

ಬ್ರಸೆಲ್ಸ್: ವಿಶ್ವ ನಾಯಕರು ಭಾಗವಹಿಸಿದ್ದ ಶೃಂಗಸಭೆಯಲ್ಲಿ ಕ್ರೊಯೇಷಿಯಾದ ಸಚಿವರೊಬ್ಬರು ಮತ್ತೋರ್ವ ಮಹಿಳಾ ಸಚಿವೆಯೊಂದಿಗೆ ಅನುಚಿತವಾಗಿ ವರ್ತಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಜರ್ಮನ್ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್‌ಬಾಕ್ ಅವರಿಗೆ ಕ್ರೊಯೇಷಿಯಾದ ವಿದೇಶಾಂಗ ಸಚಿವ ಗೋರ್ಡನ್ ಗ್ರ್ಲಿಕ್ ರಾಡ್‌ಮನ್ ಅವರು ಕೆನ್ನೆಗೆ ಮುತ್ತು ಕೊಟ್ಟ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಟೀಕೆ ವ್ಯಕ್ತವಾಗುತ್ತಿದ್ದಂತೆ ಸಚಿವ ಕ್ಷಮೆ ಕೇಳಿದ್ದಾರೆ.
ಇತ್ತೀಚೆಗೆ ನಡೆದ ಯುರೋಪಿಯನ್ ಯೂನಿಯನ್ ಸಭೆ (EU ಮೀಟ್) ನಡೆಯಿತು. ನವೆಂಬರ್ 2 ರಂದು ಬರ್ಲಿನ್‌ನಲ್ಲಿ ನಡೆದ ಸಭೆಯಲ್ಲಿ ದೇಶಗಳ ಸಚಿವರು ಮತ್ತು ವಿವಿಧ ದೇಶಗಳ ವಿದೇಶಾಂಗ ಮಂತ್ರಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಲ್ಲ ಮುಖಂಡರು ಗ್ರೂಪ್ ಫೋಟೋಗೆ ಪೋಸ್ ನೀಡಿದರು.
ಕ್ರೊಯೇಷಿಯಾದ ವಿದೇಶಾಂಗ ಜರ್ಮನ್ ವಿದೇಶಾಂಗ ಸಚಿವೆ ಅನ್ನಾಲೆನಾ ಬೇರ್‌ಬಾಕ್ , ಕ್ರೊಯೇಷಿಯಾದ ವಿದೇಶಾಂಗ ಸಚಿವ ಗೋರ್ಡನ್ ಗ್ರ್ಲಿಕ್ ರಾಡ್‌ಮನ್ ಕೂಡ ಭಾಗವಹಿಸಿದ್ದರು. ಆದರೆ, ಗ್ರೂಪ್ ಫೋಟೋ ತೆಗೆಸಿಕೊಳ್ಳುವ ವೇಳೆ ಕ್ರೊಯೇಷಿಯಾದ ವಿದೇಶಾಂಗ ಸಚಿವ ಹಾಗೂ ಜರ್ಮನಿಯ ವಿದೇಶಾಂಗ ಸಚಿವೆ ಅನಾಲೆನಾ ಬಂದು ಕೈಕುಲುಕಿದರು. ನಂತರ ಸಚಿವರು ಈ ವೇಳೆ ಆಕೆ ಕೆನ್ನೆಗೆ ಮುತ್ತಿಟ್ಟರು. ಇದಕ್ಕೆ ಸಂಬಂಧಿಸಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಟೀಕೆಗಳ ಬಳಿಕ ಸಚಿವ ಕ್ಷಮೆಯಾಚಿಸಿದ್ದಾರೆ.
ರಾಡ್‌ಮನ್ ಮಾತನಾಡಿ, ಇದು “ಅನುಕೂಲಕರ ಕ್ಷಣ” ಎಂದು ಹೇಳಿದರು. “ನಾವು ಮಂತ್ರಿಗಳು ಯಾವಾಗಲೂ ಒಬ್ಬರನ್ನೊಬ್ಬರು ಆತ್ಮೀಯವಾಗಿ ಅಭಿನಂದಿಸುತ್ತೇವೆ. ಆ ಶುಭಾಶಯವು ಯಾರಿಗಾದರೂ ತಪ್ಪಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ. ಇದು ತುಂಬಾ ಒಳ್ಳೆಯ ಸಮ್ಮೇಳನವಾಗಿತ್ತು. ಆದ್ರೆ ಈ ದೃಶ್ಯ ವಿಚಿತ್ರವಾಗಿ ಹೊರಹೊಮ್ಮಿದೆ” ಎಂದು ಕ್ಷಮೆ ಕೇಳಿದ್ದಾರೆ.