ಸ್ಯಾಂಡಲ್​ವುಡ್ ನಿರ್ಮಾಪಕರ ನಡುವೆ ಗೋವಾದಲ್ಲಿ ಗಲಾಟೆ; ನಿರ್ಮಾಪಕ ಗಣೇಶ್​ ಹೇಳಿದ್ದಿಷ್ಟು

Producer Ganesh
Published on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ 90 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಅದ್ಧೂರಿ ಕಾರ್ಯಕ್ರಮ ನಡೆಸಲು ಮುಂದಾಗಿದ್ದು, ಅದರ ಪೂರ್ವಭಾವಿಯಾಗಿ ಕಾರ್ಯಕಾರಿಣಿ ಸಭೆ ನಡೆಸಲು ಫಿಲ್ಮ್​ ಚೇಂಬರ್​ ಅಧ್ಯಕ್ಷರು ಮತ್ತು ಸದಸ್ಯರು ಗೋವಾಗೆ ತೆರಳಿದ್ದರು. ಈ ವೇಲೆ ನಿರ್ಮಾಪಕ ನಡುವೆ ಗಲಾಟೆಯಾಗಿದ್ದು, ಮಾರಣಾಂತಿಕ ಹಲ್ಲೆಯಾಗಿದೆ.

ನಿರ್ಮಾಪಕ ರಥವಾರ ಮಂಜು ಹಾಗೂ ಸತೀಶ್​ ಆರ್ಯನ್​ ನಡುವೆ ವಿಚಾರ ಒಂದಕ್ಕೆ ಗಲಾಟೆ ಶುರುವಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಜಗಳ ಬಿಡಿಸಲು ಹೋದವರ ಮೇಲೆ ಹಲ್ಲೆಯಾಗಿದ್ದು, ನಿರ್ಮಾಪಕ ಗಣೇಶ್​ ಹಾಗೂ ಫಿಲ್ಮ್​ ಚೇಂಬರ್​ ಅಧ್ಯಕ್ಷ ಸುರೇಶ್​ ಅವರಿಗೆ ಗಂಭೀರ ಗಾಯವಾಗಿದೆ.

Film Chamber

ಈ ಕುರಿತು ಮಾತನಾಡಿರುವ ನಿರ್ಮಾಪಕ ಗಣೇಶ್​, ಸಿನಿ 90 ಕಾರ್ಯಕ್ರಮ ಹೇಗೆ ಮಾಡ್ಬೇಕು ಅನ್ನೋ ಬಗ್ಗೆ ಚರ್ಚೆ ಮಾಡೋಕೆ ಗೋವಾಗೆ ಹೋಗಿದ್ವಿ. ಸತೀಶ್ ಆರ್ಯ ಹಾಗೂ ರಥಾವರ ಮಂಜು ನಡುವೆ ಗಲಾಟೆ ಶುರುವಾಯ್ತು. ಅವ್ರನ್ನ ಬಿಡಿಸೋಕೆ ಅಂತ ನಾನು ಹೋಗಿದ್ದು ಸತೀಶ್ ನನಗೆ ಫೋರ್ಕ್​ನಿಂದ ಚುಚ್ಚಿದರು. ಫಿಲ್ಮ್​ ಚೇಂಬರ್​ ಅಧ್ಯಕ್ಷ ಸುರೇಶ್​ ಅವರ ತೆಲಗೂ ಗಾಯವಾಗಿದೆ. ಸಿನಿಮೀಯ ಶೈಲಿಯಲ್ಲಿ ಹಲ್ಲೆ ಮಾಡಿದ್ರು, ಗೋವಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬೆಂಗಳೂರಿಗೆ ವಾಪಾಸ್ಸಾದೆ.

ರಥಾವರ ಮಂಜುನಾಥ್​ಗೆ ಗಂಭೀರ ಗಾಯ ಆಗಿದೆ. ಸತೀಶ್​ನಿಂದ ಕೆಟ್ಟ ಹೆಸರು ಬರಬಾರದು ಎಂದು ಕಂಪ್ಲೇಂಟ್​ ಕೊಟ್ಟಿಲ್ಲ. ಸತೀಶ್ ಹೊಡೆದ ತಕ್ಷಣ ಎಸ್ಕೇಪ್ ಆಗಿದ್ದಾರೆ. ಸತೀಶ್ ಗಲಾಟೆ ಮಾಡಿರುವ ಸಿಸಿಟಿವಿ ಫೂಟೇಜ್ ಇದೆ. ಕುಡಿದ ಅಮಲಿನಲ್ಲಿ ಏನು ಮಾಡಿದ್ದನೋ ಆತನಿಗೆ ಗೊತ್ತಿಲ್ಲ. ಪೆಟ್ಟು ಬಿದ್ದಿರೋ ಕಾರಣ ಕಣ್ಣು ಮಂಜಾಗಿದೆ, ಕಣ್ಣು ಕಳೆದುಕೊಳ್ಳೋ ಸಂದರ್ಭ ಸಹ ಬರ್ತಿತ್ತು. ಎನ್ ಎಂ ಸುರೇಶ್ ದುಡ್ಡಲ್ಲಿ ಗೋವಾ ಹೋಗಿದ್ದು. ಚೇಂಬರ್ ದುಡ್ಡು ಒಂದು ಪೈಸೆ ಬಳಸಿಲ್ಲ ಎಂದು ಹಲ್ಲೆಗೊಳಗಾದ ನಿರ್ಮಾಪಕ ಗಣೇಶ್​ ಸ್ಪಷ್ಟನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net