More

  ಭಾರತ ಸ್ವಾತಂತ್ರ್ಯ ಮುನ್ನವೇ ಕರ್ನಾಟಕ ಏಕೀಕರಣದ ಕೂಗು: ಎಚ್​.ಕೆ. ಪಾಟೀಲ

  ವಿಜಯವಾಣಿ ಸುದ್ದಿಜಾಲ, ಗದಗ

  ಬ್ರೀಟಿಷರ ಆಡಳಿತದಲ್ಲೇ, ಭಾರತ ಸ್ವತಂತ್ರಗೊಳ್ಳುವ ಮುನ್ನವೇ ಕನ್ನಡ ಭಾಷೀಕರು ಒಂದಾಗಬೇಕು, ಕರ್ನಾಟಕ ಏಕೀಕರಣ, ಮೈಸೂರು ರಾಜ್ಯ ಕರ್ನಾಟಕ ರಾಜ್ಯ ಆಗಬೇಕೆಂಬ ಕನಸು, ಕೂಗು, ಬೇಡಿಕೆಗೆ ವೇದಿಕೆಯಾಗಿತ್ತು ಎಂದು ಸಚಿವ ಎಚ್​.ಕೆ.ಪಾಟೀಲ ಹೇಳಿದರು. ಹೆಲ್ಪಿಂಗ್​ ಹ್ಯಾಂಡ್ಸ್​ ಪೌಂಡೇಶನ್​, ಅಪ್ಪುರಾಜ ಇವೆಂಟ್ಸ್​ ಕರ್ನಾಟಕ ಸಹಯೋಗದಲ್ಲಿ ನಗರದ ನಾಲ್ವಾಡ ಓಣಿಯಲ್ಲಿ ಇತ್ತೀಚೆಗೆ ಜರುಗಿದು ರಾಜ್ಯೋತ್ಸವದ ಸುವರ್ಣ ಸಂಭ್ರಮದ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. 10ನೇ ಶತಮಾನದಲ್ಲಿ ನಾಗವರ್ಮ, ದುರ್ಗಸಿಂಹ ಒಳಗೊಂಡು ಕುಮಾರವ್ಯಾಸನ ಕರ್ನಾಟ ಭಾರತ ಕಥಾ ಮಂಜರಿ, 1905 ರಲ್ಲಿಯೇ ಆಲೂರ ವೆಂಕಟರಾಯರು ಈ ಕುರಿತು ಧ್ವನಿ ಎತ್ತಿದ್ದರು. 1961ರಲ್ಲಿ ಗದುಗಿನಲ್ಲಿ ಕೆ.ಜಿ.ಕುಂದಣಗಾರ ಅಧ್ಯತೆಯಲ್ಲಿ ನಡೆದ 43ನೇ ಸಾಹಿತ್ಯ ಸಮ್ಮೇಳನ ಇದೆಲ್ಲದಕ್ಕೂ ಪುಷ್ಠಿ ನೀಡಿತು. ಅಂದಿನ ಕೃಷಿ ಮತ್ತು ಅರಣ್ಯ ಸಚಿವ ಕೆ.ಎಚ್​.ಪಾಟೀಲರು ಮಂಡಿಸಿದ ಠರಾವು ಆಗಿನ ರಾಜ್ಯದ ಸಿಎಂ ದೇವರಾಜ ಅರಸು, ಮೈಸೂರು ಮಹಾರಾಜರು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯವನ್ನಾಗಿಸಿದರು ಎಂದರು. ಮಣಕವಾಡದ ಅಭಿನವ ಮೃತ್ಯುಂಜಯ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಲಡ್ಡು ಮುತ್ಯಾ ಸಮ್ಮುಖ ವಹಿಸಿದ್ದರು.ಅಪ್ಪುರಾಜ ಭದ್ರಕಾಳಮ್ಮನಮಠ, ಮಂಜುನಾಥ ಚನ್ನಪ್ಪನವರ, ಮಲ್ಲಿಕಾರ್ಜುನ ಬೆಲ್ಲದ, ರಾಜಶೇಖರ ಮುಳಗುಂದ, ಮಲ್ಲಿಕಾರ್ಜುನ ಖಂಡಮ್ಮನವರ, ಶೀಲಾ ಪಾಟೀಲ, ಸಹದೇವ ಗಣಾಚಾರಿ, ಸಿ.ಆರ್​.ಹಾದಿಮನಿ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 22

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts