More

    ಸರಗಳ್ಳರನ್ನು ಸಿನಿಮೀಯ ಶೈಲಿಯಲ್ಲಿ ಹಿಡಿದ ಬಸ್​ ಚಾಲಕ; ವಿಡಿಯೋ ವೈರಲ್

    ಹರಿಯಾಣ: ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಈ ಮಧ್ಯೆ ಕಳ್ಳರು ತಮ್ಮ ಕೈಚಳಕವನ್ನು ತೋರುತ್ತಿದ್ದಾರೆ. ದಿನ ಕಳೆದಂತೆ ಚೈನ್​ ಸ್ನ್ಯಾಚಿಂಗ್​ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಹರಿಯಾಣದಲ್ಲಿ ಘಟನೆಯೊಂದು ನಡೆದಿದೆ. ಮಹಿಳೆಯೊಬ್ಬರ ಸರ ಕದ್ದು ಪರಾರಿಯಾಗುತ್ತಿದ್ದ ಕಳ್ಳರನ್ನು ಸಿನಿಮೀಯ ಶೈಲಿಯಲ್ಲಿ ಬಸ್​ ಚಾಲಕ ಹಿಡಿದಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ವೈರಲ್​ ಆಗಿರುವ ವಿಡಿಯೋ ನೋಡುವುದಾದರೆ, ಅಂಗಡಿ ಒಂದರ ಬಳಿ ಬೈಕ್​ನಲ್ಲಿ ತಯಾರಾಗಿ ನಿಂತಿರುವ ಮುಸುಕುಧಾರಿಯೊಬ್ಬ ತನ್ನ ಸಹಚರನಿಗಾಗಿ ಕಾಯುತ್ತಿರುತ್ತಾನೆ. ಈ ವೇಳೆ ಇನ್ನೋರ್ವ ಆರೋಪಿಯು ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸರವನ್ನು ಎಳೆದೊಯ್ದು ಗಾಡಿಯಲ್ಲಿ ಕೂರುತ್ತಾನೆ. ದೂರದಿಂದ ಇದನ್ನು ಗಮನಿಸಿದ ಹರಿಯಾಣ ಸಾರಿಗೆ ಸಂಸ್ಥೆಯ ಬಸ್​ ಚಾಲಕ ವೇಗವಾಗಿ ಬಂದು ಬೈಕ್​ಗೆ ಡಿಕ್ಕಿ ಹೊಡೆದು ಅವರ ಯೋಜನೆಯನ್ನು ವಿಫಲಗೊಳಿಸುತ್ತಾರೆ.

    ಇದನ್ನೂ ಓದಿ: ವೈರಲ್​ ಆಗುವ ಭರದಲ್ಲಿ ಕಾರನ್ನು ಚಲಾಯಿಸುವ ಬದಲು ರೂಫ್​ ಏರಿದ; ಮುಂದೆ ನಡೆದಿದ್ದು ಮಾತ್ರ…

    ಕೆಳಗೆ ಬಿದ್ದರೂ ಸುಮ್ಮನಾಗದ ಆರೋಪಿಗಳು ಓಡಲು ಶುರು ಮಾಡುತ್ತಾರೆ. ಇದನ್ನು ಕಂಡು ಸ್ಥಳೀಯರು ಅವರ ಬೆನ್ನಟ್ಟಲು ಶುರು ಮಾಡುತ್ತಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ವ್ಯಾಪಕ ಮೆಚ್ಚುಗೆಗೆ ಗುರಿಯಾಗಿದೆ. ಹಲವರು ಸಾರಿಗೆ ಸಂಸ್ಥೆಯ ಚಾಲಕನಿಗೆ ಸರ್ಕಾರ ಸೂಕ್ತ ಬಹುಮಾನ ನೀಡಿ ಗೌರವಿಸಬೇಕು ಎಂದು ಕಮೆಂಟ್​ ಮೂಲಕ ಆಗ್ರಹಿಸಿದ್ದಾರೆ.

    See also  ಯತ್ನಾಳ್​ ಆರೋಪದ ಬಗ್ಗೆ ರಾಮಲಿಂಗಾರೆಡ್ಡಿ ರಿಯಾಕ್ಷನ್​

    ಇತ್ತ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪೊಲೀಸರ ಕುರಿತು ಜನ ಕಿಡಿಕಾರಿದ್ದು, ಕಳೆದ ಕೆಲ ದಿನಗಳಿಂದ ರಾಜ್ಯಾದ್ಯಂತ ಸರಗಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಿಡಿಕಾರಿದ್ದಾರೆ. ಇತ್ತ ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts