More

    VIDEO | ಆಹಾರ ತಿನ್ನುವುದನ್ನು ನಿಲ್ಲಿಸಿ ಮೃತ ಮಾಲೀಕನಿಗಾಗಿ ಶವಾಗಾರದ ಎದುರೇ 4 ತಿಂಗಳಿನಿಂದ ಕಾಯುತ್ತಿರುವ ಶ್ವಾನ

    ಕೇರಳ: ನಂಬಿಕೆಗೆ ಅರ್ಹವಾದ ಪ್ರಾಣಿ ಶ್ವಾನ. ಎಲ್ಲಾ ಪ್ರಾಣಿಗಳಲ್ಲಿ ನಾಯಿಗಳು ಮನುಷ್ಯರಿಗೆ ಅತ್ಯಂತ ಹತ್ತಿರವಾದವು. ಅವರನ್ನು ಪ್ರೀತಿಯಿಂದ ನೋಡಿದರೆ ಸಾಕು ತಮ್ಮ ಮಾಲೀಕರನ್ನು ತಮ್ಮ ಜೀವನದುದ್ದಕ್ಕೂ ನಿಷ್ಠೆಯಿಂದ ರಕ್ಷಿಸುತ್ತವೆ. ಕೇರಳದ ನಾಯಿಯೊಂದು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತನ್ನ ಮಾಲೀಕರಿಗಾಗಿ ತಿಂಗಳುಗಟ್ಟಲೆ ಕಾಯುತ್ತಾ ಕುಳಿತಿರುವ ದೃಶ್ಯ ವೈರಲ್​​ ಆಗಿದೆ.

    ಕೇರಳದ ಕಣ್ಣೂರು ಜಿಲ್ಲೆಯಲ್ಲಿ ‘ರಾಮು’ ಎಂಬ ಹೆಸರಿನ ನಾಯಿ ಮಾಲೀಕ ಅಸ್ವಸ್ಥಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಕೇಂದ್ರದ ಆಸ್ಪತ್ರೆಗೆ ಕರೆತರಲಾಗಿತ್ತು. ಚಿಕಿತ್ಸೆ ನೀಡಿದರೂ ವ್ಯಕ್ತಿ ಮೃತಪಟ್ಟಿದ್ದಾರೆ. ಅವರ ದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ನಂತರ, ಅವರ ಕುಟುಂಬ ಸದಸ್ಯರು ಮೃತ ದೇಹವನ್ನು ಆಸ್ಪತ್ರೆಯ ಹಶವಾಗಾರದಿಂದ ತೆಗೆದುಕೊಂಡು ಹೋಗಿ ಅಂತಿಮ ವಿಧಿಗಳನ್ನು ಪೂರ್ಣಗೊಳಿಸಿದರು. ಆದರೆ ಮಾಲೀಕರು ಹೊರಗೆ ಬಂದು ಪ್ರೀತಿಯಿಂದ ಕರೆದುಕೊಂಡು ಹೋಗುತ್ತಾರೆ ಎಂಬ ನಿರೀಕ್ಷೆಯಲ್ಲಿ ರಾಮು ಆಸ್ಪತ್ರೆಯ ಮುಂದೆ ಕಾಯುತ್ತಿದ್ದಾನೆ.

    ಅದರ ನೋವನ್ನು ಅರ್ಥ ಮಾಡಿಕೊಂಡ ಆಸ್ಪತ್ರೆ ಸಿಬ್ಬಂದಿ ವಿಕಾಸ್, ನಾಲ್ಕು ತಿಂಗಳಿಂದ ಶವಾಗಾರದ ಕೊಠಡಿಯ ಹೊರಗೆ ಕಾದು ಕುಳಿತಿದೆ ಮಾಲೀಕ ಇನ್ನೂ ಬದುಕಿದ್ದಾನೆ ಎಂದು ಭಾವಿಸಿದೆ. ಮಾಲೀಕರ ಬರುವಿಕೆಗಾಗಿ ಕಾದು ಕುಳಿತಿರುವುದನ್ನು ಗಮನಿಸಿ ತುಂಬಾ ಬೇಸರವಾಯಿತು. ಈ ವಿಷಯ ತಿಳಿದಾಗಿನಿಂದ ಅದಕ್ಕೆ ಊಟ ಕೊಟ್ಟರೂ ತಿನ್ನುವುದಿಲ್ಲ. ರಾಮನಿಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

    VIDEO | ವಿಶ್ವ ನಾಯಕರ ಮುಂದೆ ಜರ್ಮನ್ ವಿದೇಶಾಂಗ ಸಚಿವೆಗೆ ಚುಂಬಿಸಿದ ಸಚಿವ; ಟೀಕೆ ವ್ಯಕ್ತವಾಗುತ್ತಿದ್ದಂತೆ ಕ್ಷಮೆ ಕೇಳಿದ!

    ರಾಜ್ಯೋತ್ಸವ ರಸಪ್ರಶ್ನೆ - 29

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts