.

"ನನ್ನ ಕ್ಯಾಪ್ಟನ್‌ಷಿಪ್‌ನಲ್ಲಿ ಅನ್ನಕ್ಕೆ ಕೊರತೆ ಇರಲಿಲ್ಲ. ಅದೇ ವಾರದಲ್ಲಿ ತಾರಮ್ಮ ಬಂದಿದ್ದು. ಅದೇ ವಾರದಲ್ಲಿ ಬೃಂದಾವನ ಟೀಮ್ ಬಂದಿದ್ದು. ಅದೇ ವಾರದಲ್ಲಿ ನಮಗೆ ಏನೇನು ಬೇಕೋ ಎಲ್ಲ ಆಹಾರವನ್ನೂ ಕೊಟ್ಟಿದ್ರು. ಎಲ್ಲ ಸೌಕರ್ಯ ನನ್ನ ನಾಯಕತ್ವದಲ್ಲೇ ಬಂತು" ಎಂದು ರಕ್ಷಕ್​ ತಮ್ಮ ಅನುಭವವನ್ನು ಹಂಚಿಕೊಂಡರು.

ದಿನದ 24 ಗಂಟೆಗಳ ಲೈವ್​ ಸ್ಟ್ರೀಮಿಂಗ್​​ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net