ಭ್ರೂಣಹತ್ಯೆ, ಮಹಿಳೆ ಸಾವು ಪ್ರಕರಣ; ಏಳು ಜನರ ವಿರುದ್ದ FIR ದಾಖಲು

baby
Published on

ಬಾಗಲಕೋಟೆ: ಸೋನಾಲಿ ಕದಂ ಗರ್ಭಪಾತ ಹಾಗೂ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರ ಪೊಲೀಸ್ ಠಾಣೆಯಲ್ಲಿ ಮೇ 29 ರಂದು ಪ್ರಕರಣ ದಾಖಲಾಗಿದ್ದು, 7 ಜನ ಆರೋಪಿಗಳ ಮೇಲೆ ಎಫ್ ಐ ಆರ್ ಮಾಡಲಾಗಿದೆ.

ಮಹಾರಾಷ್ಟ್ರದ ದೂದಗಾವ್ ನ ಸಂಜಯ ಗೌಳಿ, ಸಂಗೀತಾ ಸಂಜಯ ಗೌಳಿ, ವಿಜಯ ಸಂಜಯ ಗೌಳಿ, ಮಿರಜ್ ತಾಲೂಕಿನ ಕುಪ್ಪವಾಡ ಗ್ರಾಮದ ಡಾ.ಮಾರುತಿ ಬಾಬಸೋ ಖಿರಾತ್, ಸಾಂಗ್ಲಿ ತಾಲೂಕಿನ ಅಥಣಿ ನಗರದ ಡಾ.ಕೊತ್ವಾಲೆ, ಮಹಾಲಿಂಗಪುರದ ಕವಿತಾ ಚನ್ನಪ್ಪ ಬಾದನ್ನವರ ಹಾಗೂ ಮಿರಜ್ ತಾಲೂಕಿನ ಜೈಸಿಂಗಪುರದ ಒಬ್ಬ ವೈದ್ಯ ಸೇರಿಕೊಂಡು ಮೇ 27 ರಂದು ಬೆಳಗ್ಗೆ 11.30ಕ್ಕೆ ಮಹಾಲಿಂಗಪುರದ ಕವಿತಾ ಬಾದನ್ನವರ ಮನೆಯಲ್ಲಿ ಸೋನಾಲಿ ಅವರ ನಾಲ್ಕು ತಿಂಗಳು ಹೆಣ್ಣು ಭ್ರೂಣವನ್ನ ಗರ್ಭಪಾತ ಮಾಡಿ, ಅವಳು(ಸೋನಾಲಿ) ಅದೇ 12 ಗಂಟೆಗೆ ಸಾವನ್ನಪ್ಪಲು ಕಾರಣವಾಗಿದ್ದಾರೆಂದು ಎಫ್ ಐಆರ್ ನಲ್ಲಿ ನಮೂದಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net