VIDEO | ಕೇದಾರನಾಥ ದೇಗುಲದಲ್ಲಿ ಸರದಿ ಸಾಲಲ್ಲಿದ್ದ ಯಾತ್ರಾರ್ಥಿಗಳಿಗೆ ಚಹಾ ಹಂಚಿದ ರಾಹುಲ್ ಗಾಂಧಿ

rAhul gandhi
Published on

ಡೆಹ್ರಾಡೂನ್: ಉತ್ತರಾಖಂಡದ ಕೇದಾರನಾಥ ದೇಗುಲದಲ್ಲಿ ದೇವರ ದರ್ಶನಕ್ಕೆ ಕಾಯುತ್ತಿದ್ದ ಯಾತ್ರಾರ್ಥಿಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಚಹಾ ನೀಡಿದ ಪ್ರಸಂಗವೊಂದು ನಡೆದಿದೆ. ಇದರ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಉತ್ತರಾಖಂಡಕ್ಕೆ ತಮ್ಮ ಮೂರು ದಿನಗಳ ಪ್ರವಾಸವನ್ನು ಪ್ರಾರಂಭಿಸಿದ ರಾಹುಲ್​​ ಗಾಂಧಿಯವರು, ಬೆಟ್ಟದ ದೇಗುಲದಲ್ಲಿ ಪ್ರಾರ್ಥನೆ ಸಲ್ಲಿಸಲು ತಮ್ಮ ಸರದಿಗಾಗಿ ಕಾಯುತ್ತಿರುವ ಯಾತ್ರಾರ್ಥಿಗಳಿಗೆ ಚಹಾವನ್ನು ನೀಡುತ್ತಾ 'ಚಾಯ್ ಸೇವೆ' ಮಾಡಿದ್ದಾರೆ. ಜನಪ್ರಿಯ ನಾಯಕ ಸಾರ್ವಜನಿಕರೊಂದಿಗೆ ಸಂವಹನ ನಡೆಸುವುದನ್ನು ಕಂಡು ಆಶ್ಚರ್ಯಚಕಿತರಾದ ಭಕ್ತರು ಸೆಲ್ಫಿಗಾಗಿ ಮನವಿ ಮಾಡಿದ್ದಾರೆ.

ಸರ್, ನಾವು ನಿಮ್ಮನ್ನು ಟಿವಿಯಲ್ಲಿ ನೋಡಿದ್ದೇವೆ, ಇದೇ ಮೊದಲ ಬಾರಿಗೆ ನಾವು ನಿಮ್ಮನ್ನು ನಿಜವಾಗಿ ನೋಡುತ್ತಿದ್ದೇವೆ. ನಾನು ನಿಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಬಹುದೇ" ಎಂದು  ರಾಹುಲ್​​ ಗಾಂಧಿ ಅವರು ಗುಂಪಿನ ನಡುವೆ ಚಹಾವನ್ನು ಹಂಚುತ್ತಿರುವಾಗ ವ್ಯಕ್ತಿಯೊಬ್ಬರು ಕೇಳಿದರು. ರಾಹುಲ್​​  ಗಾಂಧಿ ಒಲ್ಲಿಗೆ ನೀಡಿ ಅವರ ಜತೆ ಫೊಟೋಗೆ ಪೋಸ್​​ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net