ಈಗಷ್ಟೇ ಆರಂಭವಾಗಿದೆ ಮಾಡುವುದು ಸಾಕಷ್ಟಿದೆ; ಕೋಚ್​ ವದಂತಿಯ ಕುರಿತು ಗೌತಮ್​ ಗಂಭೀರ್​ ನೀಡಿದ ಹೇಳಿಕೆ ವೈರಲ್

Shahrukh Gambhir
Published on

ನವದೆಹಲಿ: ತಮ್ಮ ಸಿಡುಕು ಮನೋಭಾವದಿಂದಲೇ ಕ್ರೀಡಾ ವಲಯದಲ್ಲಿ ಹೆಚ್ಚು ಖ್ಯಾತಿ ಪಡೆದಿರುವ ಗೌತಮ್​ ಗಂಭೀರ್​ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಐಪಿಎಲ್​ ಶುರುವಾಗುವುದಕ್ಕೂ ಮುನ್ನ ಸಂಸದರ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣಾ ರಾಜಕೀಯಕ್ಕೆ ನಿವೃತ್ತಯಿ ಘೋಷಿಸಿದ ಗೌತಮ್​ ಬಳಿಕ ಕೆಕೆಆರ್​ ಮೆಂಟರ್​ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಇದಾದ ಬಳಿಕ ಅವರು ಕೆಕೆಆರ್​ ತಂಡಕ್ಕೆ ಕಪ್​ ಗೆಲ್ಲಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇತ್ತ ಟೀಮ್​ ಇಂಡಿಯಾ ಲೆಜೆಂಡರಿ ಆಟಗಾರ ಗೌತಮ್ ಗಂಭೀರ್ ತಮ್ಮ ಕ್ರೇಜ್ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆಟಗಾರರಲ್ಲಿರುವ ಪ್ರತಿಭೆಯನ್ನು ಹೊರತಂದು ಅವರಿಗೆ ಬೇಕಾದ ಬೆಂಬಲ ನೀಡುವ ಮೂಲಕ ಗಂಭೀರ್ ಕೆಕೆಆರ್​ಗೆ ಹೊಸ ಹೀರೋ ಎನಿಸಿಕೊಂಡಿದ್ದಾರೆ. 17 ನೇ ಆವೃತ್ತಿಯಲ್ಲಿ ಕೆಕೆಆರ್​ ಕಪ್​ ಗೆದ್ದ ಬೆನ್ನಲ್ಲೇ ಅವರು ಟೀಮ್​ ಇಂಡಿಯಾ ಕೋಚ್​ ಆಗುತ್ತಾರೆ ಎಂಬ ವಿಚಾರ ಕ್ರೀಡಾ ವಲಯದಲ್ಲಿ ವ್ಯಾಪಕವಾಗಿ ಹರಿದಾಡಲು ಶುರು ಮಾಡಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೌತಮ್​ ಗಂಭೀರ್​ ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ.

ಈ ಕುರಿತು ಮಾತನಾಡಿರುವ ಗೌತಮ್​, ನಾವು ಮೂರನೇ ಬಾರಿಗೆ ಐಪಿಎಲ್​ ಟ್ರೋಫಿ ಗೆಲ್ಲಿಸಿಕೊಟ್ಟೆ ಎಂಬ ಕಾರಣಕ್ಕೆ ಎಲ್ಲರೂ ಈ ಮಾತನ್ನು ಹೇಳುತ್ತಿದ್ದಾರೆ. ಆದರೆ, ನನ್ನ ಪ್ರಕಾರ ನಾವು ಸಿಎಸ್​ಕೆ ಹಾಗೂ ಮುಂಬೈಗಿಂತ ಟ್ರೋಫಿಗಳ ಸಂಖ್ಯೆಯಲ್ಲಿ ಹಿಂದೆ ಇದ್ದು, ಆ ಹಸಿವು ನನ್ನನ್ನು ಹೆಚ್ಚಾಗಿ ಕಾಡುತ್ತಿದೆ. ನಾವು ಇನ್ನಷ್ಟು ಐಪಿಎಲ್​ ಟ್ರೋಫಿಗಳನ್ನು ಗೆಲ್ಲಬೇಕಿದ್ದು, ಇನ್ನಷ್ಟು ಪರಿಶ್ರಮ ಹಾಕಬೇಕಿದೆ. ನನ್ನ ಮುಂದಿನ ಗುರಿ ಎಂದರೆ ಕೆಕೆಆರ್​ ತಂಡವನ್ನು ಐಪಿಎಲ್​ನಲ್ಲಿ ಅತ್ಯಂತ ಯಶಸ್ವಿ ತಂಡವನ್ನಾಗಿ ಮಾಡುವುದು. ಅದರ ಪ್ರಯಾಣ ಈಗಷ್ಟೇ ಆರಂಭವಾಗಿದೆ. ಮಾಡುವುದು ಸಾಕಷ್ಟಿದೆ ಎಂದು ಗೌತಮ್​ ಗಂಭೀರ್​ ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net