ಭಾರತೀಯ ಸೇನೆಯ ಯೋಧನ ಮೇಲೆ ಹಲ್ಲೆ, ಬೆನ್ನ ಮೇಲೆ ಪಿಎಫ್​ಐ ಎಂದು ಬರೆದ ದುಷ್ಕರ್ಮಿಗಳು!

Soldier
Published on

ತಿರುವನಂತಪುರ: ಭಾರತೀಯ ಸೇನೆಯ ಯೋಧನ ಮೇಲೆ ಹಲ್ಲೆ ನಡೆಸಿ, ಆತನ ಬೆನ್ನಿನ ಮೇಲೆ ಪಿಎಫ್​ಐ ಎಂದು ಬರೆದ ಪ್ರಕರಣವೊಂದು ನಡೆದಿದೆ. ಕೇರಳದ ಕೊಲ್ಲಂ ಎಂಬಲ್ಲಿ ಸೋಮವಾರ ಈ ಪ್ರಕರಣ ನಡೆದಿದೆ.

ಹಲ್ವೀಲ್ ಶೈನ್ ಎಂಬಾತ ಹಲ್ಲೆಗೀಡಾದ ಸೈನಿಕ. ಈ ಯೋಧನನ್ನು ಮನೆಯಿಂದ ಹೊರಗೆಳೆದು ತಂದ ದುಷ್ಕರ್ಮಿಗಳು ಕೈಗಳನ್ನು ಕಟ್ಟಿ, ಬಾಯಿಗೆ ಟೇಪ್ ಅಂಟಿಸಿ ಥಳಿಸಿ ಒದ್ದು ವಿಕೃತಿ ಮೆರೆದಿದ್ದರು ಎಂಬುದು ತಿಳಿದುಬಂದಿದೆ. ಹಲ್ಲೆಗೀಡಾದ ಯೋಧ ರಾಜಸ್ಥಾನದಲ್ಲಿರುವ ಸೇನೆಯ ಎಲೆಕ್ಟ್ರಾನಿಕ್ಸ್ ಆ್ಯಂಡ್ ಮೆಕ್ಯಾನಿಕಲ್ ಕೇಡರ್​ನಲ್ಲಿ ಕರ್ತವ್ಯದಲ್ಲಿದ್ದವರು ಎಂದು ತಿಳಿದುಬಂದಿದೆ.

ಬಳಿಕ ಯೋಧನ ಬೆನ್ನಿನ ಮೇಲೆ ಪಿಎಫ್​ಐ (ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ) ಎಂಬುದಾಗಿ ಬರೆದಿದ್ದರು. ದುಷ್ಕರ್ಮಿಗಳ ತಂಡದಲ್ಲಿ ಆರು ಮಂದಿ ಇದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಫ್​ಐ ನಿಷೇಧಿತ ಸಂಘಟನೆಯಾಗಿದ್ದು, ಈ ಹಲ್ಲೆಗೆ ಕಾರಣ ಏನು ಎಂಬುದು ಇನ್ನಷ್ಟೇ ತಿಳಿದು ಬರಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net