ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ಇದೀಗ 25 ದಿನಗಳನ್ನು ಯಶಸ್ವಿಯಾಗಿ ಪೂರೈಸಿದ್ದು, ಈಗ ಐದನೇ ವಾರಕ್ಕೆ ಕಾಲಿಟ್ಟಿದೆ. ಭಾನುವಾರ ನಡೆದ ‘ಸೂಪರ್ ಸಂಡೆ ವಿತ್ ಸುದೀಪ್’ ಸಂಚಿಕೆಯಲ್ಲಿ ನಾಮಿನೇಟ್ ಆಗಿದ್ದ ಅಷ್ಟು ಸ್ಪರ್ಧಿಗಳ ಪೈಕಿ ವಿನಯ್ ಜತೆ ಕಡೆಗೆ ಉಳಿದುಕೊಂಡಿದ್ದ ರಕ್ಷಕ್, ಎಲಿಮಿನೇಟ್ ಆಗಿ ಬಿಗ್ ಮನೆಯಿಂದ ಹೊರನಡೆದರು. ಸದ್ಯ ಬಿಗ್ ಹೌಸ್ನಿಂದ ಹೊರಬಂದ ಕೂಡಲೇ ಸಂದರ್ಶನದಲ್ಲಿ ಭಾಗಿಯಾದ ರಕ್ಷಕ್, ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಈ ರೀತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ನಂತರ ಎಕ್ಸ್‌ನಲ್ಲಿ ಅತ್ಯಂತ ಜನಪ್ರಿಯ ರಾಜಕಾರಣಿ ಯಾರೆಂದು ಹೇಳಬಲ್ಲಿರಾ?
ಬಿಗ್‌ಬಾಸ್ ಮನೆಯಲ್ಲಿ ಅನ್ನದ ಬೆಲೆಯನ್ನು ಅರಿತೆ ಎಂದ ರಕ್ಷಕ್, “ಮನೆಯಿಂದ ಹೊರಗೆ ಹೋಗುತ್ತಿರುವುದರಲ್ಲಿ ಯಾವ ಬೇಸರವೂ ಇಲ್ಲ. ಹಾಗೆ ನೋಡಿದರೆ, ಪರಿಸ್ಥಿತಿ ಇನ್ನಷ್ಟು ಕೆಡುವ ಮೊದಲೇ ಹೊರಬಂದಿದ್ದಕ್ಕೆ ಖುಷಿಯೇ ಇದೆ. ನಾನೇನೂ ಇಲ್ಲಿ ಕೇಳಿಕೊಂಡು ಬಂದವನಲ್ಲ. ಅವರಾಗೇ ನನ್ನ ಅಪ್ರೋಚ್ ಮಾಡಿದರು. ಒಪ್ಪಿಗೆಯಾಯ್ತು. ಒಳಗಡೆ ಬಂದೆ” ಎಂದು ಹೇಳಿದ್ದಾರೆ.
“ಒಂದು ತಿಂಗಳು ಇರಬೇಕು ಎಂಬ ಆಸೆಯಿತ್ತು. ಆ ದೇವ್ರು ಮುಂಚೆನೇ ಬರೆದಿದ್ದ ಅನಿಸುತ್ತೆ. ನನ್ನ ಬೆಸ್ಟ್ ನಾನು ಕೊಟ್ಟಿದ್ದೀನಿ. ಒಳಗಡೆ ಇದ್ದಾಗ ಮನೆಯ ಕ್ಯಾಪ್ಟನ್ ಕೂಡ ಆದೆ. ‘ಉತ್ತಮ’ ಪಟ್ಟ ತಗೊಂಡೆ. ಎಲ್ಲರ ಜತೆ ತುಂಬ ಒಳ್ಳೆಯ ಬಾಂಡಿಂಗ್ ಇಟ್ಕೊಂಡಿದ್ದೆ. ಈ ಎಲ್ಲವೂ ಇನ್ನೂ ಸ್ಟ್ರಾಂಗ್ ಆಗುವ ಮೊದಲೇ ಆಚೆಬಂದೆ ಅಂತ ಖುಷಿ ಇದೆ. ಮುಂದಿನ ದಿನಗಳಲ್ಲಿ ಇವೆಲ್ಲವೂ ಇನ್ನೂ ಕೆಟ್ಟದ್ದೇ ಆಗಿರೋದು” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಹಾರದಲ್ಲೂ ದಾಖಲೆ ಪ್ರಮಾಣದಲ್ಲಿ ವಾಯು ಮಾಲಿನ್ಯ: ಬೇಗುಸರಾಯ್‌ನಲ್ಲಿ ಎಕ್ಯೂಐ -363 ದಾಖಲು
“ನಾನು ಹಬ್ಬದ ಟೈಮಲ್ಲಿ ಕುಟುಂಬದವರನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದೆ. ನಮ್ಮಮ್ಮ, ‘ನೀನಿಲ್ಲಾ ಅಂದ್ರೆ ಮನೇಲಿ ಕಳೆ ಇರಲ್ವೋ’ ಅಂತಿದ್ರು. ಯಾಕಂದ್ರೆ ನಮ್ಮನೇಲಿ ನಾನೊಬ್ನೇ ಸೌಂಡು ಮಾಡೋನು. ಅದು ಸಡನ್ನಾಗಿ ನೆನಪಾಗೋಯ್ತು. ‘ಓ ಈವತ್ತು ಹಬ್ಬ. ಮನೇಲಿ ಚಿತ್ರಾನ್ನ, ವಡೆ, ಪಲ್ಯ ಎಲ್ಲ ಮಾಡಿರುತ್ತಾರೆ” ಎಂದರು.
“ಇದ್ದಾಗ ನಾವೆಷ್ಟು ದುರಹಂಕಾರದಿಂದ ಇದ್ವಿ. ಈವತ್ತು ಇಲ್ಲಿ ಏನೂ ಇಲ್ದೆ, ಏನಾದ್ರೂ ಕೊಡ್ರಪ್ಪಾ ಅಂತ ಪರದಾಡುತ್ತಿದ್ದೇವು. ಬೀನ್ಸ್ ಕೊಡ್ರಪ್ಪಾ, ಬೀನ್ಸ್ ಪಲ್ಯ ಮಾಡೋಣ. ಅನ್ನ ಕೊಡ್ರಪ್ಪಾ, ಪಲಾವ್ ಮಾಡೋಣ ಅಂತ ಅನಿಸ್ತಿತ್ತು. ಅಷ್ಟ್ ಬೇಜಾರಾಗಿಬಿಟ್ಟಿತ್ತು. ಅನ್ನದ ಬೆಲೆ ತುಂಬ ಚೆನ್ನಾಗಿ ಅರ್ಥ ಮಾಡಿಕೊಂಡೆ” ಎಂದು ರಕ್ಷಕ್ ಹೇಳಿದ್ದಾರೆ.
ಇದನ್ನೂ ಓದಿ: Gold, Silver Price; ಇದುವೇ ಚಿನ್ನಾಭರಣ ಖರೀದಿಗೆ ಸೂಕ್ತ ಸಮಯ..ಇಂದಿನ ಚಿನ್ನ,ಬೆಳ್ಳಿ ಬೆಲೆ ವಿವರ ಇಂತಿದೆ
ದಿನದ 24 ಗಂಟೆಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾದಲ್ಲಿ ಪ್ರಸಾರವಾಗುತ್ತಿದೆ.